ಬೇಲೂರಿನಲ್ಲಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನ
ಹಾಸನ

ಬೇಲೂರಿನಲ್ಲಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನ

January 12, 2020

ಬೇಲೂರು, ಜ.11- ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನಿಂದ ಜರುಗಿದ 8ನೇ ಸಾಹಿತ್ಯ ಸಮ್ಮೇಳನ ಶನಿವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಿತು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮೂಲಕ ಸಮ್ಮೇಳಕ್ಕೆ ಚಾಲನೆ ದೊರೆಯಿತು. ಪುರಸಭೆ ಆವರಣದಲ್ಲಿ ಸಮ್ಮೇಳನಾಧ್ಯಕ್ಷ ಬೇಲೂರು ರಘುನಂದ್, ಪತ್ನಿ ಲಕ್ಷ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಹಾಗೂ ಕಸಾಪ ಅಧ್ಯಕ್ಷ ಬಿ.ಎಂ.ರವೀಶ್‍ರನ್ನು ರಥದಲ್ಲಿ ಕೂರಿಸಿ, ಮೆರವಣಿಗೆಗೆ ಪಿಎಸ್‍ಐ ಅಜೇಯ್‍ಕುಮಾರ್ ಚಾಲನೆ ನೀಡಿದರು. ಬಸವೇಶ್ವರ ವೃತ್ತದ ಮೂಲಕ ಹತ್ತಾರು ಕಲಾತಂಡಗಳೊಂದಿಗೆ ಸಾಗಿದ ಮೆರವಣಿಗೆ ಚನ್ನಕೇಶವ ದೇಗುಲ ಬಳಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಪರಿಷತ್ ಗೌರವಾಧ್ಯಕ್ಷ ಹೆಚ್.ಎಂ.ದಯಾನಂದ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಇತರರು ಭಾಗವಹಿಸಿದ್ದರು.

ನೇಗಿಲ ಧರ್ಮ ಉಳಿದರೆ ದೇಶ: ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಮುಂಭಾಗದಲ್ಲಿ ಜರುಗಿದ ಸಮ್ಮೇಳನ ಉದ್ದೇಶಿಸಿ ಸಮ್ಮೇಳನಾಧ್ಯಕ್ಷ ಬೇಲೂರು ರಘುನಂದನ್ ಮಾತನಾಡಿದರು. ಇಡೀ ಭೂಮಿಯೇ ರಾಸಾಯನಿಕಗೊಳ್ಳು ತ್ತಿದ್ದು, ನೇಗಿಲು ಧರ್ಮ ಉಳಿಸುವ ಮೂಲಕ ದೇಶ ಸುಭದ್ರಗೊಳಿಸಬೇಕು ಎಂದರು.

ಸಾಹಿತ್ಯಿಕ ಭಾಷೆ ಸಾಮಾಜಿಕ ಭಾಷೆಯಾಗಿ ಸಂಸ್ಕøತಿ ಉಳಿಯಬೇಕು. ಆಗ ಮಾತ್ರ ಭಾಷೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಸಮ್ಮೇಳನದಲ್ಲಿ ಚಲನಚಿತ್ರ ನಟದ ಮಂಡ್ಯರಮೇಶ್, ಶಾಸಕ ಕೆ.ಎಸ್. ಲಿಂಗೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಪ್ಪಾಜಿಗೌಡ, ತಾಲೂಕು ಕಸಾಪ ಅಧ್ಯಕ್ಷ ಬಿ.ಎಂ.ರವೀಶ್, ಗೌರವಾಧ್ಯಕ್ಷ ಹೆಚ್.ಎಂ.ದಯಾ ನಂದ್, ಜಿಲ್ಲಾ ಕಸಾಪ ಅಧ್ಯಕ್ಷ ನಾ.ಮಂಜೇ ಗೌಡ, ಗೌರವಾಧ್ಯಕ್ಷ ರವಿ ನಾಕಲಗೂಡು, ನಿಕಟಪೂರ್ವ ಅಧ್ಯಕ್ಷ ಹೆಚ್.ಎಂ.ದಯಾನಂದ್, ಸಾಹಿತಿ ಬೇಲೂರು ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಜಿ.ಬಿ.ರಂಗೇಗೌಡ, ಉಪಾಧ್ಯಕ್ಷೆ ಜಮುನಾ ಅಣ್ಣಪ್ಪ, ಮಾಜಿ ಪುರಸಭಾ ಅಧ್ಯಕ್ಷ ಬಿ.ಸಿ. ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಗೌರವಾ ಕಾರ್ಯದರ್ಶಿಗಳಾದ ಹೆಬ್ಬಾಳು ಹಾಲಪ್ಪ, ಕುಮಾರಸ್ವಾಮಿ ಇತರÀರಿದ್ದರು.

Translate »