ಕಳೆದುಕೊಂಡದ್ದು `ಕೈ’ ಅಷ್ಟೆ, ಬದುಕಿನ ಭರವಸೆಯನಲ್ಲ!
ಮೈಸೂರು

ಕಳೆದುಕೊಂಡದ್ದು `ಕೈ’ ಅಷ್ಟೆ, ಬದುಕಿನ ಭರವಸೆಯನಲ್ಲ!

January 11, 2020

ಮೈಸೂರು,ಜ.10(ಆರ್‍ಕೆ)- 2016ರ ಅಕ್ಟೋಬರ್ 4ರಂದು ಮನೆ ತಾರಸಿ ಮೇಲೆ ನಿಂತು ಹೆಲಿಕಾಪ್ಟರ್ ಹಾರಾ ಡುತ್ತಿದ್ದುದನ್ನು ನೋಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ, ದುರಂತ ಸಂಭವಿಸಿ ಬಲಗೈ ಕಳೆದುಕೊಂಡ ಮೇಘನಾ ದೇಹದ ಒಂದು ಭಾಗ ಊನವಾ ದರೂ ಆತ್ಮವಿಶ್ವಾಸ ಕಳೆದುಕೊಂಡಿಲ್ಲ.

13ನೇ ವರ್ಷದವಳಾಗಿದ್ದ ಮೇಘನಾ ದಸರಾ ಮಹೋತ್ಸವದ ಸಂದರ್ಭ ಮೈಸೂರಿನಲ್ಲಿ ಹಾರಾಡುತ್ತಿದ್ದ ಹೆಲಿ ಕಾಪ್ಟರ್ ನೋಡುವ ಖುಷಿಯಲ್ಲಿ ವಿದ್ಯುತ್ ತಂತಿ ತಗುಲಿ ಸುಟ್ಟ ಗಾಯ ಗಳಾದ ಆಕೆಯ ಬಲಗೈ ಅನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.

ಮೈಸೂರಿನ ಪಡುವಾರಹಳ್ಳಿ 7ನೇ ಮೇನ್ ವಾಸಿ ಎಲ್.ಬಿ.ಅರುಣ್ ಕುಮಾರ್, ಎಂ.ಎನ್.ಇಂದಿರಾ ದಂಪತಿ ಮಗಳಾದ ಮೇಘನಾಗೆ ಸಹೋದರಿ ವರ್ಷಿತಾ ಧೈರ್ಯ ತುಂಬಿ, ಆತ್ಮವಿಶ್ವಾಸ ಮೂಡಿಸಿದ್ದಾರೆ.

Meghana

ಘಟನೆಯಲ್ಲಿ ತನ್ನ ಬಲಗೈ ಕಳೆದು ಕೊಂಡರೂ ಆತ್ಮವಿಶ್ವಾಸ ಕಳೆದು ಕೊಳ್ಳದ ಮೇಘನಾ, ಓದು ಮುಂದು ವರಿಸಿ ಶೇ.73ರಷ್ಟು ಅಂಕ ಗಳಿಸುವುದ ರೊಂದಿಗೆ ಎಸ್‍ಎಸ್‍ಎಲ್‍ಸಿ ಪಾಸು ಮಾಡಿದ್ದಳು. ಆ ವೇಳೆ ಅವಳ ಪರ ವಾಗಿ ಬೇರೋರ್ವ ವಿದ್ಯಾರ್ಥಿನಿ ಪರೀಕ್ಷೆಯನ್ನು ಬರೆದಿದ್ದರು.

ಆದರೆ ನಂತರ ಎಡಗೈಯಲ್ಲೇ ಬರೆಯುವುದನ್ನು ಅಭ್ಯಾಸ ಮಾಡಿ, ಪುಷ್ಕರಿಣಿ ವಿದ್ಯಾಶ್ರಮದಲ್ಲಿ ಕಾಲೇಜಿಗೆ 2ನೇ ಟಾಪರ್ ಆಗಿ ಪ್ರಥಮ ಪಿಯುಸಿ ಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಪ್ರಸ್ತುತ ದ್ವಿತೀಯ ಪಿಯುಸಿ ಕಾಮರ್ಸ್ ಓದುತ್ತಿರುವ ಮೇಘನಾ ರ್ಯಾಂಕ್ ಗಳಿಸುವ ಮಹದಾಸೆಯೊಂ ದಿಗೆ ಶ್ರಮ ಪಡುತ್ತಿದ್ದಾಳೆ. ತಾನೇ ನಿತ್ಯ ತನ್ನ ಕೆಲಸ ಮಾಡುತ್ತಾಳೆ. ಎಡಗೈನಲ್ಲೇ ಬರೆಯುತ್ತಾಳೆ. ಯಾವ ಕೆಲಸಕ್ಕೂ ಯಾರ ಮೇಲೂ ಅವಲಂಬಿತವಾಗದ ಮೇಘನಾ ಆತ್ಮವಿಶ್ವಾಸ ಕುಂದಿಲ್ಲ. ಬದಲಾಗಿ ಸಾಧಿಸುವ ಛಲ ಹೊಂದಿದ್ದಾಳೆ ಎನ್ನು ತ್ತಾರೆ ತಂದೆ ಅರುಣ್‍ಕುಮಾರ್.

Translate »