ಮೈಸೂರು ವಿವಿ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸ
ಮೈಸೂರು

ಮೈಸೂರು ವಿವಿ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸ

June 8, 2019

ಮೈಸೂರು: ಸ್ನಾತ ಕೋತ್ತರ ಪದವಿ ಇಂಗ್ಲಿಷ್ ಅಧ್ಯಯನ ವಿಭಾಗಕ್ಕೆ ದಾಖಲಾಗಲು ನಿಗದಿಪಡಿಸಿ ರುವ ಅಂಕ ಕುರಿತ ವಿಚಾರ ಶುಕ್ರವಾರ ಮೈಸೂರಿನ ಕ್ರಾಫರ್ಡ್ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಮೂರನೇ ಸಾಮಾನ್ಯ ಸಭೆ ಯಲ್ಲಿ ವಿಸ್ತೃತ ಚರ್ಚೆಗೆ ಗ್ರಾಸವಾಯಿತು.

ಸ್ನಾತಕೋತ್ತರ ಕೇಂದ್ರದಲ್ಲಿ ಇಂಗ್ಲಿಷ್ ಅಧ್ಯಯನ ವಿಭಾಗಕ್ಕೆ ಪ್ರವೇಶ ಪಡೆಯಲು ನಿಗದಿಪಡಿಸಿರುವ ಕಡಿಮೆ ಅಂಕಗಳ ಕಾರಣ ದಿಂದಾಗಿ ಪರಿಶಿಷ್ಟ ಜಾತಿ ಮತ್ತು ವರ್ಗ ಗಳ ವಿದ್ಯಾರ್ಥಿಗಳಿಗೆ ಅನಾನುಕೂಲ ವಾಗಿದ್ದು, ಇದರಿಂದಾಗಿ ಪ್ರವೇಶ ಕನಿಷ್ಟ ಸಂಖ್ಯೆಗೆ ಇಳಿದಿದೆ. ಈ ಬಗ್ಗೆ ವಿದ್ಯಾರ್ಥಿ ಗಳಿಂದ ದೂರು ಬಂದಿರುವ ಬಗ್ಗೆ ಚಾಮ ರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ ಸಭೆಯ ಗಮನ ಸೆಳೆದರು.

ಹಿಂದುಳಿದ ಗಡಿನಾಡು ಚಾಮರಾಜ ನಗರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲೆಂದು 2013-14, 2014-15, 2015 -16 ಮತ್ತು 2016-17ನೇ ಸಾಲಿನಲ್ಲಿ ಎಂಎ ಇಂಗ್ಲಿಷ್ ವಿಭಾಗ ತೆರೆಯಲಾ ಗಿತ್ತು. 2017-18 ಮತ್ತು 2018-19ನೇ ಸಾಲಿನಲ್ಲಿ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿ ಗಳು ಪ್ರವೇಶ ಪಡೆದ ಕಾರಣ ಈ ವಿಭಾಗ ವನ್ನು ಕೇಂದ್ರದಲ್ಲಿ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಮಾನಸಗಂಗೋತ್ರಿಯ ಎಲ್ಲಾ ವಿಭಾಗಗಳಿಗೆ ಪ್ರವೇಶ ಪಡೆಯಲು ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಶೇ.40, ಇತರೆ ವಿದ್ಯಾರ್ಥಿಗಳಿಗೆ ಶೇ.45 ಅರ್ಹತೆಯನ್ನು ವಿವಿ ನಿಯಮದಡಿ ನಿಗದಿಪಡಿಸಲಾಗಿದೆ. ಆದರೆ ಇಂಗ್ಲಿಷ್ ವಿಭಾಗಕ್ಕೆ ಮಾತ್ರ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಶೇ.45, ಇತರೆ ವಿದ್ಯಾರ್ಥಿಗಳಿಗೆ ಶೇ.50 ಅರ್ಹತೆಯನ್ನು ಮಾನಸಗಂಗೋತ್ರಿ ಇಂಗ್ಲಿಷ್ ವಿಭಾಗದ ಅಧ್ಯಯನ ಮಂಡಳಿ ನಿರ್ಣಯದಂತೆ ನಿಗದಿಪಡಿಸಲಾಗಿದೆ.

ಈ ಕಾರಣದಿಂದಾಗಿ ಇಂಗ್ಲಿಷ್ ವಿಭಾಗಕ್ಕೆ ಪ್ರವೇಶ ಪಡೆಯಲು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಪ್ರವೇಶವಾಗದ ಹಿನ್ನೆಲೆಯಲ್ಲಿ ಇಂಗ್ಲಿಷ್ ವಿಭಾಗ ಮುಚ್ಚಲ್ಪ ಟ್ಟಿದೆ. ಈ ಸಂಬಂಧ ಅಧ್ಯಯನ ಮಂಡಳಿ ಮುಖ್ಯಸ್ಥರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಬೇರೆ ವಿಭಾಗದಲ್ಲಿರುವಂತೆ ಅಂಕ ಅರ್ಹತೆಯನ್ನು ಇಳಿಸಿಲ್ಲ ಎಂದು ಸಭೆಯಲ್ಲಿ ವಿವರಿಸಿದರು.

ಈ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಪ್ರೊ.ಶಿವಬಸವಯ್ಯ ಎತ್ತಿದ ವಿಚಾರವನ್ನು ಬೋರ್ಡ್ ಆಫ್ ಸ್ಟಡೀಸ್ ವಿಭಾಗದ ಛೇರ್ಮನ್ ಅಂಡ್ ಡೀನ್ ಪ್ರೊ.ಮಹದೇವ್ ಆಕ್ಷೇಪ ಎತ್ತಿದರು.

ಈ ವಿಚಾರದಲ್ಲಿ ಬೋರ್ಡ್ ಆಫ್ ಸ್ಟಡೀಸ್‍ಗೆ ಅಧಿಕಾರವಿದೆ. ಇಂಗ್ಲಿಷ್‍ನ ಗುಣಮಟ್ಟ ಹಾಳಾಗುವುದನ್ನು ಪರಿಗಣಿಸಿ ಈ ರೀತಿ ಮಾಡಲಾಗಿದೆ. ಇದಕ್ಕೆ ಪ್ರೊ. ಮಹದೇವ ಆಕ್ಷೇಪಿಸಿ, ಬೋರ್ಡ್ ಆಫ್ ಸ್ಟಡೀಸ್‍ನಲ್ಲಿ ಅಂಕ ನಿಗದಿ ತೀರ್ಮಾನ ಮಾಡಲಾಗಿದೆ. ಒಮ್ಮೆ ಕೈಗೊಂಡ ತೀರ್ಮಾನ ಮೂರು ವರ್ಷ ಗಳವರೆಗೆ ಜಾರಿಯಲ್ಲಿರುತ್ತದೆ. ಹಾಗಾಗಿ ಈ ಹಂತದಲ್ಲಿ ಯಾವುದೇ ಕಾರಣಕ್ಕೂ ನಿಗದಿತ ಅಂಕಗಳ ಬದಲಾವಣೆ ಮಾಡು ವುದು ಸರಿಯಲ್ಲ ಎಂದು ಸ್ಪಷ್ಪಪಡಿಸಿದರು.

ಇದು ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ ಹಲವು ಸದಸ್ಯರು ಪ್ರೊ. ಶಿವ ಬಸವಯ್ಯ ಅವರ ವಿಚಾರವನ್ನು ಬೆಂಬ ಲಿಸಿದರು. ಬೇರೆ ಅಧ್ಯಯನ ವಿಭಾಗಗಳಿಗೆ ಇರುವಂತೆ ಇಂಗ್ಲಿಷ್ ವಿಭಾಗವನ್ನು ಸಮ ನಾಗಿ ಪರಿಗಣಿಸದ ಬಗ್ಗೆ ಪ್ರಶ್ನಿಸಿದರು.
ಸಾಕಷ್ಟು ಪರ-ವಿರೋಧ ಅಭಿಪ್ರಾಯ ಗಳ ಸುದೀರ್ಘ ಚರ್ಚೆಯ ಬಳಿಕ ಮಧ್ಯ ಪ್ರವೇಶಿಸಿದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್, ಈ ಸಂಬಂಧ ಉಪ ಸಮಿತಿ ರಚಿಸಿ ವರದಿ ಪಡೆದು ಅಂತಿಮ ನಿರ್ಧಾ ರಕ್ಕೆ ಬರಲಾಗುವುದು ಎಂದು ಹೇಳುವ ಮೂಲಕ ವಿಷಯಕ್ಕೆ ತೆರೆ ಎಳೆದರು.

ಎಂಎ ಯೋಗಿಕ್ ಸೈನ್ಸ್ ಕೋರ್ಸ್: 2019-20ನೇ ಸಾಲಿನಿಂದ ಮೈಸೂರು ವಿವಿ ಯಲ್ಲಿ ಯೋಗಿಕ್ ಸೈನ್ಸ್ ಸ್ನಾತಕೋತ್ತರ ಕೋರ್ಸ್ ಪ್ರಾರಂಭಿಸುವ ಬಗ್ಗೆ ಹಾಗೂ ದೈಹಿಕ ಮತ್ತು ಕ್ರೀಡಾ ವಿಜ್ಞಾನ ವಿಷಯ ವನ್ನು ಪೂರಕ ಪಠ್ಯ ವಿಷಯವನ್ನಾಗಿ ಸೇರ್ಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಮೈಸೂರು ವಿವಿಗೆ 2.98 ಕೋಟಿ ರೂ. ಕೊರತೆ ಬಜೆಟ್ ಶಿಕ್ಷಣ ಮಂಡಳಿ ಸಭೆಯಲ್ಲಿ ಕುಲಸಚಿವರಿಂದ ಮಂಡನೆ
ಮೈಸೂರು: ಮೈಸೂರಿನ ಕ್ರಾಫರ್ಡ್ ಹಾಲ್‍ನಲ್ಲಿ ಶುಕ್ರವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿ ಸಭೆಯಲ್ಲಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ 2019-20ನೇ ಸಾಲಿಗೆ 2.98 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದರು. ಈ ಸಾಲಿನ ಯೋಜನೇತರ ವೆಚ್ಚ 280.31 ಕೋಟಿ ರೂ.ಗೆ ಸಿದ್ಧಪಡಿಸ ಲಾಗಿದ್ದು, ಈ ಪೈಕಿ 183.31 ಕೋಟಿ ರೂ. ಯೋಜನೇತರ ಅನುದಾನದ ಮಂಜೂರಾತಿ ಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ 125.45 ಕೋಟಿ ರೂ.ಗೆ ಮಾತ್ರ ಮಂಜೂರಾತಿ ಸಿಕ್ಕಿದೆ. ವಿವಿ ಆಂತರಿಕ ಸಂಪನ್ಮೂಲಗಳಿಂದ 115.50 ಕೋಟಿ ರೂ. ನಿರೀಕ್ಷಿ ಸಿದ್ದು, ಇದೂ ಸೇರಿ 252.80 ಕೋಟಿ ರೂ.ವೆಚ್ಚದ ಪರಿಷ್ಕøತ ಬಜೆಟ್ ಅನ್ನು ಇದೀಗ ಸಿದ್ದಪಡಿಸಲಾಗಿದೆ. ಒಟ್ಟಾರೆ 2.98 ಕೋಟಿ ರೂ. ಕೊರತೆ ಕಂಡು ಬಂದಿದೆ ಎಂದರು.

ಈ ಕೊರತೆಯನ್ನು ಹೆಚ್ಚುವರಿಯಾಗಿ ಸಂಪನ್ಮೂಲ ಕ್ರೋಢೀಕರಿಸುವುದರಿಂದ ಮತ್ತು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವುದರಿಂದ ಸರಿದೂಗಿಸಲು ಪ್ರಯತ್ನಿಸಲಾಗು ವುದು ಎಂದರು. ವಿವಿ 1688 ಪಿಂಚಣಿದಾರರನ್ನು ಹೊಂದಿದ್ದು, ಈ ಸಾಲಿನಲ್ಲಿ 70 ಕೋಟಿ ರೂ. ಪಿಂಚಣಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಭಿವೃದ್ಧಿ ಅನುದಾನವಾಗಿ 1 ಕೋಟಿ ರೂ. ರಾಜ್ಯ ಸರ್ಕಾರವು ಬಿಡುಗಡೆಗೆ ಮಂಜೂರಾತಿ ನೀಡಿದೆ. ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುದಾನವನ್ನು ಪೂರ್ಣವಾಗಿ ವಿನಿಯೋಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಕೇಂದ್ರ, ರಾಜ್ಯ ಸರ್ಕಾರ, ಯುಜಿಸಿ, ಡಿಬಿಟಿ ಮುಂತಾದ ಸಂಸ್ಥೆಗಳಿಂದ 24.62 ಕೋಟಿ ರೂ. ಅನುದಾನವನ್ನು ಪ್ರಾಯೋಜಿತ ಕಾರ್ಯಕ್ರಮಗಳಿಗೆ ನಿರೀಕ್ಷಿಸಿದ್ದು, ಇದನ್ನು ಮಾರ್ಗಸೂಚಿ ಪ್ರಕಾರ ಬಳಕೆ ಮಾಡ ಲಾಗುತ್ತದೆ. ಕೇಂದ್ರ ಸರ್ಕಾರದ ರೂಸಾ ಯೋಜನೆಯಡಿ 7.50 ಕೋಟಿ ರೂ. ವಿವಿಗೆ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯ ಸರ್ಕಾರದ (ಶೇ.40) ಮತ್ತು ಕೇಂದ್ರ ಸರ್ಕಾರದ (ಶೇ.60) ಪಾಲು ಒಳಗೊಂಡಿದೆ ಎಂದು ತಿಳಿಸಿದರು.

Translate »