Tag: Mysore

ಮಳವಳ್ಳಿ ಬಳಿ ಬಸ್ ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು
ಮೈಸೂರು

ಮಳವಳ್ಳಿ ಬಳಿ ಬಸ್ ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು

May 20, 2019

ಮಂಡ್ಯ,ಮೇ 19(ನಾಗಯ್ಯ)- ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ಕೆರೆ ಏರಿ ಬಳಿ ಶನಿವಾರ ರಾತ್ರಿ ನಡೆದಿದೆ. ಮಳವಳ್ಳಿ ಪಟ್ಟಣದ ಗಂಗಾಮತ ಬಡಾವಣೆ ನಿವಾಸಿಗಳಾದ ಶಿವು(40), ನಾರಾಯಣ(45) ಮೃತಪಟ್ಟವರು. ಘಟನೆ ವಿವರ: ಶಿವು ಮತ್ತು ನಾರಾ ಯಣ ಇಬ್ಬರು ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಮಲವಿಸರ್ಜನೆಗೆ ಬೈಕ್‍ನಲ್ಲಿ ಕೆರೆಯತ್ತ ತೆರಳುತ್ತಿದ್ದರು. ಈ ವೇಳೆ ಪಟ್ಟಣದ ಹೊರವಲಯದ ಕೆರೆ ಏರಿ ಪಕ್ಕದಲ್ಲಿರುವ ನಾಲೆ ರಸ್ತೆಗೆ…

ಮೈಸೂರು ಹೃದಯ ಭಾಗದ ರಾಜಮಾರ್ಗದಲ್ಲೇ ಹೇಸಿಗೆ ಪರಿಸ್ಥಿತಿ
ಮೈಸೂರು

ಮೈಸೂರು ಹೃದಯ ಭಾಗದ ರಾಜಮಾರ್ಗದಲ್ಲೇ ಹೇಸಿಗೆ ಪರಿಸ್ಥಿತಿ

May 20, 2019

ಮೈಸೂರು: ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರ ವಾದ ಕೆ.ಟಿ.ಸ್ಟ್ರೀಟ್‍ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ರಘುಲಾಲ್ ಕಂಪನಿ ಮೆಡಿ ಕಲ್ಸ್ ಮುಂಭಾಗದಲ್ಲಿರುವ ಖಾಲಿ ನಿವೇಶನದ ಸುತ್ತ ಭದ್ರತೆಗಾಗಿ ಶೀಟ್‍ಗಳನ್ನು ಅಳವಡಿಸಲಾಗಿದೆ. ಆದರೆ ಇದು ಅವಿ ವೇಕಿಗಳಿಗೆ ಸಹಾಯ ಮಾಡಿಕೊಟ್ಟಂತಾಗಿದೆ. ಖಾಲಿ ನಿವೇಶನ ಹಾಗೂ ಮದ್ಯ ದಂಗಡಿ ನಡುವೆ ಸಣ್ಣ ಗಲ್ಲಿಯಿದೆ. ಇಲ್ಲಿ ಗಲೀಜು ಮಾಡುತ್ತಾರೆಂದು ಪಾಲಿಕೆ ಯವರು ಬ್ಯಾರಿಕೇಡ್ ಅಳವಡಿಸಿದ್ದರು. ಆದರೂ ಯಾವುದೇ ಪ್ರಯೋಜನವಾ ಗಿಲ್ಲ. ಅಕ್ಕಪಕ್ಕದಲ್ಲಿರುವ ಮದ್ಯದಂಗಡಿಗೆ ಬರುವವರಲ್ಲಿ ಕೆಲವರು ಬ್ಯಾರಿಕೇಡ್ ಸರಿಸಿ, ಪಾನಗೋಷ್ಟಿಗೆ ಬಳಸಿಕೊಳ್ಳುತ್ತಿ ದ್ದಾರೆ. ಮೂತ್ರ…

ಏಡ್ಸ್‍ನಿಂದ ಅಸುನೀಗಿದವರು, ಹೆಚ್‍ಐವಿ ಪೀಡಿತರ ಸಾಂತ್ವನಕ್ಕೆ ಕ್ಯಾಂಡಲ್ ಲೈಟ್ ಜಾಥಾ
ಮೈಸೂರು

ಏಡ್ಸ್‍ನಿಂದ ಅಸುನೀಗಿದವರು, ಹೆಚ್‍ಐವಿ ಪೀಡಿತರ ಸಾಂತ್ವನಕ್ಕೆ ಕ್ಯಾಂಡಲ್ ಲೈಟ್ ಜಾಥಾ

May 20, 2019

ಮೈಸೂರು: ಮೈಸೂ ರಿನ ಹಾರ್ಡಿಂಗ್ ವೃತ್ತದಲ್ಲಿ ಆಶೋದಯ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ಕ್ಯಾಂಡಲ್ ಲೈಟ್ ಮೆಮೋರಿಯಲ್ ದಿನದ ಅಂಗವಾಗಿ ಏಡ್ಸ್‍ನಿಂದ ಮರಣ ಹೊಂದಿದ ಹಾಗೂ ಹೆಚ್‍ಐವಿ ಸೋಂಕಿ ನೊಂದಿಗೆ ಜೀವನ ಸಾಗಿಸುತ್ತಿರುವವರನ್ನು ಸ್ಮರಿಸಿ, ಗೌರವ ಸೂಚಿಸಲು ಕ್ಯಾಂಡಲ್ ಲೈಟ್ ಜಾಥಾ ನಡೆಸಲಾಯಿತು. ನನ್ನ ಹೆಚ್‍ಐವಿ ಬದಲಾಗಲ್ಲ. ನಿಮ್ಮ ಮನೋಭಾವನೆಯನ್ನು ಬದಲಾಯಿಸಿ ಕೊಳ್ಳಿ, ಹೆದರಿಕೆ, ಕಳಂಕ, ತಾರತಮ್ಯ ಬೇಡ ಎಂಬ ನಾಮಪಲಕಗಳನ್ನು ಹಿಡಿದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಹೆಚ್‍ಐವಿ ಕುರಿತು ಜಾಗೃತಿ ಮೂಡಿಸಿದರು. ಹಾರ್ಡಿಂಗ್ ವೃತ್ತದಿಂದ ಗಾಂಧಿ ಸ್ಕ್ವೇರ್ ವರೆಗೆ…

ಮೇಲು, ಕೀಳು ಜಾತಿ ಎಂಬುದು ಮಾನಸಿಕ ರೋಗ
ಮೈಸೂರು

ಮೇಲು, ಕೀಳು ಜಾತಿ ಎಂಬುದು ಮಾನಸಿಕ ರೋಗ

May 20, 2019

ಮೈಸೂರು: ನಾನು ಮೇಲು ಜಾತಿ ಅಥವಾ ಕೀಳು ಜಾತಿ ಎಂಬುದು ಮಾನಸಿಕ ರೋಗದ ಲಕ್ಷಣ ಎಂದು ವಿಶ್ವಮೈತ್ರಿ ಬುದ್ಧವಿಹಾರದ ಬಂತೆ ಕಲ್ಯಾಣಸಿರಿ ಅಭಿಪ್ರಾಯಿಸಿದರು. ಕಲಾಮಂದಿರದ ಕಿರುಮಂದಿರದಲ್ಲಿ ಮಹಾಬೆಳಕು ಸಂಸ್ಥೆ ವತಿಯಿಂದ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ‘ಸಂಗೀತ, ಧ್ಯಾನ, ಕವಿಗೋಷ್ಟಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ ಎಂದರೆ ವ್ಯಕ್ತಿಯಲ್ಲ, ಜ್ಞಾನ. ಬುದ್ಧನಿಗೆ ಶರಣಾಗಿ ಎಂದರೆ ಜ್ಞಾನಕ್ಕೆ ಶರಣಾಗಿ ಎಂದರ್ಥ ಎಂದರು. ನಗರದಲ್ಲಿದ್ದ ಮಾತ್ರಕ್ಕೆ ನಾಗರಿಕರಾಗಲು ಸಾಧ್ಯವಿಲ್ಲ. ಮೊದಲು ಜೀವನದ ಕ್ರಮ ವನ್ನು ಅರಿತುಕೊಳ್ಳಬೇಕು. ನಮ್ಮನ್ನು ನಿಜವಾಗಿ…

ಪ್ರವಾಸಿಗರ ಮೇಲೆ ನಾಲ್ವರಿಂದ ತೀವ್ರ ಹಲ್ಲೆ: ಓರ್ವ ಬಂಧನ
ಮೈಸೂರು

ಪ್ರವಾಸಿಗರ ಮೇಲೆ ನಾಲ್ವರಿಂದ ತೀವ್ರ ಹಲ್ಲೆ: ಓರ್ವ ಬಂಧನ

May 20, 2019

ಮೈಸೂರು: ನಾಲ್ವರ ಗುಂಪೊಂದು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ಭಾನುವಾರ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿಗರು ಟೆಂಪೋ ಟ್ರಾವೆಲರ್(ಕೆಎ-51-ಎ-1849)ನಲ್ಲಿ ಚಾಮುಂಡಿ ಬೆಟ್ಟದಿಂದ ಬಲಮುರಿ ಫಾಲ್ಸ್‍ಗೆ ತೆರಳುತ್ತಿದ್ದಾಗ ನಗರದ ಚಾಮರಾಜ ಜೋಡಿ ರಸ್ತೆ, ಶಾಂತಲಾ ಥಿಯೇಟರ್ ಸಿಗ್ನಲ್ ಬಳಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಟೆಂಪೋ ಟ್ರಾವೆಲರ್ ಸಿಗ್ನಲ್‍ನಲ್ಲಿ ನಿಂತಿದ್ದಾಗ, ರಸ್ತೆ ಪಕ್ಕದಲ್ಲೇ ಮದ್ಯಪಾನ ಮಾಡುತ್ತಿದ್ದ ನಾಲ್ವರು, ಚಾಲಕ ಕಾರ್ತಿಕ್‍ನನ್ನು ದಿಟ್ಟಿಸಿ ನೋಡಿದ್ದಾರೆ. ಇದರಿಂದ ಕೊಂಚ ವಿಚಲಿತನಾದ ಕಾರ್ತಿಕ್, ವಾಹನದಲ್ಲಿ ಮಕ್ಕಳು, ಮಹಿಳೆಯರಿದ್ದಾರೆ ತೊಂದರೆ ಮಾಡಬೇಡಿ…

ಮೈಸೂರಿನ 4 ಪ್ರತ್ಯೇಕ ಸ್ಥಳಗಳಲ್ಲಿ ಸಾವಿರಾರು ಮಂದಿ ಪೂರ್ವಾಭ್ಯಾಸ
ಮೈಸೂರು

ಮೈಸೂರಿನ 4 ಪ್ರತ್ಯೇಕ ಸ್ಥಳಗಳಲ್ಲಿ ಸಾವಿರಾರು ಮಂದಿ ಪೂರ್ವಾಭ್ಯಾಸ

May 20, 2019

ಮೈಸೂರು: ಜೂ.21ರ ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿನ ರೇಸ್‍ಕೋರ್ಸ್ ಮೈದಾನದಲ್ಲಿ 1.5 ಲಕ್ಷದಷ್ಟು ಯೋಗ ಪಟುಗಳು ಮತ್ತೊಮ್ಮೆ ಯೋಗ ಪ್ರದರ್ಶನದಲ್ಲಿ ವಿಶ್ವ ದಾಖಲೆ ಮಾಡಲು ಸಜ್ಜಾಗುತ್ತಿದ್ದಾರೆ. ಅದರ ಅಂಗ ವಾಗಿ ಪ್ರತಿ ಭಾನುವಾರಗಳಂದು ಯೋಗದ ಪೂರ್ವಾ ಭ್ಯಾಸ ನಡೆಸಲಾಗುತ್ತಿದ್ದು, ಇಂದೂ ಮೈಸೂರಿನ ನಾಲ್ಕು ಸ್ಥಳಗಳಲ್ಲಿ ಸಾವಿರಾರು ಯೋಗಪಟುಗಳು ಯೋಗ ಪೂರ್ವಾಭ್ಯಾಸ ನಡೆಸಿದರು. ಮೈಸೂರಿನ ಕುವೆಂಪುನಗರದ ಸೌಗಂಧಿಕ ಉದ್ಯಾ ನವನ, ಕುವೆಂಪುನಗರದ ವಿಶ್ವಮಾನವ ಉದ್ಯಾನ ವನ, ವಿಜಯನಗರದ ಸಪ್ತಮಾತೃಕೆ ಚೌಡೇಶ್ವರಿ ದೇವಸ್ಥಾನದ ಬಳಿ ಹಾಗೂ ವಿಜಯನಗರದ ಪುಷ್ಕ ರಿಣಿ…

ಮೂಕ ಅಭಿನಯದ ಮೂಲಕ ನಗಿಸುತ್ತಿದ್ದ `ಚಾರ್ಲಿ ಚಾಪ್ಲಿನ್’
ಮೈಸೂರು

ಮೂಕ ಅಭಿನಯದ ಮೂಲಕ ನಗಿಸುತ್ತಿದ್ದ `ಚಾರ್ಲಿ ಚಾಪ್ಲಿನ್’

May 20, 2019

ಮೈಸೂರು: ತನ್ನ ಮೂಕ ಅಭಿಯ ನದ ಮೂಲಕವೇ ಜನ ರನ್ನು ನಕ್ಕು ನಲಿಸುವ ಚಾರ್ಲಿ ಚಾಪ್ಲಿನ್ ವಿಶ್ವದ ಶ್ರೇಷ್ಠ ಮಟ್ಟದ ಕಲಾವಿದ. ಮನ ರಂಜನೆಯ ಜೊತೆಗೆ ಸಮಾಜಕ್ಕೆ ಸದುದ್ದೇ ಶದ ಸಂದೇಶ ಸಾರುತ್ತಿದ್ದ ವಿಭಿನ್ನ ರೀತಿಯ ಕಲಾವಿದ ಎಂದು ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ತಿಳಿಸಿದರು. ಮೈಸೂರು ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನು ವಾರ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಸ್ನೇಹ ಸಿಂಚನ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಕೆ.ಎಸ್.ಪ್ರದೀಪ್‍ಕುಮಾರ್…

ಆಸ್ತಿ ವಿವಾದ: ವ್ಯಕ್ತಿ ಆತ್ಮಹತ್ಯೆ
ಮೈಸೂರು

ಆಸ್ತಿ ವಿವಾದ: ವ್ಯಕ್ತಿ ಆತ್ಮಹತ್ಯೆ

May 20, 2019

ಮೈಸೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಶಿವೇ ಗೌಡರ ಪುತ್ರ ವೈ.ಎಸ್.ವಿಷಕಂಠ (53) ಆತ್ಮಹತ್ಮೆ ಮಾಡಿಕೊಂಡವರು. ಮೂಲತಃ ಇಲವಾಲದವರಾದ ವಿಷಕಂಠ, ಹಾಲಿ ಮೈಸೂರಿನ ವಾಣಿ ವಿಲಾಸ ಬಡಾವಣೆಯ ನಿವಾಸಿ. ದಾಯಾದಿಗಳೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳಿದ್ದ ವಿಷಕಂಠ, ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಆಸ್ತಿಗೆ…

ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ
ಮೈಸೂರು

ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ

May 20, 2019

ಮೈಸೂರು: ಖಿನ್ನತೆಗೆ ಒಳಗಾಗಿ ವಿಷ ಸೇವಿಸಿದ್ದ ತಾಯಿ ಮತ್ತು ಮಗಳು ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿ ವಾರ ಸಂಜೆ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದ ಪರಿಸರನಗರದ ಸಣ್ಣನಾಯಕರ ಪತ್ನಿ ಸರಸ್ವತಿ (45) ಹಾಗೂ ಪುತ್ರಿ ಸುಮಾ (20) ಸಾವನ್ನಪ್ಪಿದವರು. ಹುಟ್ಟು ಅಂಗವೈಕಲ್ಯ ಹೊಂದಿದ್ದ ಪುತ್ರಿ ಸುಮಾ ಭವಿಷ್ಯದ ಬಗ್ಗೆ ತಾಯಿ ಸರಸ್ವತಿ ಚಿಂತೆಗೀಡಾಗಿದ್ದರು. ಅಂಗವಿಕಲ ಮಗಳನ್ನು ಯಾರು ತಾನೆ ಮದುವೆ ಆಗುತ್ತಾರೆ ಎಂಬ ಚಿಂತೆಯಲ್ಲಿ ಸರಸ್ವತಿ ಖಿನ್ನತೆಗೆ ಒಳಗಾದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಶುಕ್ರವಾರ…

ಸುಕ್ವಿಂದರ್ ದೇಹ ಹಸ್ತಾಂತರ
ಮೈಸೂರು

ಸುಕ್ವಿಂದರ್ ದೇಹ ಹಸ್ತಾಂತರ

May 19, 2019

ಮೈಸೂರು: ಮೈಸೂರಿನ ಹೆಬ್ಬಾಳು ಬಳಿ ರಿಂಗ್ ರಸ್ತೆಯಲ್ಲಿ ನಡೆದ ಪೊಲೀಸ್ ಶೂಟೌಟ್‍ನಲ್ಲಿ ಬಲಿಯಾಗಿದ್ದ ಸುಕ್ವಿಂದರ್ ದೇಹವನ್ನು ಪೊಲೀಸ್ ಭಾರೀ ಬಿಗಿ ಭದ್ರತೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಇಂದು ಮಧ್ಯಾಹ್ನ ವಾರಸು ದಾರರಿಗೆ ಒಪ್ಪಿಸಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿರುವ ಶವಾಗಾರದಲ್ಲಿ ಮೈಸೂರಿನ 5ನೇ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಧೀಶ (ಕಿರಿಯ ಶ್ರೇಣಿ) ಭೀಮಪ್ಪ ಎಸ್.ಪೌಲ್ ಹಾಗೂ ಮೈಸೂರು ತಾಲೂಕು ಅಡಿಷನಲ್ ತಹಸೀಲ್ದಾರ್ ಚಂದ್ರಕಾಂತ ಸಮ್ಮುಖದಲ್ಲಿ ದೇಹದ ಪಂಚನಾಮೆ (ಇನ್‍ಕ್ವೆಸ್ಟ್) ನಡೆದ ನಂತರ ಮರಣೋತ್ತರ…

1 306 307 308 309 310 330
Translate »