ನಮ್ಮ ಕಣ್ಮುಂದೆ ಜೀವನ ಸ್ಫೂರ್ತಿ ಸಾಕ್ಷಿ
ಮೈಸೂರು

ನಮ್ಮ ಕಣ್ಮುಂದೆ ಜೀವನ ಸ್ಫೂರ್ತಿ ಸಾಕ್ಷಿ

January 11, 2020

ಮೈಸೂರು,ಜ.10(ಆರ್‍ಕೆ)- ಎರಡೂ ಕೈಗಳಿಲ್ಲದಿದ್ದರೇನು, ಆತ್ಮವಿಶ್ವಾಸ ವೊಂದಿದ್ದರೆ ಕಾರನ್ನೂ ಚಾಲನೆ ಮಾಡ ಬಹುದೆಂಬುದನ್ನು ವಿಕ್ರಂ ಅಗ್ನಿಹೋತ್ರಿ ಸಾಬೀತುಪಡಿಸಿದ್ದಾರೆ.

ಮೈಸೂರಿನ ಆರ್.ಟಿ.ನಗರದ ಯುಎಸ್‍ಎ ಫಾರಂನಲ್ಲಿ ಜನವರಿ 3ರಿಂದ 5ರವರೆಗೆ ನಡೆದ 3 ದಿನಗಳ ವಾರ್ಷಿಕ ರೋಟರಿ ಜಿಲ್ಲಾ 3181 ಸಮ್ಮೇಳನ ‘ಸಂಕಲ್ಪ -2020’ದಲ್ಲಿ ಎರಡೂ ಕೈಗಳಿಲ್ಲದ ವಿಕ್ರಂ ಅಗ್ನಿಹೋತ್ರಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು.

42 ವರ್ಷದ ವಿಕ್ರಂ 7 ವರ್ಷದವರಿ ದ್ದಾಗ ಎರಡೂ ಕೈಗಳನ್ನು ಕಳೆದುಕೊಂ ಡರು. ಸ್ನೇಹಿತರೊಂದಿಗೆ ಆಟವಾಡುತ್ತಿ ದ್ದಾಗ ವಿದ್ಯುತ್ ವೈರ್‍ಗೆ ಕೈಗಳು ತಗುಲಿ ಅವಘಡ ಸಂಭವಿಸಿತ್ತು. ಎರಡೂ ಕೈಗಳು ಇಲ್ಲವಾದರೂ ವಿಕ್ರಂ ಮಾತ್ರ ತಾನು ಅಂಗ ವಿಕಲ ಎಂದು ಚಿಂತಿಸುತ್ತಾ ಕೂರಲಿಲ್ಲ.

ಕೈಗಳಿಲ್ಲದೆ ಕಾರು ಚಾಲನೆ ಮಾಡುತ್ತಿದ್ದ ವಿದೇಶೀ ವ್ಯಕ್ತಿಯ ವಿಡಿಯೋ ನೋಡಿ ಕೇವಲ 3 ತಿಂಗಳಲ್ಲಿ ನಾನೂ ಕಾಲಿನಿಂದಲೇ ಕಾರು ಚಾಲನೆ ಮಾಡುವುದನ್ನು ಕಲಿತೆ ಎಂದು ವಿಕ್ರಂ ಹರ್ಷ ವ್ಯಕ್ತಪಡಿಸಿದರು. ಕೈಗಳಿಲ್ಲದೇ ಕಾರು ಚಾಲನೆ ಮಾಡುವ ವ್ಯಕ್ತಿ ಭಾರತದಲ್ಲೇ ಮೊದಲನೆಯವರಾಗಿ ವಿಕ್ರಂ ಗುರ್ತಿಸಿಕೊಂಡಿರುವುದು ವಿಶೇಷ.

ಗ್ವಾಲಿಯರ್‍ನಲ್ಲಿ ಐಪಿಎಸ್ ಅಧಿಕಾರಿ (ಈಗ ನಿವೃತ್ತರು) ವಿನಯ್‍ಕಾಂತ ಅಗ್ನಿ ಹೋತ್ರಿ ಮತ್ತು ವಿಜಯಲಕ್ಷ್ಮಿ ಅಗ್ನಿಹೋತ್ರಿ (ಈಗ ಬದುಕಿಲ್ಲ) ದಂಪತಿ ಮಗನಾಗಿ ಜನಿಸಿದ ವಿಕ್ರಂ ಅವರಿಗೆ, ತಂದೆಯ ಆಶೀ ರ್ವಾದ, ಸಹೋದರ ವಿವೇಕ ಅವರ ಸಹಕಾರ ಆಧಾರಸ್ತಂಭವಾಗಿದೆ.

ಡಿಎಲ್: ಎರಡೂ ಕೈಗಳಿಲ್ಲದಿದ್ದರೂ ಪರಿಷ್ಕøತ ಮಾರುತಿ ಸೆಲೆರಿಯೋ ಎಜಿಎಸ್ (ಆಟೋ ಗೇರ್ ಶಿಫ್ಟ್) ಕಾರನ್ನು ಚಾಲನೆ ಮಾಡುವ ವಿಕ್ರಂಗೆ ಇಂದೋರ್ ಆರ್‍ಟಿಓ 2016ರ ಸೆಪ್ಟೆಂಬರ್ 30ರಂದು ಚಾಲನಾ ಪರವಾನಗಿ (ಆಐ) ನೀಡಿದೆ. ಡಿಎಲ್ ಪಡೆಯುವುದು ಕಷ್ಟದ ಕೆಲಸ. 2015ರಲ್ಲೇ ನಾನು ಕಾರು ಖರೀದಿಸಿದ್ದರೂ ಡಿಎಲ್ ಪಡೆಯಲು ವರ್ಷ ಕಾಯಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ಮುಂಬೈ, ಲಂಡನ್ ಮತ್ತು ಜರ್ಮನಿ ಯಲ್ಲಿ ವ್ಯಾಸಂಗ ಮಾಡಿರುವ ವಿಕ್ರಂ ಅವರು, ಬಲಗಾಲಲ್ಲೇ ಬರೆದು 1989ರಲ್ಲಿ ಬಿ.ಕಾಂ ಮತ್ತು 1991ರಲ್ಲಿ ಎಂಎ ಪದವಿ ಪಡೆದರು. ತಮ್ಮ 23ನೇ ವಯಸ್ಸಿನಲ್ಲಿ ಎಲ್‍ಎಲ್‍ಬಿ ಪೂರೈಸಿದರು.

ಫುಟ್‍ಬಾಲ್ ಆಟಗಾರರೂ ಆಗಿರುವ ವಿಕ್ರಂ, ಇಂದೋರ್‍ನ ಯಶವಂತ ಕ್ಲಬ್ ಸಂಚಾಲಕರಾಗಿದ್ದಾರೆ. ಮುಂಬೈನ ನ್ಯಾಷ ನಲ್ ಸ್ಪೋಟ್ರ್ಸ್ ಕ್ಲಬ್ ಆಫ್ ಇಂಡಿಯಾ ದಲ್ಲಿ ಈಜುವುದನ್ನು ಕಲಿತಿದ್ದಾರೆ. ವಿಠಲ್ ಸ್ಪಾರ್ಕ್ ವೆಲ್‍ಫೇರ್ ಸೊಸೈಟಿಯ ಅಧ್ಯಕ್ಷ ರಾಗಿ ಅಂಗವಿಕಲರ ಕ್ಷೇಮಪಾಲನೆ ಸೇವೆ ಮಾಡುತ್ತಿರುವ ವಿಕ್ರಂ ಸಾಹಸವನ್ನು ರೋಟರಿ ಮಿಡ್‍ಟೌನ್ ಅಧ್ಯಕ್ಷ ರೊ. ಎ.ಎನ್. ಅಯ್ಯಣ್ಣ ಅವರು ಬಹಳವಾಗಿ ಪ್ರಶಂಸಿಸಿದ್ದಾರೆ.

Translate »