ಲೋಕೇಶ್ ದಂಪತಿ ಮಾನವೀಯ ಮೌಲ್ಯ ಅಳವಡಿಸಿಕೊಂಡ ಹೃದಯವಂತ ಕಲಾವಿದರು
ಮೈಸೂರು

ಲೋಕೇಶ್ ದಂಪತಿ ಮಾನವೀಯ ಮೌಲ್ಯ ಅಳವಡಿಸಿಕೊಂಡ ಹೃದಯವಂತ ಕಲಾವಿದರು

May 20, 2019

ಮೈಸೂರು: ನಟ ಲೋಕೇಶ್ ಮತ್ತು ನಟಿ ಗಿರಿಜಾ ಲೋಕೇಶ್ ತಮ್ಮ ವೃತ್ತಿಯಲ್ಲಿ ಬದ್ಧತೆಯನ್ನಿಟ್ಟುಕೊಂಡು ಕೆಲಸ ಮಾಡಿದವರು. ಪತಿ-ಪತ್ನಿ ಇಬ್ಬರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಹೃದಯವಂತ ಕಲಾವಿದರು ಎಂದು ಕರ್ನಾ ಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಅಭಿಪ್ರಾಯಪಟ್ಟರು.

ಮೈಸೂರು ರಾಮಕೃಷ್ಣನಗರದ ನಟನಾ ಕಲಾ ಮಂದಿರದಲ್ಲಿ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಏರ್ಪಡಿಸಿದ್ದ `ನಟ ಲೋಕೇಶ್ ನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕೇಶ್ ಮತ್ತು ಗಿರಿಜಾ, ಪುಸ್ತಕ ಓದುವ ಹವ್ಯಾಸ ಬೆಳಸಿಕೊಂಡವರಲ್ಲ. ನಿರ್ದೇಶಕರು ನೀಡುತ್ತಿದ್ದ ಸ್ಕ್ರಿಪ್ಟ್ ಸಹ ಸರಿಯಾಗಿ ಓದಿಕೊಳ್ಳುತ್ತಿ ರಲಿಲ್ಲ. ಆದರೆ, ರಂಗದ ಮೇಲೆ ನಿರ್ದೇಶಕರು ಹೇಳಿಕೊಟ್ಟ ಅಷ್ಟೂ ಡೈಲಾಗ್‍ಗಳನ್ನು ಪಾತ್ರ ಗಳ ಪರಕಾಯ ಪ್ರವೇಶ ಮಾಡಿ ಅಭಿನಯಿಸು ತ್ತಿದ್ದ ಪ್ರಸಂಗಗಳನ್ನು ಕೆಲವು ನಾಟಕಗಳ ಉದಾಹರಣೆ ಸಮೇತ ವಿವರಿಸಿದರು.

ಗಿರಿಜಾ, ಕಳೆದ 16 ವರ್ಷಗಳಿಂದ ಹಿರಿಯ ಕಲಾವಿದರಾದ ಸುಬ್ಬಯ್ಯ ನಾಯ್ಡು, ಲಕ್ಷ್ಮೀಬಾಯಿ, ನಟ ಲೋಕೇಶ್ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ನೀಡುತ್ತ ಬಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರ ಸ್ವಂತ ದುಡಿಮೆ ಹಣ ವನ್ನು ವ್ಯಯಿಸುತ್ತಿದ್ದಾರೆ. ಇದರ ಜೊತೆಗೆ ಬಡ ಕಲಾವಿದರ ನೆರವಿಗೂ ತೆರೆ ಮರೆಯಲ್ಲಿ ಪ್ರೋತ್ಸಾಹಿಸುತ್ತಾರೆ. ಇವರದು ತಾಯಿ ಹೃದಯ ಎಂದರೆ ತಪ್ಪಾಗಲಾರದು ಎಂದರು.

ನಾನು ಮತ್ತು ಗಿರಿಜಾ ಲೋಕೇಶ್ ಬಾಲ್ಯ ಸ್ನೇಹಿತರು, ಕಂಪನಿ ನಾಟಕಗಳಲ್ಲಿ ನಟಿಸುವ ಸಂದರ್ಭದಿಂದಲೂ ಪರಿಚಯವಿದೆ. ಗಿರಿಜಾ ಮತ್ತು ಲೋಕೇಶ್ ಮದುವೆ ಪ್ರಸಂಗವನ್ನು ನೆನೆದ ಕಪ್ಪಣ್ಣ, ಇವರಿಬ್ಬರು ಕಾಕನಕೋಟೆ ನಾಟಕದಲ್ಲಿ ನಟಿಸುತ್ತಿದ್ದರು. ಈ ನಾಟಕವನ್ನು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಾಟಕದಲ್ಲಿ ಅಭಿನಯಿಸಬೇಕಾ ಗಿತ್ತು. ಅಷ್ಟರಲ್ಲಿ ದೇವಸ್ಥಾನಕ್ಕೆ ತೆರಳಿ ಮದುವೆ ಯಾಗಿ, ಮೊದಲ ಪ್ರದರ್ಶನದಲ್ಲಿ ತಂದೆ-ಮಗಳ ಪಾತ್ರ ನಿರ್ವಹಿಸಿದ್ದರು. ನಾಟಕದ ಕೊನೆಯಲ್ಲಿ ಇವರಿಬ್ಬರ ಮದುವೆ ಪ್ರಸಂಗವನ್ನು ಪ್ರೇಕ್ಷಕರಿಗೆ ತಿಳಿಸಿ, ಹಾರ ಬದಲಾಯಿಸಿಕೊಂಡ ಪ್ರಸಂಗ ವನ್ನು ಸಭೆಗೆ ತಿಳಿಸಿದರು.
ಮತ್ತೊಂದು ಪೋಲಿಕಿಟ್ಟಿ ನಾಟಕದ ಪ್ರದ ರ್ಶನ ಸಂದರ್ಭದಲ್ಲಿ ಮುಖ್ಯ ಪಾತ್ರಧಾರಿ ಮೃತ ಪಟ್ಟಾಗಲೂ ಲೋಕೇಶ್ ನಾಟಕ ನಿಲ್ಲಿಸಲಿಲ್ಲ. ದುಃಖದಲ್ಲಿಯೂ ನಾಟಕ ಪ್ರದರ್ಶಿಸುವ ಧೈರ್ಯ ತೋರಿದರು. ಅವರಿಗೆ ತಮ್ಮ ವೃತ್ತಿ ಮೇಲೆ ಬದ್ಧತೆ ಇತ್ತು. ಇವರ ಕುಟುಂಬದ ಬದ್ಧತೆಯನ್ನು ಎಷ್ಟು ಹೊಗಳಿದರೂ ಸಾಲದು. ಇವರ ಸಾಮಾಜಿಕ ಬದ್ಧತೆಯನ್ನು ನಾನು ಮೆಚ್ಚುತ್ತೇನೆ ಎಂದರು.

ರಂಗಭೂಮಿ ಮಹಾನ್ ಚೇತನ ಡಾ.ಬಿ.ವಿ. ಕಾರಂತ ಹೆಸರಿನಲ್ಲಿ ಯಾರೂ ಸ್ಮರಿಸುತ್ತಿಲ್ಲ. ಅವರ ಹೆಸರಿನಲ್ಲಿ ಶಿಷ್ಯರು, ನೆಂಟರು, ಸ್ನೇಹಿ ತರೂ ಹೇಳಿಕೊಂಡು ಇಂದಿಗೂ ಕೆಲವರು ಅಡ್ಡಾಡುತ್ತಿದ್ದಾರೆ. ಅದರಲ್ಲಿ ನನ್ನನ್ನು ಸೇರಿದಂತೆ ಒಬ್ಬರೂ ಅವರ ಸ್ಮರಣೆ ಮಾಡದಿರುವುದು ಬೇಸರದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸುಬ್ಬಯ್ಯ ನಾಯ್ಡು ಪ್ರಶಸ್ತಿಯನ್ನು ಕಲಾವಿದ ಹಾಗೂ ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್‍ಗೆ, ಲಕ್ಷ್ಮೀಬಾಯಿ ಪ್ರಶಸ್ತಿಯನ್ನು ಹಿರಿಯ ನೃತ್ಯ ಕಲಾವಿದೆ ಶೈಲಶ್ರೀ ಸುದರ್ಶನ್‍ಗೆ ಮತ್ತು ಲೋಕೇಶ್ ಪ್ರಶಸ್ತಿಯನ್ನು ಚಲನಚಿತ್ರ, ರಂಗ ಭೂಮಿ ಕಲಾವಿದ ರಮೇಶ್ ಭಟ್ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಬಳಿಕ ಮೃಚ್ಛಕಟಿಕ ನಾಟಕ ಪ್ರದರ್ಶನ ಗೊಂಡಿತು. ಕಾರ್ಯಕ್ರಮದಲ್ಲಿ ರಂಗಕರ್ಮಿ ರಾಜಶೇಖರ ಕದಂಬ ಮತ್ತು ಚಲನಚಿತ್ರ ನಟ ಶಂಕರ್ ಅಶ್ವಥ್ ಅವರಿಗೆ ಗೌರವ ಸಮರ್ಪಿಸಲಾಯಿತು. ಸುರುಚಿ ರಂಗಮನೆಯ ವಿಜಯಾ ಸಿಂಧುವಳ್ಳಿ, ಗಿರಿಜಾ ಲೋಕೇಶ್, ಪೂಜಾ ಲೋಕೇಶ್ ಇದ್ದರು. ನಟ ಮಂಡ್ಯ ರಮೇಶ್ ಸ್ವಾಗತಿಸಿದರು. ನಿಹಾ ರಿಕಾ ಪ್ರಾರ್ಥಿಸಿದರು.

Translate »