ಮರಳು ಮಾಫಿಯಾ ಹತ್ತಿಕ್ಕಲು ರಾಜ್ಯದಲ್ಲಿ ‘ಸ್ಯಾಂಡ್ ಬಜಾರ್’ ಪ್ರಾರಂಭ
ಮೈಸೂರು

ಮರಳು ಮಾಫಿಯಾ ಹತ್ತಿಕ್ಕಲು ರಾಜ್ಯದಲ್ಲಿ ‘ಸ್ಯಾಂಡ್ ಬಜಾರ್’ ಪ್ರಾರಂಭ

June 8, 2019

ಬೆಂಗಳೂರು:  ರಾಜ್ಯಾದ್ಯಂತ ಸ್ಯಾಂಡ್ ಬಜಾರ್ ಪ್ರಾರಂಭಿಸುವು ದಾಗಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಇಂದಿಲ್ಲಿ ತಿಳಿಸಿದ್ದಾರೆ. ಗ್ರಾಹಕರಿಗೆ ಕಡಿಮೆ ದರ ಮತ್ತು ಸುಲಭವಾಗಿ ಮನೆ ಬಾಗಿಲಿಗೆ ಮರಳು ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಮರಳು ದುರ್ಬಳಕೆ ತಡೆಯಲು ಪ್ರಾಯೋಗಿಕವಾಗಿ ಮಂಗಳೂರಿ ನಲ್ಲಿ ಆ್ಯಪ್ ಮೂಲಕ ಮರಳು ವಿಲೇವಾರಿ ಮಾಡುವ ಬಜಾರ್ ಪ್ರಾರಂಭಿಸಿದ್ದು, ಇದು ಯಶಸ್ವಿಯಾಗಿದೆ. ಇದನ್ನೇ ಆಧಾರ ವಾಗಿಟ್ಟು ಕೊಂಡು ರಾಜ್ಯದ ಎಲ್ಲಾ ಕೇಂದ್ರಗಳಲ್ಲೂ ಸ್ಯಾಂಡ್ ಬಜಾರ್‍ಗಳನ್ನು ಪ್ರಾರಂಭಿಸುತ್ತೇವೆ ಎಂದರು.

ಮರಳು ಪಡೆಯಬೇಕಾದವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೀಡಿ ನೋಂದಾ ಯಿಸಿ, ವಿಳಾಸ ದಾಖಲಿಸಿದರೆ, ಅವರ ಮೊಬೈಲ್‍ಗೆ ಸಂದೇಶ ಬರುತ್ತವೆ. ಯಾರ ಬಳಿ ಮರಳಿದೆ, ಎಷ್ಟು ಮರಳು ಪಡೆಯ ಬೇಕು ಎಂಬ ಮಾಹಿತಿ ದೊರೆಯುತ್ತದೆ. ಮಾಹಿತಿಯನ್ನು ದಾಖಲಿಸಿದ 48 ಗಂಟೆಯಲ್ಲೇ ಮರಳು ನಿಗದಿತ ಸ್ಥಳಕ್ಕೆ ಬರಲಿದೆ. ಮರಳು ಸರಬರಾಜುದಾರರಿಗೆ ಮತ್ತು ಮರಳು ಸಾಗಿಸುವವ ರಿಗೆ ಆನ್‍ಲೈನ್‍ನಲ್ಲೇ ಹಣ ಪಾವತಿಸಲಾಗುತ್ತದೆ. ಕೈಗೆಟಕುವ ದರದಲ್ಲಿ ಮನೆಕಟ್ಟುವವರಿಗೆ ಮರಳು ದೊರೆಯುತ್ತದೆ. ಮರಳು ಸಾಗಿಸುವ ವಾಹನಕ್ಕೆ ಪ್ರತಿ ಕಿ.ಮೀ.ಗೆ 50ರೂ. ನಿಗದಿಪಡಿಸ ಲಾಗಿದೆ. ಸದ್ಯಕ್ಕೆ ಹಳೆಯ ಮತ್ತು ಮೊಬೈಲ್ ಆ್ಯಪ್ ಚಾಲ್ತಿಯ ಲ್ಲಿದ್ದು, ಮುಂದಿನ ಋತುಮಾನದಲ್ಲೂ ಆ್ಯಪ್ ಮೂಲಕ ಮರಳು ವಿತರಿಸುವ ವ್ಯವಸ್ಥೆ ಮಾತ್ರ ಇರಲಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೇಶದಲ್ಲಿ ಕರ್ನಾಟಕ ಆರನೇ ಸ್ಥಾನದ ಲ್ಲಿದೆ. ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ ನಗರಗಳು ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಬಂದಿದ್ದು, ಒಟ್ಟು 6448 ಕೋಟಿ ರೂ. ಮಂಜೂರಾಗಿದೆ. ಕೇಂದ್ರ ಸರ್ಕಾರ 970 ಕೋಟಿ, ರಾಜ್ಯ ಸರ್ಕಾರ 978 ಕೋಟಿ ರೂ. ಬಿಡುಗಡೆ ಮಾಡಿದ್ದು, 211 ಕೋಟಿ ರೂ.ಗಳಷ್ಟು ವೆಚ್ಚವಾಗಿದೆ. 2,500 ಕೋಟಿ ರೂ. ಮೊತ್ತದ ಕೆಲಸಗಳು ಪ್ರಗತಿಯಲ್ಲಿದ್ದರೆ, ಎರಡು ಸಾವಿರ ಕೋಟಿ ರೂ.ನಷ್ಟು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಯೋಜನೆ ಸಿದ್ದಪಡಿಸುವ ಹಂತದಲ್ಲಿ ಒಂದು ಸಾವಿರ ಕೋಟಿ ರೂ.ನಷ್ಟು ಕೆಲಸಗಳಿವೆ. ಒಂದು ಸಾವಿರ ಕೋಟಿ ರೂ.ನಷ್ಟು ಕಾಮಗಾರಿಗಳು ಆರಂಭಿಕ ಹಂತದಲ್ಲಿವೆ. ಕೇಂದ್ರ ಸರ್ಕಾರದ ಬಿಗಿ ನಿಯಮಗಳಿಂದಾಗಿ ಸ್ಮಾರ್ಟ್ ಸಿಟಿ ಯೋಜನೆ ವಿಳಂಬವಾಗಿದೆ. ಪ್ರತಿ ನಗರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಒಂದು ಸಾವಿರ ಕೋಟಿ ರೂ. ಅನುದಾನ ನೀಡುತ್ತವೆ. ಐದು ವರ್ಷಗಳ ಯೋಜನೆ ಇದಾಗಿದ್ದು, ನಗರದಿಂದ ನಗರಕ್ಕೆ ಯೋಜನೆ ಭಿನ್ನವಾಗಿರುತ್ತದೆ ಎಂದು ವಿವರಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರುಕಟ್ಟೆ, ಮೂಲಸೌಕರ್ಯ ಅಭಿವೃದ್ಧಿ ಪಡಿಸಿದರೆ, ಶಿವಮೊಗ್ಗದಲ್ಲಿ ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ದಾವಣಗೆರೆಯಲ್ಲಿ ಯಾಂತ್ರೀಕರಣದ ಮೂಲಕ ಮಂಡಕ್ಕಿ ತಯಾರಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

Translate »