ಮೈಸೂರು,ಜ.9(ಆರ್‍ಕೆ)- ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆ ಗಳ ರೋಡ್ ಅಂಡರ್ ಬ್ರಿಡ್ಜ್ (ಆರ್‍ಯುಬಿ) ಗಳ ಮೂಲಕ ಭಾರೀ ಸರಕು ಸಾಗಣೆ ವಾಹನ ಗಳು ಇನ್ನು ಮುಂದೆ ನುಸುಳಲು ಸಾಧ್ಯವಿಲ್ಲ.
ರೈಲ್ವೆ ಇಲಾಖೆಯು ರೋಡ್ ಅಂಡರ್ ಬ್ರಿಡ್ಜ್‍ಗಳ ಇಕ್ಕೆಲಗಳ ತುಸು ದೂರದ ಅಂತರ ದಲ್ಲಿ ಕಬ್ಬಿಣದ ಭಾರೀ ಗಾತ್ರದ ಹೈಟ್‍ಗೇಜ್ ಗಳನ್ನು ಅಳವಡಿಸುವ ಯೋಜನೆಗಳನ್ನು ಕೈಗೊಂಡಿದೆ. ಮೈಸೂರಿನ ಮೇದರ್ ಬ್ಲಾಕ್ ಮತ್ತು ಯಾದವಗಿರಿ ಮಧ್ಯೆ ಹಾದು ಹೋಗಿ ರುವ ರೈಲು ಹಳಿಯ ರೋಡ್ ಅಂಡರ್ ಬ್ರಿಡ್ಜ್‍ನ ಎರಡೂ ಕಡೆಯ 3 ರಸ್ತೆಗಳಿಗೆ ಅಡ್ಡಲಾಗಿ ಕಬ್ಬಿಣದ ಬ್ಯಾರಿಯರ್‍ಗಳನ್ನು ಅಳವಡಿಸಲಾಗಿದೆ. ರೈಲು ಹಳಿಯ ಕೆಳಗಿನ ಬೇಸ್‍ಗಿಂತ ಒಂದು ಅಡಿ ತಳಭಾಗದ ಎತ್ತರಕ್ಕೆ ಈ ಗೇಜ್‍ಗಳನ್ನು ಅಳವಡಿಸಿರು ವುದರಿಂದ ಸರಕು ಸಾಗಣೆ ಭಾರೀ ವಾಹನಗಳು (ಎತ್ತರದ ವಾಹನಗಳು) ಆ ಮಾರ್ಗ ಸಂಚರಿಸಲು ಸಾಧ್ಯವಿಲ್ಲ.
ಎತ್ತರದ ಭಾರೀ ವಾಹನಗಳು ನುಗ್ಗಿ ಒಂದು ವೇಳೆ ರೈಲು ಹಳಿಯ ಶೀಲಿಂಗ್‍ಗೆ ಡಿಕ್ಕಿ ಹೊಡೆದಲ್ಲಿ ರೈಲು ಹಳಿ ಜಖಂ ಗೊಂಡು ರೈಲುಗಳು ಹಳಿ ತಪ್ಪಿ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಅದನ್ನು ತಡೆಗಟ್ಟಲು ರೈಲ್ವೆ ಇಲಾಖೆಯು ಈ ಹೈಟ್‍ಗೇಜ್‍ಗಳನ್ನು ಅಳವಡಿಸುತ್ತಿದೆ.
ಮೈಸೂರಿನ ಕೆ.ಜಿ.ಕೊಪ್ಪಲು, ಅಶೋಕ ಪುರಂ, ಮಹಾರಾಜ ಕಾಲೇಜು ಮೈದಾನ ಬಳಿ ಹಾಗೂ ರಿಂಗ್‍ರಸ್ತೆಯಲ್ಲಿ ಬರುವ ರೋಡ್ ಅಂಡರ್ ಬ್ರಿಡ್ಜ್‍ಗಳನ್ನು ಅಳವಡಿ ಸುವುದಲ್ಲದೆ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲೂ ಈ ಯೋಜನೆ ಅನು ಷ್ಠಾನ ಮಾಡುವುದಾಗಿ ರೈಲ್ವೆ ಇಲಾಖೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಗಳು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಒಂದು ಆರ್‍ಯುಬಿ ಬಳಿ ಹೆವಿ ಗೂಡ್ಸ್ ವಾಹನವೊಂದು ನುಸು ಳಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಚಲಿಸುತ್ತಿದ್ದ ರೈಲು ಹಳಿ ತಪ್ಪಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಆರ್‍ಯುಬಿಗಳ ಬಳಿ ಹೈಟ್‍ಗೇಜ್‍ಗಳನ್ನು ಅಳವಡಿಸಲು ಮುಂದಾ ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.14ರಿಂದ 19ರವರೆಗೆ ಬಹುನಿರೀಕ್ಷಿತ ಬಹುರೂಪಿ
ಮೈಸೂರು, ಜ.9(ಎಸ್‍ಬಿಡಿ)- ರಂಗಾಸಕ್ತರ ಬಹುನಿರೀಕ್ಷಿತ `ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ-2020’ ಫೆ.14ರಿಂದ 19ರವರೆಗೆ ಮೇಳೈ ಸಲಿದೆ. ನಿರ್ದೇಶಕರ ಆಯ್ಕೆ ವಿಳಂಬವಾದ್ದರಿಂದಾಗಿ ಈ ಬಾರಿಯ ಬಹುರೂಪಿ ನಾಟಕೋತ್ಸವ ತಿಂಗಳು ತಡವಾಗಿ ಆಯೋಜನೆಯಾಗುತ್ತಿದೆ. ಸದ್ಯ ಬಹು ರೂಪಿಗೆ ದಿನಾಂಕ ನಿಗಧಿಪಡಿಸಿದ್ದು, ಥೀಮ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಜ.14ರಂದು ಪ್ರಕಟಿಸ ಲಾಗುವುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಬಹುರೂಪಿ ಸಂಚಾಲಕರು, ಹಿರಿಯ ರಂಗ ಕರ್ಮಿಗಳು ಸೇರಿದಂತೆ ರಂಗಾಯಣದ ಹಿರಿಯ ಕಲಾವಿದರು ಕಾರ್ಯಕ್ರಮ ರೂಪರೇಷೆ ಸಿದ್ಧ ಮಾಡುತ್ತಿದ್ದಾರೆ. ಕಾರ್ಯಪ್ಪನವರು ಅಧಿಕಾರ ವಹಿಸಿಕೊಂಡ ದಿನವೇ 2 ಸಭೆ ನಡೆಸಿ, ಕಲಾ ವಿದರ ಅಭಿಪ್ರಾಯ ಸಂಗ್ರಹಿಸಿದರು. ಅಂದಿ ನಿಂದ ಹಿರಿಯ ಕಲಾವಿದರು ಸೇರಿದಂತೆ ಎಲ್ಲರ ಸಹಕಾರ ದೊಂದಿಗೆ ಬಹುರೂಪಿಗೆ ಭರದ ಸಿದ್ಧತೆ ನಡೆಸು ತ್ತಿದ್ದಾರೆ. ಸಮಿತಿ 30ಕ್ಕೂ ಹೆಚ್ಚು ಕನ್ನಡ ಹಾಗೂ 30ಕ್ಕೂ ಹೆಚ್ಚು ಪರಭಾಷಾ ನಾಟಕಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಎಲ್ಲರೂ ಅತ್ಯಂತ ಉತ್ಸಾಹದಿಂದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಉದ್ಘಾಟಕರು, ಥೀಮ್, ವಿಚಾರ ಸಂಕಿರಣ, ಸಿನಿಮೋತ್ಸವದ ಬಗ್ಗೆ ಬಿರು ಸಿನ ಚರ್ಚೆ ನಡೆದಿದೆ. ಜೊತೆಗೆ ರಂಗಾಯಣ ದಲ್ಲಿ ರಂಗಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ.