ಎಂ.ಕೆ.ಸವಿತಾ ಮತ್ತೆ ಮುಡಾ ಕಾರ್ಯದರ್ಶಿ
ಮೈಸೂರು

ಎಂ.ಕೆ.ಸವಿತಾ ಮತ್ತೆ ಮುಡಾ ಕಾರ್ಯದರ್ಶಿ

June 9, 2019

ಮೈಸೂರು: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾ ವಣೆಯಾಗಿದ್ದವರೂ ಸೇರಿದಂತೆ ರಾಜ್ಯ ದಾದ್ಯಂತ ಒಟ್ಟು 91 ಕೆಎಎಸ್ ಅಧಿಕಾರಿ ಗಳನ್ನು ಸರ್ಕಾರ ಶುಕ್ರವಾರ ಸಾಮೂ ಹಿಕವಾಗಿ ವರ್ಗಾವಣೆ ಮಾಡಿ, ಆದೇಶ ಹೊರಡಿಸಿದೆ. ಮಂಗಳೂರಿನ ಬೈಕಂ ಪಾಡಿಯ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಎಂ.ಕೆ.ಸವಿತಾರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಮೈಸೂರು ಅಪರ ಜಿಲ್ಲಾಧಿಕಾರಿ ಯಾಗಿ ಬಿ.ಆರ್.ಪೂರ್ಣಿಮಾ, ಶಿವ ಮೊಗ್ಗ ಅಪರ ಜಿಲ್ಲಾಧಿಕಾರಿಯಾಗಿ ಜಿ. ಅನುರಾಧ, ಎಂ.ಜೆ.ರೂಪಾ ಅವರನ್ನು ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇ ಶಿಕ ಆಯುಕ್ತರಾಗಿ, ಟಿ.ಯೋಗೇಶ ಅವರನ್ನು ಮಂಡ್ಯ ಅಡಿಷನಲ್ ಡಿಸಿ ಯಾಗಿ ವರ್ಗಾವಣೆ ಮಾಡಲಾಗಿದೆ.

ಮೈಸೂರು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಮೈ.ವಿ.ಶಾಂತರಾಜು ಅವರನ್ನು ಖೂಡಾ ಎಸ್ಟೇಟ್ ಅಧಿಕಾರಿ ಯಾಗಿ, ಟಿ.ವೆಂಕಟೇಶರನ್ನು ಮೈಸೂರಿನ ಪರಂಪರೆ ಇಲಾಖೆ ಆಯುಕ್ತರಾಗಿ, ಹುಣ ಸೂರು ಉಪ ವಿಭಾಗಾಧಿಕಾರಿ ಹೆಚ್.ಜಿ. ಚಂದ್ರಶೇಖರ್‍ಯ್ಯರನ್ನು ಮಧುಗಿರಿ ಉಪ ವಿಭಾಗಾಧಿಕಾರಿಯಾಗಿ ವರ್ಗಾಯಿಸಲಾ ಗಿದೆ. ಹುಣಸೂರು ಉಪವಿಭಾಗಾಧಿಕಾರಿ ಯಾಗಿ ಬಿ.ಎನ್.ವೀಣಾ, ದಾವಣಗೆರೆ ಮಹಾನಗರಪಾಲಿಕೆ ಉಪ ಆಯುಕ್ತರಾಗಿ ಮುಡಾ ಕಾರ್ಯದರ್ಶಿ ರವೀಂದ್ರ ಬಿ. ಮಲ್ಲಾಪುರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆರ್.ಚಂದ್ರಯ್ಯರನ್ನು ಹಿರಿ ಯೂರಿನ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ, ಮೈಸೂರು ಮಹಾನಗರ ಪಾಲಿಕೆ ವಲಯ ಆಯುಕ್ತೆ ಎಸ್.ಕುಸುಮ ಕುಮಾರಿಯನ್ನು ಕಬಿನಿ ಯೋಜನೆ ವಿಶೇಷ ಭೂಸ್ವಾಧೀನಾಧಿ ಕಾರಿಯಾಗಿ, ಗೀತಾ ಹುಡೇದರನ್ನು ನಗರಪಾಲಿಕೆ ವಲಯ ಆಯುಕ್ತರನ್ನಾಗಿ ಹಾಗೂ ಮಂಡ್ಯ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕರನ್ನಾಗಿ ಗಣಪತಿ ನಾಯಕರನ್ನು ವರ್ಗಾವಣೆ ಮಾಡ ಲಾಗಿದೆ. ಎಲ್ಲಾ ಕೆಎಎಸ್ ಅಧಿಕಾರಿಗಳೂ ಸಹ ಸೋಮವಾರ ನಿಯೋಜಿತ ಸ್ಥಳ ಗಳಲ್ಲಿ ಅಧಿಕಾರ ವಹಿಸಿಕೊಳ್ಳುವರು. ಮೈಸೂರು ತಾಲೂಕು ತಹಶೀಲ್ದಾರ್ ಹುದ್ದೆಗೆ ಸ್ಪಷ್ಟ ಆದೇಶವಿಲ್ಲದ ಕಾರಣ ಸ್ಪಷ್ಟನೆ ಕೋರಿ ಮೈಸೂರು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದು, ಪ್ರತ್ಯೇಕ ಆದೇಶಕ್ಕಾಗಿ ನಿರೀಕ್ಷಿಸಲಾಗಿದೆ.

Translate »