ಮೈಸೂರಿನ ಮೂವರು ವಿದ್ಯಾರ್ಥಿಗಳಿಗೆ ಒಲಂಪಿಯಾಡ್ ಪ್ರಶಸ್ತಿ
ಮೈಸೂರು

ಮೈಸೂರಿನ ಮೂವರು ವಿದ್ಯಾರ್ಥಿಗಳಿಗೆ ಒಲಂಪಿಯಾಡ್ ಪ್ರಶಸ್ತಿ

June 8, 2019

ಮೈಸೂರು: ಸೈನ್ಸ್ ಒಲಂಪಿಯಾಡ್ ಫೌಂಡೇಷನ್ 2018-19 ಸ್ಪರ್ಧೆಯಲ್ಲಿ ಮೈಸೂರಿನ ಮೂವರು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ರ್ಯಾಂಕ್ ಹಾಗೂ ಚಿನ್ನದ ಪದಕ ಗಳಿಸಿದ್ದಾರೆ. ಮೈಸೂರಿನ ರಾಯಲ್ ಕಾನ್ ಕಾರ್ಡ್ ಇಂಟರ್‍ನ್ಯಾಷನಲ್ ಸ್ಕೂಲ್‍ನ 1ನೇ ತರಗತಿ ವಿದ್ಯಾರ್ಥಿ ಎಂ. ಮೊನಿಷಾ ರಾಜ್, ಅಂತಾರಾಷ್ಟ್ರೀಯ ಮ್ಯಾಥ ಮ್ಯಾಟಿಕ್ಸ್‍ನಲ್ಲಿ ಪ್ರಥಮ ರ್ಯಾಂಕ್, ಚಿನ್ನದ ಪದಕ, ವಿದ್ಯಾವಿಕಾಸ್ ಪ್ರೌಢ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಮಯಾಂಕ್ ಎಸ್.ಅಥೇರಿಯಾ ಮತ್ತು ಎಂ.ಕೆ.ಸಾಕೇತ್ ಅಂತಾರಾಷ್ಟ್ರೀಯ ಇಂಗ್ಲಿಷ್ ಒಲಂಪಿ ಯಾಡ್‍ನಲ್ಲಿ ಪ್ರಥಮ ರ್ಯಾಂಕ್, ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾರೆ. 2018-19ನೇ ಸಾಲಿನ ಎಸ್‍ಓಎಫ್ ಒಲಂ ಪಿಯಾಡ್ ಪರೀಕ್ಷೆ ಯಲ್ಲಿ 30 ದೇಶಗಳ 1400ಕ್ಕೂ ಹೆಚ್ಚು ನಗರಗಳ 50,000 ಶಾಲೆಗಳ 50ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಈ ಪೈಕಿ ಮೈಸೂರು ನಗರದಿಂದಲೇ 33 ಸಾವಿರ ಮಕ್ಕಳು ಭಾಗ ವಹಿಸಿದ್ದರು. ಸೈನ್ಸ್ ಒಲಂಪಿಯಾಡ್ ಫೌಂಡೇಷನ್ ಇತ್ತೀಚೆಗೆ ನವದೆಹಲಿಯಲ್ಲಿ ಏರ್ಪಡಿಸಿದ್ದ ನಿವೃತ್ತ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸಮ್ಮುಖದಲ್ಲಿ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿತು.

Translate »