ಮೈಸೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದವ ರಿಗೆ ತುಂಡು ಗುತ್ತಿಗೆ ನೀಡುವ ಸಂಬಂಧ ಸರ್ಕಾರದ ಗಮನ ಸೆಳೆಯುವಂತೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರಿಗೆ ಸಂಘದ ವತಿಯಿಂದ ಶನಿವಾರ ಮನವಿ ಸಲ್ಲಿಸಲಾಯಿತು. ಮೈಸೂರಿನ ಜೆಕೆ ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವದ ಭವನ ದಲ್ಲಿ ಸಂಘದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಸ್ಥಳೀಯರಿಗೆ ಸರ್ಕಾರದ ವಿದ್ಯುತ್ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುವ…
ಎಂ.ಕೆ.ಸವಿತಾ ಮತ್ತೆ ಮುಡಾ ಕಾರ್ಯದರ್ಶಿ
June 9, 2019ಮೈಸೂರು: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾ ವಣೆಯಾಗಿದ್ದವರೂ ಸೇರಿದಂತೆ ರಾಜ್ಯ ದಾದ್ಯಂತ ಒಟ್ಟು 91 ಕೆಎಎಸ್ ಅಧಿಕಾರಿ ಗಳನ್ನು ಸರ್ಕಾರ ಶುಕ್ರವಾರ ಸಾಮೂ ಹಿಕವಾಗಿ ವರ್ಗಾವಣೆ ಮಾಡಿ, ಆದೇಶ ಹೊರಡಿಸಿದೆ. ಮಂಗಳೂರಿನ ಬೈಕಂ ಪಾಡಿಯ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಎಂ.ಕೆ.ಸವಿತಾರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಮೈಸೂರು ಅಪರ ಜಿಲ್ಲಾಧಿಕಾರಿ ಯಾಗಿ ಬಿ.ಆರ್.ಪೂರ್ಣಿಮಾ, ಶಿವ ಮೊಗ್ಗ ಅಪರ ಜಿಲ್ಲಾಧಿಕಾರಿಯಾಗಿ ಜಿ. ಅನುರಾಧ, ಎಂ.ಜೆ.ರೂಪಾ ಅವರನ್ನು ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇ…
ಸಿಎಂ ಮಾಧ್ಯಮ ವಿರೋಧಿ ನೀತಿ ವಿರುದ್ಧ ಮೈಸೂರು ರಕ್ಷಣಾ ವೇದಿಕೆ ಪ್ರತಿಭಟನೆ
June 9, 2019ಮೈಸೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮ ವಿರೋಧಿ ನೀತಿ ಅನುಸರಿಸುವ ಮೂಲಕ ಮಾಧ್ಯಮದ ಸ್ವಾತಂತ್ರ್ಯ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಪತ್ರಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾ ಲಯದ ಎದುರಿನ ಉದ್ಯಾನವನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮುಖ್ಯ ಮಂತ್ರಿಗಳು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರೆ ಅಂತಹ ಪತ್ರಕರ್ತರ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಡೆಗಳನ್ನು…
ಮೈಸೂರಲ್ಲಿ ಕಾರು ಎಕ್ಸ್‍ಚೇಂಜ್ ಕಂ ಲೋನ್ ಮೇಳ ಆರಂಭ
June 9, 2019ಮೈಸೂರು: ಸ್ಟಾರ್ ಹುಂಡೈ ಅವರ ಕಾರು ಎಕ್ಸ್‍ಚೇಂಜ್ ಮತ್ತು ಸಾಲ ಮೇಳವು ಇಂದಿನಿಂದ ಮೈಸೂರಿನ ಅರಸು ಬೋರ್ಡಿಂಗ್ ಶಾಲಾ ಆವರಣದಲ್ಲಿ ಆರಂಭವಾಯಿತು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಎರಡು ದಿನಗಳ ಮೇಳವನ್ನು ಉದ್ಘಾಟಿಸಿದರು. ಇದೇ ವೇಳೆ ಹುಂಡೈ ಕಂಪನಿಯ ಹೊಸ ಹುಂಡೈ ವೆನ್ಯೂ ಕಾರನ್ನೂ ಶಾಸಕರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಮೇಳದಲ್ಲಿ ಹುಂಡೈ ಮೋಟಾರ್ಸ್ ವಲಯ ವ್ಯವಸ್ಥಾಪಕ (ದಕ್ಷಿಣ) ನೀರಜ್ ಚೌಧುರಿ, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ (ಮಾರ್ಕೆಂ ಟಿಂಗ್) ಪವನ್, ಸೇಲ್ಸ್ ಮುಖ್ಯಸ್ಥ ನಾಗೇಶ್, ಅಸಿಸ್ಟಂಟ್ಸ್ ಸೇಲ್ಸ್…
ರೈಲ್ವೆ ನಿಲ್ದಾಣಕ್ಕೆ 2 ದಿನ ವಾಹನ ಪ್ರವೇಶ ನಿಷೇಧ
June 9, 2019ಮೈಸೂರು: ರಸ್ತೆ ಡಾಂಬರೀಕರಣ ಕಾಮಗಾರಿಗಾಗಿ ಇಂದಿನಿಂದ ಮೈಸೂರಿನ ರೈಲು ನಿಲ್ದಾಣದ ಮುಖ್ಯ ದ್ವಾರವನ್ನು ಎರಡು ದಿನಗಳವರೆಗೆ ಬಂದ್ ಮಾಡಲಾಗಿದೆ. ಪರಿಣಾಮ ಪ್ರಯಾಣಿಕರನ್ನು ಕರೆದೊಯ್ಯುವ ಆಟೋ, ಟ್ಯಾಕ್ಸಿ, ಖಾಸಗಿ ವಾಹನಗಳು ರೈಲು ನಿಲ್ದಾಣದ ಒಳಗೆ ಹೋಗದ ಕಾರಣ ಬಾಬು ಜಗ ಜೀವನರಾಂ ವೃತ್ತ (ರೈಲ್ವೇ ಸ್ಟೇಷನ್ ಸರ್ಕಲ್)ದಲ್ಲಿ ನಿಂತು ಪಿಕ್‍ಅಪ್ ಮಾಡುತ್ತಿ ರುವುದರಿಂದ ಸ್ಥಳದಲ್ಲಿ ಆಗಿಂದಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದೆ. ಬೆಂಗಳೂರು, ನಂಜನಗೂಡು, ಹಾಸನ ಕಡೆಯಿಂದ ರೈಲುಗಳು ಬಂದಾಗ ಒಟ್ಟಿಗೇ ಪ್ರಯಾಣಿಕರು ಬರುವುದರಿಂದ ಅವರನ್ನು ಕರೆದೊಯ್ಯಲು ವಾಹನಗಳು ಬರುವಾಗ…
ಮರಳು ಮಾಫಿಯಾ ಹತ್ತಿಕ್ಕಲು ರಾಜ್ಯದಲ್ಲಿ ‘ಸ್ಯಾಂಡ್ ಬಜಾರ್’ ಪ್ರಾರಂಭ
June 8, 2019ಬೆಂಗಳೂರು: ರಾಜ್ಯಾದ್ಯಂತ ಸ್ಯಾಂಡ್ ಬಜಾರ್ ಪ್ರಾರಂಭಿಸುವು ದಾಗಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಇಂದಿಲ್ಲಿ ತಿಳಿಸಿದ್ದಾರೆ. ಗ್ರಾಹಕರಿಗೆ ಕಡಿಮೆ ದರ ಮತ್ತು ಸುಲಭವಾಗಿ ಮನೆ ಬಾಗಿಲಿಗೆ ಮರಳು ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಮರಳು ದುರ್ಬಳಕೆ ತಡೆಯಲು ಪ್ರಾಯೋಗಿಕವಾಗಿ ಮಂಗಳೂರಿ ನಲ್ಲಿ ಆ್ಯಪ್ ಮೂಲಕ ಮರಳು ವಿಲೇವಾರಿ ಮಾಡುವ ಬಜಾರ್ ಪ್ರಾರಂಭಿಸಿದ್ದು, ಇದು ಯಶಸ್ವಿಯಾಗಿದೆ. ಇದನ್ನೇ ಆಧಾರ ವಾಗಿಟ್ಟು ಕೊಂಡು ರಾಜ್ಯದ ಎಲ್ಲಾ ಕೇಂದ್ರಗಳಲ್ಲೂ ಸ್ಯಾಂಡ್ ಬಜಾರ್‍ಗಳನ್ನು ಪ್ರಾರಂಭಿಸುತ್ತೇವೆ ಎಂದರು. ಮರಳು ಪಡೆಯಬೇಕಾದವರು…
ಮೈಸೂರು-ಬೆಂಗಳೂರುಹೊಸ ವಿಮಾನ ಹಾರಾಟ
June 8, 2019ಮೈಸೂರು: ಬಹು ನಿರೀಕ್ಷಿತ ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಇಂದಿನಿಂದ ಆರಂಭವಾಯಿತು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ಪ್ರಯಾಣಿಕ ರಿಗೆ ಶುಭ ಕೋರುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ಪ್ರವಾಸೋಧ್ಯಮ ಸಚಿವ ಸಾ.ರಾ. ಮಹೇಶ್ ಹಾಗೂ ಸಂಸದ ಪ್ರತಾಪ್‍ಸಿಂಹ ಅವರು ಏರ್ ಅಲಯನ್ಸ್ ಸಂಸ್ಥೆಯ ಎಟಿಆರ್. 72 ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ಕೇಂದ್ರ ಸರ್ಕಾರವು ಉಡಾನ್ ಯೋಜನೆಯಡಿ ಮೈಸೂರು ವಿಮಾನ ನಿಲ್ದಾಣ ದಿಂದ ಪ್ರಾದೇಶಿಕ ಸಂಪರ್ಕ ಸೇವೆಗೆ ಅನು…
ಮೈಸೂರು ವಿವಿ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸ
June 8, 2019ಮೈಸೂರು: ಸ್ನಾತ ಕೋತ್ತರ ಪದವಿ ಇಂಗ್ಲಿಷ್ ಅಧ್ಯಯನ ವಿಭಾಗಕ್ಕೆ ದಾಖಲಾಗಲು ನಿಗದಿಪಡಿಸಿ ರುವ ಅಂಕ ಕುರಿತ ವಿಚಾರ ಶುಕ್ರವಾರ ಮೈಸೂರಿನ ಕ್ರಾಫರ್ಡ್ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಮೂರನೇ ಸಾಮಾನ್ಯ ಸಭೆ ಯಲ್ಲಿ ವಿಸ್ತೃತ ಚರ್ಚೆಗೆ ಗ್ರಾಸವಾಯಿತು. ಸ್ನಾತಕೋತ್ತರ ಕೇಂದ್ರದಲ್ಲಿ ಇಂಗ್ಲಿಷ್ ಅಧ್ಯಯನ ವಿಭಾಗಕ್ಕೆ ಪ್ರವೇಶ ಪಡೆಯಲು ನಿಗದಿಪಡಿಸಿರುವ ಕಡಿಮೆ ಅಂಕಗಳ ಕಾರಣ ದಿಂದಾಗಿ ಪರಿಶಿಷ್ಟ ಜಾತಿ ಮತ್ತು ವರ್ಗ ಗಳ ವಿದ್ಯಾರ್ಥಿಗಳಿಗೆ ಅನಾನುಕೂಲ ವಾಗಿದ್ದು, ಇದರಿಂದಾಗಿ ಪ್ರವೇಶ ಕನಿಷ್ಟ ಸಂಖ್ಯೆಗೆ ಇಳಿದಿದೆ. ಈ…
ಜೂ.9ರಂದು ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿ ಗಣತಿ
June 8, 2019ಮೈಸೂರು: ಪ್ರಸಿದ್ಧ ಪಕ್ಷಿಧಾಮವಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಧಾಮದಲ್ಲಿ ಜೂ.9ರಂದು ಪಕ್ಷಿಗಳ ಗಣತಿ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, 12 ಮಂದಿ ಪಕ್ಷಿ ತಜ್ಞರು ಹಾಗೂ 30 ನುರಿತ ಸಿಬ್ಬಂದಿಗಳನ್ನು ಗಣತಿಗೆ ಬಳಸಿಕೊಳ್ಳಲು ನಿಯೋಜಿಸಿದೆ. ಪ್ರತಿ ವರ್ಷ ಪಕ್ಷಿಗಳ ಗಣತಿ ನಡೆಸಿ ಪಕ್ಷಿ ಧಾಮದಲ್ಲಿರುವ ಪಕ್ಷಿಗಳ ನಿಖರ ಅಂಕಿ ಅಂಶ, ಸಂತಾನೋತ್ಪತ್ತಿಗೆ ಪೂರಕ ವಾತಾ ವರಣ, ಹೊಸ ಪಕ್ಷಿಗಳ ಆಗಮನ ಸೇರಿ ದಂತೆ ಇನ್ನಿತರ ವಿಷಯಗಳ ಬಗ್ಗೆ ಅವ ಲೋಕಿಸಿ ವರದಿ ಸಿದ್ದಪಡಿಸಲಾಗುತ್ತದೆ. ಈ…
ನಿಫಾ ವೈರಸ್; ಮೈಸೂರು ಜಿಲ್ಲೆ ಜನರಿಗೆ ಆತಂಕ ಬೇಡ
June 8, 2019ಮೈಸೂರು: ಕೇರಳ ದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಎಲ್ಲೆಡೆ ಜಾಗೃತಿ ಕಾಯಕ್ರಮ ನಡೆಸುವುದರೊಂದಿಗೆ ಕೇರಳದಿಂದ ಬರುವ ಪ್ರವಾಸಿಗರನ್ನು ತಪಾಸಣೆಗೊಳ ಪಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ವೆಂಕಟೇಶ್ ತಿಳಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ನಿಫಾ ವೈರಸ್ ಸೋಂಕಿತರು ಕಂಡು ಬಂದಿಲ್ಲ. ಯಾವುದೇ ಸಂದರ್ಭವನ್ನು…










