ಮೈಸೂರಿನ 4 ಪ್ರತ್ಯೇಕ ಸ್ಥಳಗಳಲ್ಲಿ ಸಾವಿರಾರು ಮಂದಿ ಪೂರ್ವಾಭ್ಯಾಸ
ಮೈಸೂರು

ಮೈಸೂರಿನ 4 ಪ್ರತ್ಯೇಕ ಸ್ಥಳಗಳಲ್ಲಿ ಸಾವಿರಾರು ಮಂದಿ ಪೂರ್ವಾಭ್ಯಾಸ

May 20, 2019

ಮೈಸೂರು: ಜೂ.21ರ ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿನ ರೇಸ್‍ಕೋರ್ಸ್ ಮೈದಾನದಲ್ಲಿ 1.5 ಲಕ್ಷದಷ್ಟು ಯೋಗ ಪಟುಗಳು ಮತ್ತೊಮ್ಮೆ ಯೋಗ ಪ್ರದರ್ಶನದಲ್ಲಿ ವಿಶ್ವ ದಾಖಲೆ ಮಾಡಲು ಸಜ್ಜಾಗುತ್ತಿದ್ದಾರೆ. ಅದರ ಅಂಗ ವಾಗಿ ಪ್ರತಿ ಭಾನುವಾರಗಳಂದು ಯೋಗದ ಪೂರ್ವಾ ಭ್ಯಾಸ ನಡೆಸಲಾಗುತ್ತಿದ್ದು, ಇಂದೂ ಮೈಸೂರಿನ ನಾಲ್ಕು ಸ್ಥಳಗಳಲ್ಲಿ ಸಾವಿರಾರು ಯೋಗಪಟುಗಳು ಯೋಗ ಪೂರ್ವಾಭ್ಯಾಸ ನಡೆಸಿದರು.

ಮೈಸೂರಿನ ಕುವೆಂಪುನಗರದ ಸೌಗಂಧಿಕ ಉದ್ಯಾ ನವನ, ಕುವೆಂಪುನಗರದ ವಿಶ್ವಮಾನವ ಉದ್ಯಾನ ವನ, ವಿಜಯನಗರದ ಸಪ್ತಮಾತೃಕೆ ಚೌಡೇಶ್ವರಿ ದೇವಸ್ಥಾನದ ಬಳಿ ಹಾಗೂ ವಿಜಯನಗರದ ಪುಷ್ಕ ರಿಣಿ ಶಾಲಾವರಣದಲ್ಲಿ ಯೋಗದ ಪೂರ್ವಾಭ್ಯಾಸ ನಡೆಸಿದರು.

ಬೆಳಿಗ್ಗೆ 6.30ರಿಂದ 7.15ರವರೆಗೆ ನಡೆಸಿದ ಪೂರ್ವಾಭ್ಯಾಸದಲ್ಲಿ ಸಾವಿರಾರು ಯೋಗಪಟುಗಳು ಭಾಗವಹಿಸಿ ಅಂತಾರಾಷ್ಟ್ರೀಯ ಯೋಗ ದಿನದಂದು ನಡೆಸಲು ಉದ್ಧೇಶಿಸಿರುವ ಯೋಗ ಗಿನ್ನಿಸ್ ದಾಖ ಲೆಗೆ ಅಗತ್ಯ ಪೂರ್ವಾಭ್ಯಾಸ ನಡೆಸಿದರು.

ಅಂತಾರಾಷ್ಟ್ರೀಯ ಯೋಗ ದಾಖಲೆ ಮಾಡಲು ಪೂರಕವಾಗಿ ನೀಡಲಾಗಿರುವ ಶಿಷ್ಟಾಚಾರಕ್ಕೆ ತಕ್ಕಂತೆ 45 ನಿಮಿಷಗಳ ಅಭ್ಯಾಸದಲ್ಲಿ ಯೋಗಪಟುಗಳಿಗೆ ವ್ಯಾಯಾಮ, ವಿವಿಧ ಯೋಗಾಸನಗಳು, ಪ್ರಾಣಾ ಯಾಮ, ಧ್ಯಾನ, ಸಂಕಲ್ಪ ಮತ್ತು ಶಾಂತಿಮಂತ್ರವನ್ನು ತಿಳಿಸಿಕೊಡಲಾಯಿತು. ಮೈಸೂರು ಯೋಗ ಫೆಡರೇ ಷನ್ ಅಡಿಯಲ್ಲಿ ವಿವಿಧ ಯೋಗ ತಂಡಗಳು ಒಗ್ಗ ಟ್ಟಿನ ಮಂತ್ರ ಜಪಿಸಿದ್ದು, ಈ ಬಾರಿ ಯೋಗದಲ್ಲಿ ವಿಶ್ವ ದಾಖಲೆ ಬರೆಯಲು ಶ್ರಮಿಸುತ್ತಿದ್ದಾರೆ. ಜಿಎಸ್‍ಎಸ್‍ನ ಶ್ರೀಹರಿ ನೇತೃತ್ವದಲ್ಲಿ ವಿವಿಧ ಯೋಗ ಸಂಘಟನೆಗಳ ನಾಗಭೂಷಣ್, ರಂಗನಾಥ್, ಶಶಿಕುಮಾರ್, ಬಿ.ಪಿ. ಮೂರ್ತಿ, ಗಣೇಶ್‍ಕುಮಾರ್, ಅನಂತ್, ರತ್ನಾ ರಾವ್, ಕಲಾವತಿ, ದೇವಯ್ಯ, ಕುಮಾರ್, ರೂಪಶ್ರೀ, ಜ್ಯೋತಿ, ಸತ್ಯನಾರಾಯಣ ಇನ್ನಿತರ ನೇತೃತ್ವದಲ್ಲಿ ಅಲ್ಲಲ್ಲಿ ಯೋಗಾಭ್ಯಾಸ ಪೂರ್ವಾಭ್ಯಾಸಗಳು ನಡೆಯು ತ್ತಿವೆ. ಜಿಎಸ್‍ಎಸ್ ಯೋಗ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಮೈಸೂರು ಯೋಗ ಒಕ್ಕೂಟ, ಯೋಗ ಸ್ಪೋಟ್ರ್ಸ್ ಫೌಂಡೇಷನ್, ಬಾಬಾ ರಾಂದೇವ್ ಸ್ವಾಭಿಮಾನ್ ಟ್ರಸ್ಟ್, ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ ಇನ್ನಿತರ ಯೋಗ ಸಂಸ್ಥೆಗಳು ಯೋಗ ವಿಶ್ವ ದಾಖಲೆಗೆ ಒಗ್ಗಟ್ಟಿನಿಂದ ಕೈಜೋಡಿಸಿವೆ. ಮೈಸೂ ರನ್ನು ದೇಶದ ಬಹು ದೊಡ್ಡ ಯೋಗ ರಾಜಧಾನಿ ಯಾಗಿ ಹೊರ ಹೊಮ್ಮಿಸುವಲ್ಲಿ ಶ್ರಮಿಸುತ್ತಿದ್ದಾರೆ.

Translate »