Tag: Mysore

ಮಕ್ಕಳಲ್ಲಿ ತಂತ್ರಜ್ಞಾನ ಆವಿಷ್ಕಾರದ ಅರಿವು ಮೂಡಿಸುವುದು ಅವಶ್ಯ
ಮೈಸೂರು

ಮಕ್ಕಳಲ್ಲಿ ತಂತ್ರಜ್ಞಾನ ಆವಿಷ್ಕಾರದ ಅರಿವು ಮೂಡಿಸುವುದು ಅವಶ್ಯ

January 12, 2020

ಮೈಸೂರು,ಜ.11(ವೈಡಿಎಸ್)-ವಿಜಯನಗರ ದಲ್ಲಿರುವ ಭಾರತೀಯ ವಿದ್ಯಾಭವನದ ಸಭಾಂ ಗಣದಲ್ಲಿ ಶಂಕರ್ ಬೆಳ್ಳೂರು ಅವರ `ಅಟ್ ದಿ ಕ್ರಾಸ್‍ರೋಡ್ಸ್’ ಪುಸ್ತಕವನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ಬೆಂಗಳೂರು ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಅವರು ಪುಸ್ತಕ ಬಿಡು ಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಆಗ ಮಿಸಿದ್ದ ಯುನಿಲಾಗ್ ಕಾಂಟೆಂಟ್ ಸಲ್ಯುಶನ್ಸ್ ಕಂಪೆನಿ ಅಧ್ಯಕ್ಷ ಕೆ.ಅಚ್ಚುತ ಬಾಚಳ್ಳಿ ಮಾತನಾಡಿ, ನಮ್ಮ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಕಲಿಸು ತಂತ್ರಜ್ಞಾನದ ನೆರವು ಬಳಸುತ್ತೇವೆ. ಆದರೆ ಕೇವಲ ತಂತ್ರಜ್ಞಾನದ ಬಳಕೆ ಮಾತ್ರ ಸಾಲದು. ತಂತ್ರ ಜ್ಞಾನದ ಆವಿಷ್ಕಾರ ಹೇಗೆ ಎಂಬುದನ್ನೂ…

ಕುಸಿದ ವಾಯು ಗುಣಮಟ್ಟ: ದೆಹಲಿಗೆ ತೆರಳಬೇಕಿದ್ದ 26 ರೈಲುಗಳು ವಿಳಂಬ
ಮೈಸೂರು

ಕುಸಿದ ವಾಯು ಗುಣಮಟ್ಟ: ದೆಹಲಿಗೆ ತೆರಳಬೇಕಿದ್ದ 26 ರೈಲುಗಳು ವಿಳಂಬ

January 12, 2020

ದೆಹಲಿ: ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ವಾಯುಗುಣ ಮಟ್ಟ ಕುಸಿದಿರುವ ಕಾರಣ 26 ರೈಲುಗಳು ವಿಳಂಬವಾಗಿವೆ. ಕನಿಷ್ಠ ತಾಪಮಾನ 5.8 ಡಿಗ್ರಿ ದಾಖಲಾಗಿದ್ದು, ಗರಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿಯೂ ದೆಹಲಿಯಲ್ಲಿ ಮಂಜು ಕವಿದ ವಾತಾವರಣ ಇರಲಿದೆ. ದಟ್ಟ ಮಂಜು ಆವರಿಸಿರುವ ಪರಿಣಾಮ ಬೆಳಿಗ್ಗೆ 800 ಮೀಟರ್ ದೂರ ದಲ್ಲಿರುವುದಷ್ಟೇ ಕಾಣಿಸುತ್ತಿದೆ. ಇನ್ನು ವಾಯುಗುಣಮಟ್ಟ ಸಹ ಕಳಪೆಯಾಗಿದ್ದು, 302 ರಷ್ಟಿದೆ.

ಅಪಘಾತದಿಂದ ನೋವು-ಸುರಕ್ಷತೆಯಿಂದ ನಲಿವು
ಮೈಸೂರು

ಅಪಘಾತದಿಂದ ನೋವು-ಸುರಕ್ಷತೆಯಿಂದ ನಲಿವು

January 12, 2020

ಮೈಸೂರು, ಜ.11(ಆರ್‍ಕೆ)- `ಅಪಘಾತ ದಿಂದ ನೋವು-ಸುರಕ್ಷತೆಯಿಂದ ನಲಿವು’ ಘೋಷಣೆಯೊಂದಿಗೆ ಮೈಸೂರಿನಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2020 ಇಂದಿನಿಂದ ಆರಂಭವಾಯಿತು. ಮೈಸೂರು ನಗರ ಪೊಲೀಸ್ ಮತ್ತು ನಗರ ಸಂಚಾರ ಪೊಲೀಸ್ ಆಶ್ರಯದಲ್ಲಿ ಮೈಸೂರು ಅರಮನೆ ಬಲರಾಮ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಬಳಿ ಏರ್ಪಡಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ವನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮನುಷ್ಯನ ಜೀವಕ್ಕಿಂತ ಮುಖ್ಯವಾದುದು ಬೇರೇನೂ ಇಲ್ಲ….

ಸರ್ಕಾರಿ ಶಾಲಾ ಕಟ್ಟಡಗಳಿಗೆ ಕಾಯಕಲ್ಪ: ಬಜೆಟ್‍ನಲ್ಲಿ ಹೆಚ್ಚು ಅನುದಾನ ಕೋರಿಕೆ
ಮೈಸೂರು

ಸರ್ಕಾರಿ ಶಾಲಾ ಕಟ್ಟಡಗಳಿಗೆ ಕಾಯಕಲ್ಪ: ಬಜೆಟ್‍ನಲ್ಲಿ ಹೆಚ್ಚು ಅನುದಾನ ಕೋರಿಕೆ

January 12, 2020

ಮೈಸೂರು, ಜ.11(ಪಿಎಂ)- ಸರ್ಕಾರಿ ಶಾಲಾ ಕಟ್ಟಡಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಈ ಬಾರಿ ಬಜೆಟ್‍ನಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆಗೆ ಹೆಚ್ಚು ಅನು ದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಿಚ್ಛಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು. ಮೈಸೂರಿನ ಕೌಟಿಲ್ಯ ವಿದ್ಯಾಲಯದ ಆವರಣದಲ್ಲಿ ಶನಿವಾರ ಮಾಧ್ಯಮದವ ರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 60 ಸಾವಿರ ಶಾಲಾ ಕಟ್ಟಡಗಳಿದ್ದು, ಈ ಪೈಕಿ ಹಲವು ಶಾಲಾ ಕಟ್ಟಡಗಳು 50 ವರ್ಷಗಳ ಹಿಂದೆ ನಿರ್ಮಾಣವಾಗಿವೆ. ಇದರಲ್ಲಿ ಅನೇಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು,…

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸುವಲ್ಲಿ  ಡಾ.ಎಂ.ಚಿದಾನಂದಮೂರ್ತಿಗಳ ಪಾತ್ರ ಹಿರಿದು ಸಚಿವ ಎಸ್.ಸುರೇಶ್‍ಕುಮಾರ್
ಮೈಸೂರು

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸುವಲ್ಲಿ  ಡಾ.ಎಂ.ಚಿದಾನಂದಮೂರ್ತಿಗಳ ಪಾತ್ರ ಹಿರಿದು ಸಚಿವ ಎಸ್.ಸುರೇಶ್‍ಕುಮಾರ್

January 12, 2020

ಮೈಸೂರು, ಜ.11(ಪಿಎಂ)- ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸುವಲ್ಲಿ ಹಿರಿಯ ಸಾಹಿತಿ ಡಾ.ಎಂ. ಚಿದಾನಂದಮೂರ್ತಿ ಅವರು ಪ್ರಮುಖ ಪಾತ್ರ ವಹಿಸಿ ದ್ದರು. ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಸಚಿವ ಎಸ್.ಸುರೇಶ್‍ಕುಮಾರ್ ಸಂತಾಪ ಸೂಚಿಸಿದರು. ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂದಿಗೂ ತಮ್ಮ ನಂಬಿಕೆ ಜೊತೆಗೆ ರಾಜೀ ಮಾಡಿಕೊಳ್ಳದ ವ್ಯಕ್ತಿತ್ವ ಡಾ.ಚಿದಾನಂದಮೂರ್ತಿ ಅವರದು. ನಮ್ಮ ಭಾಷೆ, ನೆಲ, ಜಲ, ಗಡಿ ವಿಚಾರ ಬಂದಾಗ ರಕ್ಷಣೆಗೆ ಅಗ್ರಗಣ್ಯರಾಗಿ ನಿಲ್ಲುತ್ತಿದ್ದ ಧೀಮಂತರು. ನಮ್ಮ ಸಂಸ್ಕøತಿಯ ಪರಿಚಾರಕರವರು ಎಂದು…

ಸಿಎಎ, ಎನ್‍ಆರ್‍ಸಿ ಅಪಪ್ರಚಾರ ನಂಬಿದರೆ ನಾಶವಾಗುತ್ತೀರಿ!
ಮೈಸೂರು

ಸಿಎಎ, ಎನ್‍ಆರ್‍ಸಿ ಅಪಪ್ರಚಾರ ನಂಬಿದರೆ ನಾಶವಾಗುತ್ತೀರಿ!

January 11, 2020

ಮಂಡ್ಯ, ಜ.10(ನಾಗಯ್ಯ)- ಕೇಂದ್ರ ಸರ್ಕಾರ ಜಾರಿ ಗೊಳಿಸುತ್ತಿರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಮುಸ್ಲಿಂ ವಿರೋಧಿಯಾಗಿದೆ ಎಂದು ವಿರೋಧಿಗಳು ಬಿಂಬಿಸುತ್ತಿದ್ದಾರೆ. ಒಂದು ವೇಳೆ ಮುಸ್ಲಿಮರು ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳ ಮಾತುಗಳನ್ನು ಕೇಳಿದರೆ ನೀವೇ ನಾಶವಾಗುತ್ತೀರಿ ಎಂದು ಕೇಂದ್ರ ಸಚಿವ ಸದಾನಂದಗೌಡ ಎಚ್ಚರಿಸಿದರು. ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿಂದು ನಡೆದ ಪೌರತ್ವ ತಿದ್ದುಪಡಿ ಕಾಯಿದೆ-2019ರ ಜನ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಮುಸ್ಲಿಂ ಬಾಂಧವರ ವಿರೋಧಿಗಳಲ್ಲ. ನರೇಂದ್ರ ಮೋದಿ…

ಶಿಕ್ಷಣದ ಮೂಲಕ ಪ್ರತಿಯೊಂದು ಸಮಸ್ಯೆಗೂ ಪರಿಹಾರ
ಮೈಸೂರು

ಶಿಕ್ಷಣದ ಮೂಲಕ ಪ್ರತಿಯೊಂದು ಸಮಸ್ಯೆಗೂ ಪರಿಹಾರ

January 11, 2020

ಮದ್ದೂರು, ಜ.10- ಪ್ರತಿಯೊಂದು ಸಮಸ್ಯೆಗೂ ಶಿಕ್ಷಣದ ಮೂಲಕ ಪರಿಹಾರ ಸಿಗಲಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದಿಲ್ಲಿ ಅಭಿಪ್ರಾಯಪಟ್ಟರು. ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಬೆಂಗ ಳೂರಿನ ಎಮ್‍ಟೆಕ್ ಸಾಫ್ಟ್‍ವೇರ್ ಕಂಪನಿ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಯನ್ನು ಗುರುತಿಸಿ ಇಲ್ಲಿಗೆ ಮೂಲ ಸೌಕರ್ಯ ನೀಡಲು ಮುಂದಾಗಿರುವ ಎಮ್‍ಟೆಕ್ ಸಾಫ್ಟ್‍ವೇರ್ ಕಂಪನಿ ಕ್ರಮ ಶ್ಲಾಘಿಸಿದರು. ಅಲ್ಲದೇ ಇಂತಹ ಕಂಪನಿಗಳು ಸರ್ಕಾರಿ…

ನಮ್ಮ ಕಣ್ಮುಂದೆ ಜೀವನ ಸ್ಫೂರ್ತಿ ಸಾಕ್ಷಿ
ಮೈಸೂರು

ನಮ್ಮ ಕಣ್ಮುಂದೆ ಜೀವನ ಸ್ಫೂರ್ತಿ ಸಾಕ್ಷಿ

January 11, 2020

ಮೈಸೂರು,ಜ.10(ಆರ್‍ಕೆ)- ಎರಡೂ ಕೈಗಳಿಲ್ಲದಿದ್ದರೇನು, ಆತ್ಮವಿಶ್ವಾಸ ವೊಂದಿದ್ದರೆ ಕಾರನ್ನೂ ಚಾಲನೆ ಮಾಡ ಬಹುದೆಂಬುದನ್ನು ವಿಕ್ರಂ ಅಗ್ನಿಹೋತ್ರಿ ಸಾಬೀತುಪಡಿಸಿದ್ದಾರೆ. ಮೈಸೂರಿನ ಆರ್.ಟಿ.ನಗರದ ಯುಎಸ್‍ಎ ಫಾರಂನಲ್ಲಿ ಜನವರಿ 3ರಿಂದ 5ರವರೆಗೆ ನಡೆದ 3 ದಿನಗಳ ವಾರ್ಷಿಕ ರೋಟರಿ ಜಿಲ್ಲಾ 3181 ಸಮ್ಮೇಳನ ‘ಸಂಕಲ್ಪ -2020’ದಲ್ಲಿ ಎರಡೂ ಕೈಗಳಿಲ್ಲದ ವಿಕ್ರಂ ಅಗ್ನಿಹೋತ್ರಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. 42 ವರ್ಷದ ವಿಕ್ರಂ 7 ವರ್ಷದವರಿ ದ್ದಾಗ ಎರಡೂ ಕೈಗಳನ್ನು ಕಳೆದುಕೊಂ ಡರು. ಸ್ನೇಹಿತರೊಂದಿಗೆ ಆಟವಾಡುತ್ತಿ ದ್ದಾಗ ವಿದ್ಯುತ್ ವೈರ್‍ಗೆ ಕೈಗಳು ತಗುಲಿ ಅವಘಡ ಸಂಭವಿಸಿತ್ತು….

ಕಳೆದುಕೊಂಡದ್ದು `ಕೈ’ ಅಷ್ಟೆ, ಬದುಕಿನ ಭರವಸೆಯನಲ್ಲ!
ಮೈಸೂರು

ಕಳೆದುಕೊಂಡದ್ದು `ಕೈ’ ಅಷ್ಟೆ, ಬದುಕಿನ ಭರವಸೆಯನಲ್ಲ!

January 11, 2020

ಮೈಸೂರು,ಜ.10(ಆರ್‍ಕೆ)- 2016ರ ಅಕ್ಟೋಬರ್ 4ರಂದು ಮನೆ ತಾರಸಿ ಮೇಲೆ ನಿಂತು ಹೆಲಿಕಾಪ್ಟರ್ ಹಾರಾ ಡುತ್ತಿದ್ದುದನ್ನು ನೋಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ, ದುರಂತ ಸಂಭವಿಸಿ ಬಲಗೈ ಕಳೆದುಕೊಂಡ ಮೇಘನಾ ದೇಹದ ಒಂದು ಭಾಗ ಊನವಾ ದರೂ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. 13ನೇ ವರ್ಷದವಳಾಗಿದ್ದ ಮೇಘನಾ ದಸರಾ ಮಹೋತ್ಸವದ ಸಂದರ್ಭ ಮೈಸೂರಿನಲ್ಲಿ ಹಾರಾಡುತ್ತಿದ್ದ ಹೆಲಿ ಕಾಪ್ಟರ್ ನೋಡುವ ಖುಷಿಯಲ್ಲಿ ವಿದ್ಯುತ್ ತಂತಿ ತಗುಲಿ ಸುಟ್ಟ ಗಾಯ ಗಳಾದ ಆಕೆಯ ಬಲಗೈ ಅನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಮೈಸೂರಿನ ಪಡುವಾರಹಳ್ಳಿ 7ನೇ…

`ಫ್ರೀ ಕಾಶ್ಮೀರ’ ಫಲಕ ಪ್ರದರ್ಶನ ವಿರುದ್ಧ ಮೈಸೂರಲ್ಲಿ ಎಬಿವಿಪಿ ಪ್ರತಿಭಟನೆ
ಮೈಸೂರು

`ಫ್ರೀ ಕಾಶ್ಮೀರ’ ಫಲಕ ಪ್ರದರ್ಶನ ವಿರುದ್ಧ ಮೈಸೂರಲ್ಲಿ ಎಬಿವಿಪಿ ಪ್ರತಿಭಟನೆ

January 11, 2020

ಮೈಸೂರು,ಜ.10(ಎಂಟಿವೈ)- ಮೈಸೂರು ವಿವಿ ಆವರಣದಲ್ಲಿ `ಫ್ರೀ ಕಾಶ್ಮೀರ’ ಫಲಕ ಪ್ರದ ರ್ಶಿಸಿದವರು ಹಾಗೂ ಪ್ರತಿಭಟನೆ ಆಯೋಜ ಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರ ಹಿಸಿ, ಗನ್‍ಹೌಸ್ ವೃತ್ತದಲ್ಲಿ ಎಬಿವಿಪಿ ನೇತೃತ್ವ ದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ದೆಹಲಿಯ ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬುಧವಾರ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಂಶೋಧ ಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಿವಿಎಸ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯ ಕರ್ತರು ನಡೆಸಿದ ಪ್ರತಿಭಟನೆ ವೇಳೆ ಯುವತಿ ಯೊಬ್ಬರು `ಫ್ರೀ…

1 74 75 76 77 78 330
Translate »