ಸಿಎಎ, ಎನ್‍ಆರ್‍ಸಿ ಅಪಪ್ರಚಾರ ನಂಬಿದರೆ ನಾಶವಾಗುತ್ತೀರಿ!
ಮೈಸೂರು

ಸಿಎಎ, ಎನ್‍ಆರ್‍ಸಿ ಅಪಪ್ರಚಾರ ನಂಬಿದರೆ ನಾಶವಾಗುತ್ತೀರಿ!

January 11, 2020

ಮಂಡ್ಯ, ಜ.10(ನಾಗಯ್ಯ)- ಕೇಂದ್ರ ಸರ್ಕಾರ ಜಾರಿ ಗೊಳಿಸುತ್ತಿರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಮುಸ್ಲಿಂ ವಿರೋಧಿಯಾಗಿದೆ ಎಂದು ವಿರೋಧಿಗಳು ಬಿಂಬಿಸುತ್ತಿದ್ದಾರೆ. ಒಂದು ವೇಳೆ ಮುಸ್ಲಿಮರು ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳ ಮಾತುಗಳನ್ನು ಕೇಳಿದರೆ ನೀವೇ ನಾಶವಾಗುತ್ತೀರಿ ಎಂದು ಕೇಂದ್ರ ಸಚಿವ ಸದಾನಂದಗೌಡ ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿಂದು ನಡೆದ ಪೌರತ್ವ ತಿದ್ದುಪಡಿ ಕಾಯಿದೆ-2019ರ ಜನ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಮುಸ್ಲಿಂ ಬಾಂಧವರ ವಿರೋಧಿಗಳಲ್ಲ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ 685 ಮುಸಲ್ಮಾ ನರಿಗೆ ಪೌರತ್ವ ಕೊಡಲಾಗಿದೆ. ತ್ರಿವಳಿ ತಲಾಖ್ ನಿಷೇ ಧಿಸಿ ಮುಸ್ಲಿಂ ತಾಯಂದಿರನ್ನು ರಕ್ಷಣೆ ಮಾಡಿದ್ದೇವೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸುತ್ತಾ ಬಂದಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ರದ್ಧತಿ ಮಾಡಿದ ನಂತರ, ಒಂದೇ ಒಂದು ಬಾಂಬ್ ದಾಳಿ, ಉಗ್ರರ ಉಪಟಳ ಸಂಪೂರ್ಣವಾಗಿ ಬಂದ್ ಆಗಿದೆ. ಅಲ್ಲಿ ಶಾಲೆಗೆ ಮಕ್ಕಳು ಧೈರ್ಯದಿಂದ ಹೋಗುತ್ತಿದ್ದಾರೆ. ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದರು.

ಸ್ವಾತಂತ್ರ್ಯ ಬಂದಾಗ ಪಾಕಿಸ್ತಾನದಲ್ಲಿ ಶೇ.23ರಷ್ಟಿದ್ದ ಹಿಂದೂಗಳು, 2015ರ ವರದಿ ಪ್ರಕಾರ ಶೇ.3ರಷ್ಟಿ ದ್ದಾರೆ. ಆದರೆ ಭಾರತದಲ್ಲಿ ಸ್ವಾತಂತ್ರ್ಯ ಸಂದರ್ಭದಲ್ಲಿ ಶೇ.11.8ರಷ್ಟಿದ್ದ ಮುಸ್ಲಿಮರು ಪ್ರಸ್ತುತ ಶೇ.18.6 ರಷ್ಟಿ ದ್ದಾರೆ. ಬಾಂಗ್ಲಾ, ಪಾಕಿಸ್ತಾನ, ಆಫ್ಘಾನಿಸ್ತಾನ ಇಸ್ಲಾ ಮಿಕ್ ದೇಶ ಎಂದು ಘೋಷಣೆ ಮಾಡಿಕೊಂಡಿವೆ. ಆದರೆ, ಭಾರತ ಎಲ್ಲಾ ಧರ್ಮೀಯರನ್ನೊಳಗೊಂಡ ಜಾತ್ಯಾತೀತ ದೇಶವಾಗಿದೆ. ನಮ್ಮ ದೇಶದಲ್ಲಿ ಮುಸ್ಲಿಂರಿಗೆ ಸಿಗುವ ಗೌರವ ಮುಸ್ಲಿಂ ರಾಷ್ಟ್ರಗಳಲ್ಲಿ ಸಿಗುವುದಿಲ್ಲ ಎಂದರು.

ದೇಶಕ್ಕೆ ಅಕ್ರಮವಾಗಿ ನುಸುಳಿರುವವರನ್ನು ಎನ್‍ಆರ್‍ಸಿ ಮೂಲಕ ಹೊರ ಹಾಕುತ್ತೇವೆ. ಸಿಎಎ ಮತ್ತು ಎನ್‍ಆರ್‍ಸಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಮುಸ್ಲಿಂ ಬಾಂಧವರು ಅರಿತುಕೊಳ್ಳಬೇಕು. ಮುಸ್ಲಿಂರನ್ನು ದೇಶ ದಿಂದ ಹೊರಗಡೆ ಹಾಕುತ್ತಾರೆ ಎಂಬ ಸುಳ್ಳು ಮಾತು ಗಳನ್ನು ನಂಬಿದರೆ ನೀವೇ ನಾಶವಾಗುತ್ತೀರಾ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ನಮ್ಮ ಸರ್ಕಾರ ನೊಂದ ವರ, ಬಡವರ ದೀನ ದಲಿತರ ಪರವಾಗಿ ಇದೆ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕು ಎಂದರು.

ಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನಾತ್ಮಕವಾಗಿದೆ. ಮಾನವೀಯ ಮೌಲ್ಯ ಸಾರುವ ಸಮಾಜ ಸುಧಾರಣೆ ಕಾನೂನು ಇದಾಗಿದೆ. ರಾಜ್ಯ ಸಭೆಯಲ್ಲಿ ಬಿಜೆಪಿ 99 ಸದಸ್ಯರನ್ನು ಹೊಂದಿದೆ. ಆದರೂ ಕಾಯಿದೆ ಪರವಾಗಿ 122 ಮತಗಳು ಚಲಾವಣೆಗೊಂಡಿದ್ದು, ಸಂವಿಧಾನ ದತ್ತವಾಗಿ ಅಂಗೀಕಾರಗೊಂಡಿದೆ ಎಂದರು.

ಸಂವಿಧಾನದ ಯಾವುದೇ ಅಂಶಗಳಿಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಕಾಂಗ್ರೆಸ್, ಮಮತಾ ಬ್ಯಾನರ್ಜಿ ಸೇರಿದಂತೆ ಸಂಘ ಸಂಸ್ಥೆಗಳು ಸಿಎಎ ಹಾಗೂ ಎನ್‍ಆರ್‍ಸಿ ಹೊಂದಿಕೆ ಮಾಡಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಶಾಸಕ ಕೆ.ಸಿ.ನಾರಾಯಣಗೌಡ ಸಭೆಗೆ ಆಗಮಿಸಿ ದಾಗ ಮಂಡ್ಯದಲ್ಲಿ ಬಿಜೆಪಿ ಬೆಳಗಲು ನೀವು ಮಂತ್ರಿ ಯಾಗುತ್ತೀರಾ, ಈಗಾಗಲೇ ನೀವು ಶಾಸಕರಾಗಿ ಜನರ ವಿಶ್ವಾಸ ಗಳಿಸಿದ್ದೀರಾ. ಅದೇ ರೀತಿ ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ಬಿಜೆಪಿ ಪಕ್ಷ ಸಂಘಟನೆ ಮಾಡಿ ಮುನ್ನಡೆಸಬೇಕು. ನಿಮಗೆ ಮಂತ್ರಿಸ್ಥಾನ ಬೇಗ ಸಿಗಲಿ ಎಂದು ಶುಭ ಹಾರೈಸಿದರು.

ನಗರಸಭೆ ಸದಸ್ಯ ಎಂ.ಪಿ.ಅರುಣ್‍ಕುಮಾರ್, ಮನ್ ಮುಲ್ ನಿರ್ದೇಶಕ ಸಾದೊಳಲು ಸ್ವಾಮಿ, ಬಿಜೆಪಿ ರಾಜ್ಯ ಯುವ ಮೋರ್ಚಾ ಘಟಕದ ಕಾರ್ಯದರ್ಶಿ ಎಚ್.ಆರ್.ಅಶೋಕ್‍ಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ವಿವೇಕ್, ಗ್ರಾಮಾಂತರ ಘಟಕದ ಅಧ್ಯಕ್ಷೆ ಸುಜಾತಾ ರಮೇಶ್, ಮಾಜಿ ಶಾಸಕ ಎಚ್. ಹೊನ್ನಪ್ಪ, ಮುಖಂಡರಾದ ಕೆ.ಎಸ್.ನಂಜುಂಡೇ ಗೌಡ, ಡಾ.ಸಿದ್ದರಾಮಯ್ಯ, ಎನ್.ಶಿವಣ್ಣ ಇದ್ದರು.

ಸಿದ್ದರಾಮಯ್ಯಗೆ ಮಾನಸಿಕ ಖಿನ್ನತೆ: ಡಿವಿಎಸ್
ಮಂಡ್ಯ,ಜ.10(ನಾಗಯ್ಯ)- ಸರ್ಕಾರಿ ಗೂಟದ ಕಾರು ಹೋಗಿ ಸ್ವಂತ ಕಾರಿನಲ್ಲಿ ಓಡಾಡುವ ಪರಿಸ್ಥಿತಿ ಬಂದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಲೇವಡಿ ಮಾಡಿದರು.

ನಗರದ ವಕೀಲರ ಭವನದಲ್ಲಿ ನಡೆದ ಸಿಎಎ ಮತ್ತು ಎನ್‍ಆರ್‍ಸಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತ ಕಳೆದು ಕೊಂಡವರಂತೆ ವರ್ತಿಸುತ್ತಿದ್ದಾರೆ. ಸುಗಮ ವಾಗಿ ನಡೆಯುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಇನ್ನಿಲ್ಲದ ಕುತಂತ್ರ ಮಾಡುತ್ತಿ ದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎನ್‍ಆರ್‍ಸಿ ಮತ್ತು ಸಿಎಎ ವಿಚಾರವಾಗಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ನಾಯಕರು ಜನರಲ್ಲಿ ಸೃಷ್ಟಿ ಸುತ್ತಿರುವ ಗೊಂದಲದ ವಾತಾವರಣವೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ವಿಶ್ವ ಬ್ಯಾಂಕ್ ವರದಿ ಬಗ್ಗೆ ಪ್ರತಿಕ್ರಿಯಿ ಸಿದ ಅವರು, ನಾವು ನಂಬರ್ ಒನ್ ಆಗಿ ರುವ ಹಲವು ಕ್ಷೇತ್ರಗಳಿವೆ. ವಿಶ್ವದ ಆರ್ಥಿ ಕತೆಯಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಯಾವುದೇ ಸರ್ಕಾರದ ಆಡಳಿತದಲ್ಲಿ ಆರ್ಥಿಕ ದಿವಾಳಿ ಎಂಬುದು ಒಮ್ಮೆಲೇ ಬರುವುದಿಲ್ಲ. ಇದಕ್ಕೆ ಹಿಂದಿನ ಸರ್ಕಾರಗಳ ಆಡಳಿತವೂ ಕಾರಣ ವಾಗಿರುತ್ತದೆ. ವಿನಾಕಾರಣ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ವಿಚಾರ ವಾಗಿ ಯಡಿಯೂರಪ್ಪನವರಿಗೆ ಶಹಬ್ಬಾಸ್ ಗಿರಿ ಕೊಡಲೇಬೇಕು. ಇಳಿವಯಸ್ಸಿನಲ್ಲೂ ಯಡಿಯೂರಪ್ಪನವರು ಸಮರ್ಥವಾಗಿ ಆಡಳಿತ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಲ್ಲಿ ಆರ್ಥಿಕ ದಿವಾಳಿ ಸಮಸ್ಯೆ ಉದ್ಬವಿಸ ದಂತೆ ನೋಡಿಕೊಂಡಿದ್ದಾರೆ ಎಂದರು.

ಸಂಪುಟ ವಿಸ್ತರಣೆ ವಿಚಾರವಾಗಿ ನಾವೆಲ್ಲಾ ಅವರಿಗೆ ಮಾತು ಕೊಟ್ಟಿದ್ದೇವೆ. ಸಂಪುಟ ರಚನೆಯಲ್ಲಿ ಮಧ್ಯ ಪ್ರವೇಶಿ ಸುವುದಿಲ್ಲವೆಂದು ನೀಡಿರುವ ಮಾತಿನ ಭರವಸೆಯಂತೆಯೇ ನಡೆದುಕೊಳ್ಳುತ್ತೇವೆ. ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗೆ ಬಿಟ್ಟಿದ್ದು, ಅನರ್ಹ ನೂತನ ಶಾಸಕರ ಜೊತೆಗೆ ಬಿಜೆಪಿ ಶಾಸಕ ರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ನಮ್ಮ ದೇನೂ ತಕರಾರಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Translate »