ಹೊಸ ವರ್ಷದ ಮೊದಲ ದಿನ ಮಾಡಿದ ಸಂಕಲ್ಪ ಮರೆತು ದುರಭ್ಯಾಸಗಳಿಗೆ ದಾಸರಾಗುತ್ತಿದ್ದೇವೆ
ಮೈಸೂರು

ಹೊಸ ವರ್ಷದ ಮೊದಲ ದಿನ ಮಾಡಿದ ಸಂಕಲ್ಪ ಮರೆತು ದುರಭ್ಯಾಸಗಳಿಗೆ ದಾಸರಾಗುತ್ತಿದ್ದೇವೆ

January 11, 2020
  • ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಬಿ.ಕೆ.ಶಾರದಾ ಅಭಿಮತ
  • ಎಂಡಿಜೆಎ ಕ್ಯಾಲೆಂಡರ್, ಸ್ಮರಣಿಕೆ ಬಿಡುಗಡೆ ಕಾರ್ಯಕ್ರಮ

ಮೈಸೂರು, ಜ.10(ಆರ್‍ಕೆಬಿ)- ಕಳೆದ 2019ರ ಮೊದಲ ದಿನ ಒಬ್ಬರಿಗೊಬ್ಬರು ಶುಭಾಶಯ ಕೋರಿ, ಈ ವರ್ಷ ನಮ್ಮ ದುರಭ್ಯಾಸಗಳನ್ನು ಬಿಡುತ್ತೇವೆಂದು ಸಂಕಲ್ಪ ಮಾಡಿಕೊಳ್ಳುವ ನಾವು ಅದ ನ್ನೊಮ್ಮೆ ಪರಿಶೀಲಿಸಿಕೊಂಡಾಗ ನಮ್ಮ ಜೀವನವನ್ನು ಎಷ್ಟರ ಮಟ್ಟಿಗೆ ಉತ್ತಮ ಪಡಿಸಿಕೊಂಡಿದ್ದೇವೆ ಎನ್ನುವುದನ್ನು ಹುಡು ಕಲು ಹೊರಟರೆ ನಿರಾಶೆಯೇ ಉತ್ತರ ದೊರೆ ಯುತ್ತದೆ ಎಂದು ಮೈಸೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜ್ಞಾನ ಸರೋ ವರ ರಾಜಯೋಗ ರಿಟ್ರೀಟ್ ಸೆಂಟರ್ ನಿರ್ದೇ ಶಕಿ ಬಿ.ಕೆ.ಶಾರದಾ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಪತ್ರಕರ್ತರ ಸಂಘದ 2020ರ ಕ್ಯಾಲೆಂಡರ್ ಹಾಗೂ ಸ್ಮರಣಿಕೆ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಾವಿಂದು ಹಿಂದಿನ ವರ್ಷದ ಎಲ್ಲಾ ಹಳೆಯ, ನಿರಾಶಾದಾ ಯಕ ಸಂಗತಿಗಳನ್ನು ಸಮಾಪ್ತಿಗೊಳಿಸಿ ಹೊಸ ಬೆಳವಣಿಗೆಯತ್ತ ಚಿಂತನೆ ನಡೆಸ ಬೇಕು. ಸದಾಕಾಲ ಮನಸ್ಸಿನಲ್ಲಿ ಶ್ರೇಷ್ಠ ಚಿಂತನೆಗಳನ್ನು ಮೂಡಿಸಿಕೊಳ್ಳಬೇಕು. ಇದಕ್ಕೆ ರಾಜ ಯೋಗ ಒಂದೇ ಉತ್ತಮ ಮಾರ್ಗ ಎಂದರು.

ವರ್ಷಾರಂಭದಲ್ಲಿ ಮಾಡಿದ ಸಂಕಲ್ಪ ವನ್ನು ಮರೆತು ಮತ್ತೆ ದುರಭ್ಯಾಸಗಳಿಗೆ ದಾಸರಾಗುತ್ತೇವೆ. ಹಾಗಾಗಿ ಇಂತಹ ಕೆಟ್ಟ ಪರಿಸ್ಥಿತಿ ತಪ್ಪಿಸಲು ನಾವು ಶುಭ ಸಂಕಲ್ಪದ ಜೊತೆಗೆ ದೃಢತೆಯನ್ನು ರೂಢಿಸಿಕೊಳ್ಳ ಬೇಕಾಗುತ್ತದೆ ಎಂದು ಹೇಳಿದರು.

ಜೀವನದಲ್ಲಿ ಏನಿದೆಯೋ ಅದನ್ನು ಒಪ್ಪಿಕೊಳ್ಳುವುದು (ಇಂಗ್ಲೀಷಿನ ಆಕ್ಸೆಪ್ಟ್), ಪರಿಸರಕ್ಕೆ, ಸುತ್ತಲ ವಾತಾವರಣಕ್ಕೆ ಹೊಂದಿಕೊಳ್ಳುವುದು (ಅಡ್ಜಸ್ಟ್), ಬೇಡದ (ಕೆಟ್ಟ) ವಿಷಯಗಳನ್ನು ತಪ್ಪಿಸುವುದು (ಅವಾಯ್ಡ್) ಈ ಮೂರು ಇಂಗ್ಲೀಷಿನ ‘ಎ’ ಅಂಶಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಸಮಾಜದಲ್ಲಿ ಶಾಂತಿ, ಸೌಹಾರ್ದ ವಾತಾವರಣ ಕಾಣಬಹುದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಮಾಜಿ ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ರಾಜ್ಯದಲ್ಲೇ ಅತ್ಯುತ್ತಮ ಕ್ರಿಯಾಶೀಲ ಪತ್ರ ಕರ್ತರ ಸಂಘ ಎಂಬ ಖ್ಯಾತಿ ಪಡೆದಿ ರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು, 80 ವರ್ಷಗಳಿಂದ ನಿರಂತರ ವಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಸಾಗಿ ಬಂದಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಜೊತೆಗೆ, ರಾಜಕಾರಣಿಗಳಿಗೂ ಸಲಹೆ, ಸೂಚನೆ, ಬೆಂಬಲ ನೀಡುತ್ತಾ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ (ಎಂಸಿಡಿಸಿಸಿ ಬ್ಯಾಂಕ್) ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಸಿದ್ಧಾರ್ಥ ಗ್ರೂಪ್ ಆಫ್ ಕಂಪನೀಸ್‍ನ ಮಾಲೀಕ ಪಿ.ವಿ.ಗಿರಿ ಅವರ ಪುತ್ರ ತರುಣ್ ಗಿರಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು.

Translate »