ಮಂಡ್ಯ, ಜ.10- ಬೇಬಿ ಬೆಟ್ಟದ ಸುತ್ತಮುತ್ತ ಅನಧಿಕೃತ ಗಣಿಗಾರಿಕೆ ನಡೆಯು ತ್ತಿರುವುದರಿಂದ ಅನುಮತಿಕೊಟ್ಟಂತಹ 22 ಸಿ ಫಾರಂ, 30 ಕ್ರಷರ್ ಹಾಗೂ 30 ಕ್ವಾರಿಗಳನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಅಕ್ರಮ ಗಣಿಗಾರಿಕೆ ಹಾಗೂ ಜಲ್ಲಿ ಕಲ್ಲುಪುಡಿ ಘಟಕಗಳ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಂಡವಪುರ ತಾಲೂಕು, ಬೇಬಿ ಬೆಟ್ಟ ಗ್ರಾಮ ವ್ಯಾಪ್ತಿಯ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆ ಸಂಬಂಧಿಸಿದಂತೆ ಗಣಿಗಾರಿಕೆ ನಿಯಂತ್ರಿಸಲು ಶಾಶ್ವತ ಚೆಕ್ ಪೋಸ್ಟ್‍ಗಳನ್ನು ನಿರ್ಮಾಣ…
ಮಾನವ ಜೀವನದ ಎಲ್ಲಾ ಕ್ಷೇತ್ರದ ಮೇಲೂ ಕುವೆಂಪು ಸಾಹಿತ್ಯ ಬೆಳಕು ಚೆಲ್ಲುತ್ತಿದೆ
January 11, 2020ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮ ದಿನಾಚರಣೆಯಲ್ಲಿ ಸಾಹಿತಿ ಪ್ರೊ.ರಾಮೇಗೌಡ ಸ್ಮರಣೆ ಮೈಸೂರು,ಜ.10(ಎಂಟಿವೈ)-ರಾಷ್ಟ್ರ ಕವಿ ಕುವೆಂಪು ಅವರನ್ನು ಹೊರತುಪಡಿಸಿ 20ನೇ ಶತಮಾನವನ್ನು ನೋಡಲು ಸಾಧ್ಯವೇ ಇಲ್ಲ. ಅವರು ವಿಜ್ಞಾನ, ಆರ್ಥಿಕ, ಸಾಮಾ ಜಿಕ, ಮಾನವಶಾಸ್ತ್ರ, ತತ್ವಶಾಸ್ತ್ರ ಸೇರಿದಂತೆ ಎಲ್ಲಾ ವಿದ್ಯಮಾನಗಳ ಮೇಲೂ ತಮ್ಮ ಸಾಹಿ ತ್ಯದ ಮೂಲಕ ಬೆಳಕು ಚೆಲ್ಲಿದ ಮಹಾನ್ ಚೇತನ ಎನಿಸಿದ್ದಾರೆ ಎಂದು ಸಾಹಿತಿ ಪ್ರೊ. ರಾಮೇಗೌಡ(ರಾಗೌ) ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ಲಯ, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ…
ಹೊಸ ವರ್ಷದ ಮೊದಲ ದಿನ ಮಾಡಿದ ಸಂಕಲ್ಪ ಮರೆತು ದುರಭ್ಯಾಸಗಳಿಗೆ ದಾಸರಾಗುತ್ತಿದ್ದೇವೆ
January 11, 2020ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಬಿ.ಕೆ.ಶಾರದಾ ಅಭಿಮತ ಎಂಡಿಜೆಎ ಕ್ಯಾಲೆಂಡರ್, ಸ್ಮರಣಿಕೆ ಬಿಡುಗಡೆ ಕಾರ್ಯಕ್ರಮ ಮೈಸೂರು, ಜ.10(ಆರ್‍ಕೆಬಿ)- ಕಳೆದ 2019ರ ಮೊದಲ ದಿನ ಒಬ್ಬರಿಗೊಬ್ಬರು ಶುಭಾಶಯ ಕೋರಿ, ಈ ವರ್ಷ ನಮ್ಮ ದುರಭ್ಯಾಸಗಳನ್ನು ಬಿಡುತ್ತೇವೆಂದು ಸಂಕಲ್ಪ ಮಾಡಿಕೊಳ್ಳುವ ನಾವು ಅದ ನ್ನೊಮ್ಮೆ ಪರಿಶೀಲಿಸಿಕೊಂಡಾಗ ನಮ್ಮ ಜೀವನವನ್ನು ಎಷ್ಟರ ಮಟ್ಟಿಗೆ ಉತ್ತಮ ಪಡಿಸಿಕೊಂಡಿದ್ದೇವೆ ಎನ್ನುವುದನ್ನು ಹುಡು ಕಲು ಹೊರಟರೆ ನಿರಾಶೆಯೇ ಉತ್ತರ ದೊರೆ ಯುತ್ತದೆ ಎಂದು ಮೈಸೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜ್ಞಾನ ಸರೋ ವರ ರಾಜಯೋಗ ರಿಟ್ರೀಟ್ ಸೆಂಟರ್…
ಮೈಸೂರು ಪಾಲಿಕೆಯ ಅವೈಜ್ಞಾನಿಕ ಕಾಮಗಾರಿ
January 11, 2020ಮೈಸೂರು,ಜ.10(ವೈಡಿಎಸ್)-ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ ಮನೆಯ ವಾಟರ್ ವೈಪ್, ಕೇಬಲ್ ಗಳು ತುಂಡಾಗಿವೆ. ಹಳೇ ಯುಜಿಡಿ ಲೈನ್‍ಗೆ ಹಾನಿಯಾ ಗಿದ್ದು, ದುರ್ವಾಸನೆ ಬೀರುತ್ತಿದೆ. ರಸ್ತೆಯೆಲ್ಲಾ ಧೂಳಿನಿಂದ ಕೂಡಿದ್ದು, ಅನಾರೋಗ್ಯಕ್ಕೆ ತುತ್ತಾಗುವ ಭೀತಿ ಕಾಡುತ್ತಿದೆ. ಇದು ವಿದ್ಯಾರಣ್ಯಪುರಂ ನಿವಾಸಿಗಳ ಅಳಲು. ನಗರಪಾಲಿಕೆಯು ಸುಮಾರು 4 ಕೋಟಿ ರೂ. ವೆಚ್ಚ ದಲ್ಲಿ ಯುಜಿಡಿ ಲೈನ್ ಅಳವಡಿಕೆ ಕಾಮಗಾರಿಯನ್ನು ಕೈಗೆತ್ತಿ ಕೊಂಡಿದ್ದು, ಇದು ಸೂಯೇಜ್ ಫಾರಂನಿಂದ ಆರಂಭ ವಾಗಿ ವಿದ್ಯಾರಣ್ಯಪುರಂನ 23ನೇ ಅಡ್ಡ ರಸ್ತೆ ಮೂಲಕ 4ನೇ ಮುಖ್ಯ ರಸ್ತೆಯ ಶಿವಗ್ಯಾಸ್- ಸಾರ್ವಜನಿಕರ…
ದರೋಡೆ: ಮೂವರು ಆರೋಪಿಗಳ ಸೆರೆ : ಕಾರು ಸೇರಿ 8.17 ಲಕ್ಷ ಮೌಲ್ಯದ ವಸ್ತುಗಳ ವಶ
January 11, 2020ಚನ್ನರಾಯಪಟ್ಟಣ, ಜ.10-ದರೋಡೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವ ಚನ್ನರಾಯಪಟ್ಟಣ ಪೊಲೀಸರು ಮಾರುತಿ ಬ್ರೀಜಾ ಕಾರು ಸೇರಿದಂತೆ 8.17 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಹೊಸರೋಡು ನಿವಾಸಿ ಸಯ್ಯದ್ ಶಬ್ಬೀರ್(23), ಕೋರಮಂಗಲದ ತೇಜಸ್ ಯಾದವ್(20) ಮತ್ತು ಗೋಪಾಲ(20) ಬಂಧಿತ ದರೋಡೆಕೋರರಾಗಿದ್ದು, ಇವರ ಜೊತೆಯಲ್ಲೇ ದರೋಡೆ ನಡೆಸಿದ್ದ ಶಿವಮೊಗ್ಗದ ಶಾನ್ ನವಾಜ್ ಮತ್ತು ಬೆಂಗಳೂರಿನ ಮಹಮದ್ ಆಶಂ ಅವರಿಗಾಗಿ ಹುಡುಕಾಟ ನಡೆದಿದೆ. ವಿವರ: ಚನ್ನರಾಯಪಟ್ಟಣ ಹೃದಯ ಭಾಗದಲ್ಲಿ ಇರುವ ಯೋಗೇಶ್ ಪೆಟ್ರೋಲ್ ಬಂಕ್‍ಗೆ ಜ.7ರಂದು ಬೆಳಗಿನ ಜಾವ…
ಶ್ರೀಕಂಠೇಶ್ವರಸ್ವಾಮಿ ದೇಗುಲ ಆಸ್ತಿ ರಕ್ಷಿಸಿ: ಶಾಸಕರ ಅಧ್ಯಕ್ಷತೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಆದೇಶ
January 11, 2020ನಂಜನಗೂಡು, ಜ.10-ನಗರಸಭೆ ಹಾಗೂ ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸುತ್ತಲಿನ ಒತ್ತುವರಿ ತೆರವುಗೊಳಿಸಿ, ದೇವಸ್ಥಾನಕ್ಕೆ ಸೇರಿದ ಸ್ಥಿರಾಸ್ತಿಗಳ ರಕ್ಷಣೆಗೆÉ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಅಭಿರಾವ್ ಜಿ.ಶಂಕರ್ ಆದೇಶಿಸಿದರು. ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಶಾಸಕ ಬಿ.ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ದೇವಾಲಯದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಭಕ್ತರು ನೀಡಿದ ಕಾಣಿಕೆಯ ಹಣದಲ್ಲೇ ದೇವಾಲಯವನ್ನು ಅಭಿವೃದ್ಧಿಪಡಿಸಲು ಮುಂದಾದರೂ ಕೇಂದ್ರ ಪುರಾತತ್ವ ಇಲಾಖೆಯಿಂದ ಅಡ್ಡಿ ಉಂಟಾಗುತ್ತಿದೆ…
ಭೇರ್ಯದಲ್ಲಿ ಮಾಂಸಹಾರಿ ಹೋಟೆಲ್ ಮಾಲೀಕನ ಹತ್ಯೆ
January 11, 2020ಭೇರ್ಯ, ಜ.10(ಮಹೇಶ್)-ಹಂದಿ ಮಾಂಸದ ಹೋಟೆಲ್ ಮಾಲೀಕನನ್ನು ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ಭೇರ್ಯ ಗ್ರಾಮದಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಕಂಚಿನಕೆರೆ ಗ್ರಾಮದ ಶಿವಕುಮಾರ್(48) ಹತ್ಯೆಗೀಡಾದವರಾಗಿದ್ದು, ಇವರು ಹಲವಾರು ತಿಂಗಳುಗಳಿಂದ ಭೇರ್ಯ ಗ್ರಾಮದಲ್ಲಿ ಹಂದಿ ಮಾಂಸದ ಹೋಟೆಲ್ ನಡೆಸುತ್ತಿದ್ದಾರೆ. ಕಳೆದ ರಾತ್ರಿ ಇವರು ಮನೆಗೆ ಹೋಗಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಕುಟುಂಬಸ್ಥರು ತಮ್ಮ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದರು. ಸಂಬಂಧಿಕರು ಹೋಟೆಲ್ ಬಳಿ ಬಂದು ಬೀಗ ಹಾಕದೇ ಮುಚ್ಚಿದ್ದ ಬಾಗಿಲು ತೆರೆದು ನೋಡಿದಾಗ ಶಿವಕುಮಾರ್ ಹತ್ಯೆಗೀಡಾಗಿರುವುದು ಕಂಡು ಬಂದಿದೆ. ಶಿವಕುಮಾರ್…
ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿ ತೆರಳುತ್ತಿದ್ದ ರೈತನಿಂದ 5.50 ಲಕ್ಷ ದೋಚಿದ ದುಷ್ಕರ್ಮಿಗಳು
January 11, 2020ಹಾಡಹಗಲೇ ಹುಣಸೂರು ಪಟ್ಟಣದಲ್ಲಿ ದುಷ್ಕøತ್ಯ ಹುಣಸೂರು, ಜ.10(ಕೆಕೆ)-ರೈತರೊಬ್ಬರು ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುವಾಗ ಬೈಕ್‍ನಲ್ಲಿ ಇಬ್ಬರು ದುಷ್ಕರ್ಮಿಗಳು ಹಣದ ಚೀಲವನ್ನು ಕಸಿದು ಪರಾರಿಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಗರದಲ್ಲಿ ನಡೆದಿದೆ. ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ರೈತ ಶಿವಣ್ಣೇಗೌಡ ಹಣ ಕಳೆದುಕೊಂಡವರು. ಇವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಫಸಲು ಮಾರಾಟ ಮಾಡಿದ್ದರು. ಇದರ ಹಣವನ್ನು ಶುಂಠಿ ವ್ಯಾಪಾರಿ ಹುಣಸೂರಿನ ಕೆನರಾ ಬ್ಯಾಂಕ್‍ನಲ್ಲಿರುವ ಇವರ ಖಾತೆಗೆ ಜಮಾ ಮಾಡಿದ್ದ. ಇಂದು ಬೆಳಿಗ್ಗೆ ಶಿವಣ್ಣೇಗೌಡ ತಮ್ಮ ಪತ್ನಿ…
ಮೈಸೂರು ರೈಲು ನಿಲ್ದಾಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ
January 10, 2020ಮೈಸೂರು, ಜ.9(ಆರ್‍ಕೆ)- ಪ್ರಯಾಣಿಕರ ಸುರ ಕ್ಷತೆಗಾಗಿ ರೈಲ್ವೆ ಇಲಾಖೆಯು ಮೈಸೂರು ರೈಲು ನಿಲ್ದಾಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಏರ್ಪಡಿಸಿದೆ. ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡು ‘ಐ ಲವ್ ಮೈಸೂರು’, ‘ಸೆಲ್ಫಿ ಸ್ಪಾಟ್’, ‘ಲೈಫ್ ಈಸ್ ಎ ಜರ್ನಿ’ ಪ್ರಯಾಣಿಕರ ಪ್ರತಿಮೆಗಳೊಂದಿಗೆ ಬಹಳಷ್ಟು ಬದಲಾವಣೆಯೊಂದಿಗೆ ಮೈಸೂರು ರೈಲು ನಿಲ್ದಾಣ ವನ್ನು ನವೀಕರಿಸಿರುವ ಇಲಾಖೆಯು, ಇದೀಗ ಪ್ರಯಾ ಣಿಕರ ಸುರಕ್ಷತೆಗಾಗಿ ಮತ್ತಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರವ್ಯಾಪ್ತಿ ಭದ್ರತಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ‘ನಿರ್ಭಯ’ ಅನುದಾನ ದಲ್ಲಿ 34 ಸಿಸಿ ಕ್ಯಾಮರಾಗಳು ಹಾಗೂ…
ರೈಲು ಹಳಿ ಸುರಕ್ಷತೆಗಾಗಿ ರೈಲ್ವೆ ಕೆಳ ಸೇತುವೆಗಳ ಬಳಿ ಹೈಟ್‍ಗೇಜ್‍ಗಳ ಅಳವಡಿಕೆ
January 10, 2020ಮೈಸೂರು,ಜ.9(ಆರ್‍ಕೆ)- ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆ ಗಳ ರೋಡ್ ಅಂಡರ್ ಬ್ರಿಡ್ಜ್ (ಆರ್‍ಯುಬಿ) ಗಳ ಮೂಲಕ ಭಾರೀ ಸರಕು ಸಾಗಣೆ ವಾಹನ ಗಳು ಇನ್ನು ಮುಂದೆ ನುಸುಳಲು ಸಾಧ್ಯವಿಲ್ಲ. ರೈಲ್ವೆ ಇಲಾಖೆಯು ರೋಡ್ ಅಂಡರ್ ಬ್ರಿಡ್ಜ್‍ಗಳ ಇಕ್ಕೆಲಗಳ ತುಸು ದೂರದ ಅಂತರ ದಲ್ಲಿ ಕಬ್ಬಿಣದ ಭಾರೀ ಗಾತ್ರದ ಹೈಟ್‍ಗೇಜ್ ಗಳನ್ನು ಅಳವಡಿಸುವ ಯೋಜನೆಗಳನ್ನು ಕೈಗೊಂಡಿದೆ. ಮೈಸೂರಿನ ಮೇದರ್ ಬ್ಲಾಕ್ ಮತ್ತು ಯಾದವಗಿರಿ ಮಧ್ಯೆ ಹಾದು ಹೋಗಿ ರುವ ರೈಲು ಹಳಿಯ ರೋಡ್ ಅಂಡರ್ ಬ್ರಿಡ್ಜ್‍ನ ಎರಡೂ…










