ಮಾನವ ಜೀವನದ ಎಲ್ಲಾ ಕ್ಷೇತ್ರದ ಮೇಲೂ ಕುವೆಂಪು ಸಾಹಿತ್ಯ ಬೆಳಕು ಚೆಲ್ಲುತ್ತಿದೆ
ಮೈಸೂರು

ಮಾನವ ಜೀವನದ ಎಲ್ಲಾ ಕ್ಷೇತ್ರದ ಮೇಲೂ ಕುವೆಂಪು ಸಾಹಿತ್ಯ ಬೆಳಕು ಚೆಲ್ಲುತ್ತಿದೆ

January 11, 2020

ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮ ದಿನಾಚರಣೆಯಲ್ಲಿ ಸಾಹಿತಿ ಪ್ರೊ.ರಾಮೇಗೌಡ ಸ್ಮರಣೆ

ಮೈಸೂರು,ಜ.10(ಎಂಟಿವೈ)-ರಾಷ್ಟ್ರ ಕವಿ ಕುವೆಂಪು ಅವರನ್ನು ಹೊರತುಪಡಿಸಿ 20ನೇ ಶತಮಾನವನ್ನು ನೋಡಲು ಸಾಧ್ಯವೇ ಇಲ್ಲ. ಅವರು ವಿಜ್ಞಾನ, ಆರ್ಥಿಕ, ಸಾಮಾ ಜಿಕ, ಮಾನವಶಾಸ್ತ್ರ, ತತ್ವಶಾಸ್ತ್ರ ಸೇರಿದಂತೆ ಎಲ್ಲಾ ವಿದ್ಯಮಾನಗಳ ಮೇಲೂ ತಮ್ಮ ಸಾಹಿ ತ್ಯದ ಮೂಲಕ ಬೆಳಕು ಚೆಲ್ಲಿದ ಮಹಾನ್ ಚೇತನ ಎನಿಸಿದ್ದಾರೆ ಎಂದು ಸಾಹಿತಿ ಪ್ರೊ. ರಾಮೇಗೌಡ(ರಾಗೌ) ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ಲಯ, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಶುಕ್ರ ವಾರ ಕಾವೇರಿ ಸಭಾಂಗಣದಲ್ಲಿ ಆಯೋ ಜಿಸಿದ್ದ `ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮ’ ದಲ್ಲಿ ಮಾತನಾಡಿದ ಅವರು, ಕುವೆಂಪು ವ್ಯಕ್ತಿತ್ವ, ವಿಚಾರಧಾರೆಗಳನ್ನು ಕೇವಲ ತಿಳಿಯುವು ದಕಷ್ಟೇ ಸೀಮಿತಗೊಳಿಸದೆ, ಮನಸ್ಸಿಗೆ ತುಂಬಿಕೊಳ್ಳುವ ಪ್ರಯತ್ನ ಮಾಡಬೇಕು. ಅವರ ಜಯಂತಿಯನ್ನು ಆಚರಣೆಗೆ ಮಾತ್ರ ಸೀಮಿತವಾಗಿಸಿದರೆ ಕುವೆಂಪು ಅವರ ಸಂದೇಶ ಗಳು ಜನರಿಗೆ ತಲುಪುವುದಿಲ್ಲ ಎಂದರು.

ನಾವು ಎಷ್ಟರಮಟ್ಟಿಗೆ ಕುವೆಂಪು ಅವರ ವಿಚಾರಧಾರೆಗಳನ್ನು ಮನಸ್ಸಿಗೆ ತೆಗೆದು ಕೊಳ್ಳುತ್ತಿದ್ದೇವೆ ಎನ್ನುವುದು ಮುಖ್ಯ. ತಿಳಿದುಕೊಂಡ ವಿಚಾರವÀನ್ನು ಮನಸ್ಸಿಗೆ ತೆಗೆದುಕೊಳ್ಳದಿದ್ದರೆ ಅದು ಕ್ರಿಯೆಯಲ್ಲಿ ಕಾಣುವು ದಿಲ್ಲ. ಇಂತಹ ಹಿನ್ನಡೆಗಳಾದರೆ ಆಚರಣೆ ಗಳನ್ನು ಆಯೋಜಿಸಿದ್ದು ಸಾರ್ಥಕವಾ ಗುವುದಿಲ್ಲ. ಕುವೆಂಪು ಅವರು ಬಹುತೇಕ ಎಲ್ಲಾ ಕ್ಷೇತ್ರಗಳ ವಿದ್ಯಮಾನಗಳ ಮೇಲೂ ಸಾಹಿತ್ಯದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದನ್ನು ತಿಳಿದುಕೊಳ್ಳಲು ಅವರ ಸಾಹಿತ್ಯವನ್ನು ಓದಬೇಕು. ಆ ಎಲ್ಲಾ ಕ್ಷೇತ್ರಗಳ ಮಾಹಿತಿಯೂ ಸಿಗುತ್ತದೆ ಎಂದರು.

ನಾವು ಮೊದಲು ಕುವೆಂಪು ಅವರನ್ನು ಅರ್ಥಮಾಡಿಕೊಳ್ಳಬೇಕು. ಆ ನಂತರ ವಷ್ಟೇ ಅವರ ವಿಚಾರಧಾರೆಗಳು, ಸಾಹಿತ್ಯ ಅರ್ಥವಾಗುತ್ತದೆ. ಕುವೆಂಪು ಕುರಿತು ಅನೇಕ ಹೊಸ ವಿಷಯಗಳನ್ನು ಹೇಳು ವುದು ಬಾಕಿಯಿದೆ. ಆ ಕೆಲಸವನ್ನು ವಿಮರ್ಶ ಕರು ಮಾಡಬೇಕು. ಅವರ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಸರ್ವೋದಯ, ಸಮ ನ್ವಯ, ಪೂರ್ಣದೃಷ್ಟಿ ಅಗತ್ಯ. ಅಜ್ಞಾನ, ಮೌಢ್ಯ, ಶೋಷಣೆಯ ನಡುವೆ ಪರ್ಯಾಯ ಸಂಸ್ಕøತಿಯ ಚಿಂತನೆಯನ್ನು ಕುವೆಂಪು ಬಿತ್ತಿದ್ದರು. ಸ್ವಾಭಿಮಾನ ಸಂಸ್ಕø ತಿಯ ಪ್ರತೀಕ, ಆತ್ಮಸಾಕ್ಷಿಯ ಸಂಕೇತವೂ ಆಗಿದ್ದ ಅವರು, ಕನ್ನಡ ಸಾಹಿತ್ಯಕ್ಕೆ ಅಪಾರ ವಾದ ಕೊಡುಗೆ ನೀಡಿದ್ದಾರೆ. ವಚನಕಾರ ರನ್ನು ಹೊರತುಪಡಿಸಿದರೆ ಸಾಹಿತ್ಯದ ಮೂಲಕ ಪ್ರತಿಭಟನೆ ನಡೆಸಿದ ಮೊದಲಿ ಗರು ಎಂಬ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಬದುಕು ಬರಹ ಒಂದೇ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಕವಿತೆ ಗಳು ಭಾಷಾ ಆಂದೋಲನ ಸೃಷ್ಟಿಮಾಡಿದೆ. ಬರವಣಿಗೆಯ ಮೂಲಕವೇ ಚಳವಳಿ ರೂಪಿ ಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕುವೆಂಪು ಪರಿಚಯಿಸಿದ ಮಂತ್ರಮಾಂಗಲ್ಯ ಮಾದರಿಯನ್ನು ಅವರ ಕಾಲ ಘಟ್ಟದಲ್ಲಿ ಬೆಂಬಲಿಸಿದ ಸಂಘ, ಸಂಸ್ಥೆ, ವ್ಯಕ್ತಿಗಳು ಇಂದು ಎಲ್ಲಿದ್ದಾರೆ? ಮಂತ್ರ ಮಾಂಗಲ್ಯದ ಹೆಸರಿನಲ್ಲಿ ಸರಳವಾಗಿ ನಡೆಯಬೇಕಿದ್ದ ಮದುವೆಗಳು ಅದ್ಧೂರಿ ಯಾಗಿ ನಡೆಯುತ್ತಿವೆ. ಅವರ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಆಶಯ ನೆರವೇರಿದೆಯೇ? ಆರ್ಥಿಕವಾಗಿ ಸಮಾನತೆಯಾಗದೇ ಸಾಮಾಜಿಕ ಸಮಾ ನತೆಯನ್ನು ನಿರೀಕ್ಷಿಸಲು ಸಾಧ್ಯವೆ ಎಂದು ರಾಗಾ ಪ್ರಶ್ನಿಸಿದರು.

ಇದಕ್ಕು ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ ಮಾತನಾಡಿ, ಮಲೆ ನಾಡಿನ ಕುಗ್ರಾಮದಲ್ಲಿ ಜನಿಸಿದ ಕುವೆಂಪು, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದು ಕುಲ ಪತಿ ಸ್ಥಾನ ಅಲಂಕರಿಸಿದ್ದರು. ಕೆಲಸದ ಒತ್ತಡದ ನಡುವೆ ಅವರಿಗೆ ಹೆಚ್ಚು ಬರೆ ಯಲು ಅವಕಾಶ ಸಿಗುತ್ತಿರಲಿಲ್ಲ. ನಿವೃ ತ್ತಿಯ ಬಳಿಕವೇ ಅವರು ಸಂಪೂರ್ಣವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಕುವೆಂಪು ಅವರು ಕಾನೂರು ಹೆಗ್ಗಡತಿ ಬರೆಯುವಾಗ ತಮ್ಮ ಕಾದಂಬರಿಯ ಪಾತ್ರದೊಳಗೆ ಕಳೆದು ಹೋಗು ತ್ತಿದ್ದರು. ಅಣ್ಣ(ಕುವೆಂಪು) ಬರೆದ ಪ್ರತಿಗಳನ್ನು ಪ್ರತಿದಿನ ಓದುತ್ತಿದ್ದ ಅಮ್ಮ, ಅಣ್ಣನ ಜೊತೆಗೆ ಸಂವಾದಿಸುತ್ತಿದ್ದರು. ಆಗ ನಾನು ಚಿಕ್ಕವ ಳಾಗಿದ್ದ ಕಾರಣ ಅಷ್ಟು ಅರ್ಥ ವಾಗುತ್ತಿರಲಿಲ್ಲ ಎಂದು ಮನೆಯಲ್ಲಿ ಕಂಡ ಕುವೆಂಪು ಅವರ ಚಟುವಟಿಕೆಗಳ ಬಗ್ಗೆ ಮೆಲಕು ಹಾಕಿದರು.

ಕುವೆಂಪು ಸಾಹಿತ್ಯದ ವಿಚಾರ ಸಂಕಿರಣ: ಸ್ತ್ರೀ ಸಂವೇದನೆ, ದಲಿತ ಸಂವೇದನೆ, ರೈತ ಸಂವೇದನೆ, ಸಮಾನತಾ ಸಂವೇದನೆ ಸೇರಿ ದಂತೆ ವಿವಿಧ ವಿಷಯಗಳ ಬಗ್ಗೆ ಸಂಪ ನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಕರಾಮುವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲ ಸಚಿವ ಪ್ರೊ.ಬಿ.ರಮೇಶ್, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎನ್.ಆರ್. ಚಂದ್ರೇಗೌಡ ಇದ್ದರು.

Translate »