Tag: Mysore

ಫೆ.26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಸಿನಿಮಾಗಳ ಪ್ರದರ್ಶನ
ಮೈಸೂರು

ಫೆ.26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಸಿನಿಮಾಗಳ ಪ್ರದರ್ಶನ

January 10, 2020

ಬೆಂಗಳೂರು,ಜ.9-ಮುಂದಿನ ತಿಂಗಳು 26 ರಿಂದ ನಗರದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ ವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಚಲನಚಿತ್ರೋತ್ಸವದ ಲಾಂಛನ ವನ್ನು ಬಿಡುಗಡೆ ಮಾಡಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಲಾಂಛನ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಸಿ.ಸಿ. ಪಾಟೀಲ್, ಶಾಸಕ ಎಸ್.ಆರ್.ವಿಶ್ವನಾಥ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯ ದರ್ಶಿ ಪಿ.ಮಣಿವಣ್ಣನ್…

ಕಲಾರಸಿಕರ ಮನಸೆಳೆದ ‘ನೂಪುರ ನೃತ್ಯೋತ್ಸವ’
ಮೈಸೂರು

ಕಲಾರಸಿಕರ ಮನಸೆಳೆದ ‘ನೂಪುರ ನೃತ್ಯೋತ್ಸವ’

January 10, 2020

ಮೈಸೂರು, ಜ.9(ಎಂಕೆ)- ಮೈಸೂರಿನ ಕಲಾಮಂದಿರದಲ್ಲಿ ನೂಪುರ ನೃತ್ಯಾಲಯ ಆಯೋಜಿಸಿದ್ದ ‘ನೂಪುರ ನೃತ್ಯೋತ್ಸವ’ ಭರತನಾಟ್ಯ ಪ್ರಿಯರ ಮನಸೆಳೆಯಿತು. ಮಹಿಳೆಯರಿಂದಲೇ ಭರ್ತಿಯಾಗಿದ್ದ ವೇದಿಕೆಯಲ್ಲಿ ಭರತನಾಟ್ಯ ಕಲಾವಿದೆಯರಾದ ಪುಣ್ಯ, ತಾನಿಯ, ರೋಹಿಣಿ, ಹರಿಥಾ, ನಿಶಿತಾ, ಪೂರ್ಣಿಮಾ, ಆದ್ರ್ರ, ಲೀಶಾ ಮತ್ತು ನೇಶಾ ಅವರು, ಅಮೋಘ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ರಂಜಿಸಿದರು. ಗಣಪತಿ ಸ್ತುತಿಯೊಂದಿಗೆ ನೃತ್ಯ ಪ್ರಾರಂ ಭಿಸಿದ ಭರತನಾಟ್ಯ ಕಲಾವಿದೆಯರು, ಪುಷ್ಪಾಂ ಜಲಿ, ಅಲಿರುಪು, ಜತಿಸ್ವರ, ರಾಗಮಾಲಿಕೆಯ ಪದಂ, ಕೀರ್ತನಂ, ನಟೇಶ ಕೌತುವಂ, ತಿಲ್ಲಾಣ ಕೃತಿಗಳ ಗಾಯನಕ್ಕೆ ಆಕರ್ಷಕ…

ಕಾರ್ಮಿಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ
ಮೈಸೂರು

ಕಾರ್ಮಿಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

January 9, 2020

ಮೈಸೂರು,ಜ.8(ಎಂಟಿವೈ)-ಕಾರ್ಮಿಕ ಸಂಘ ಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾ ಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ, ಮೈಸೂರಿನಲ್ಲಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಗಳು ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿ ರುವ ವಾಹನಗಳ ಸಂಚಾರ ಎಂದಿನಂತೆ ರಸ್ತೆಗಿಳಿದಿದ್ದವು. ಮೈಸೂರು ನಗರದಲ್ಲಿ ಬುಧವಾರ ದಿನವಿಡೀ ಮುಷ್ಕರದ ಕಾವು ಕಾಣಲಿಲ್ಲ. ಮುಷ್ಕರದ ಕರೆಗೆ ಓಗೊಡದೆ ವರ್ತಕರು, ಉದ್ಯಮಿಗಳು ಎಂದಿನಂತೆ ವಹಿವಾಟು ನಡೆಸಿದರು. ಮಡಿಕೇರಿಯಲ್ಲಿ ಮಂಡ್ಯ ಡಿಪೊ ಬಸ್ ವೊಂದಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಇದರ ಹೊರತಾಗಿ…

ಸುವರ್ಣಾವತಿ ಮತ್ತಿತರ ಜಲಾಶಯಗಳಿಂದ ಬೆಳೆಗೆ ನೀರು ಹರಿಸುವ ಸಂಬಂಧ ಚರ್ಚೆ
ಮೈಸೂರು

ಸುವರ್ಣಾವತಿ ಮತ್ತಿತರ ಜಲಾಶಯಗಳಿಂದ ಬೆಳೆಗೆ ನೀರು ಹರಿಸುವ ಸಂಬಂಧ ಚರ್ಚೆ

January 9, 2020

ಮೈಸೂರು,ಜ.8-ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ, ಚಿಕ್ಕಹೊಳೆ ಮತ್ತು ನಲ್ಲೂರು ಅಮಾನಿಕೆರೆ ಜಲಾಶಯಗಳಿಂದ ಬೇಸಿಗೆ ಬೆಳೆಗಳಿಗೆ ನೀರು ಹಂಚಿಕೆ ಬಗ್ಗೆ ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಅವರು ಮಂಗಳವಾರ ಕಾಡಾ ಕಚೇರಿಯಲ್ಲಿ ಅಧಿಕಾರಿ ಗಳು ಮತ್ತು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಜಲಾಶಯದಲ್ಲಿನ ನೀರಿನ ಮಟ್ಟ ಸಮೀಕ್ಷೆ ವರದಿ ಆಧಾರಿತ ಮಾತನಾಡಿದ ಸಚಿವರು, ಸುವರ್ಣಾವತಿ ಜಲಾ ನಯನ ಪ್ರದೇಶದಲ್ಲಿ ಈ ಬಾರಿ ಸಾಧಾರಣ ಮಳೆಯಾಗಿದ್ದು, ಜಲಾಶಯದಲ್ಲಿ 1105.43 ಎಮ್‍ಸಿಎಫ್‍ಟಿ ನೀರು ಶೇಖರಣೆ ಯಾಗಿದೆ. ಜಲಾಶಯದ ಅಡಿಯಲ್ಲಿ ಒಟ್ಟು…

ಮೈಸೂರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಪರಿಣಾಮಕಾರಿ ಬೀದಿ ನಾಟಕ
ಮೈಸೂರು

ಮೈಸೂರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಪರಿಣಾಮಕಾರಿ ಬೀದಿ ನಾಟಕ

January 9, 2020

`ನಾವೆಲ್ಲಾ ಟೀಕು-ಟಾಕು… ಊರು ತುಂಬ ಪ್ಲಾಸ್ಟಿಕ್ಕು…’ 1969ಕ್ಕೆ ಮಿಸ್ಡ್‍ಕಾಲ್ ನೀಡಿ, ಸ್ವಚ್ಛ ಸರ್ವೇಕ್ಷಣೆಗೆ ಪ್ರತಿಕ್ರಿಯಿಸಿ ಮೈಸೂರು,ಜ.8(ಆರ್‍ಕೆಬಿ)- `ನಾವೆಲ್ಲಾ ಟೀಕು-ಟಾಕು… ಊರು ತುಂಬ ಪ್ಲಾಸ್ಟಿಕ್ಕು…’ ಪ್ಲಾಸ್ಟಿಕ್‍ನಿಂದ ಪರಿಸರ ಹಾಳಾಗುತ್ತಿ ರುವ ಕುರಿತ ಈ ಹಾಡು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಮೈಸೂರಿನ ಅಲ್ಲಲ್ಲಿ ಕೇಳಿ ಬರುತ್ತಿದೆ. ಏಳೆಂಟು ಜನರಿರುವ ಕಲಾವಿದರ ತಂಡ ಮೈಸೂರಿನ ಬೀದಿ ಬೀದಿಗಳಲ್ಲಿ ತಿರುಗಿ ಸ್ವಚ್ಛತೆಯ ಕುರಿತಂತೆ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮೈಸೂರನ್ನು ಮತ್ತೊಮ್ಮೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನಕ್ಕೆ…

ಓಆರ್‍ಐ ತಾಳೆಗರಿ ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ ನೀಡಲು ಚಿಂತನೆ
ಮೈಸೂರು

ಓಆರ್‍ಐ ತಾಳೆಗರಿ ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ ನೀಡಲು ಚಿಂತನೆ

January 9, 2020

 ಸಂಸದ ಪ್ರತಾಪ್ ಸಿಂಹ ಸಮ್ಮುಖದಲ್ಲಿ ತಾರಾ ಪ್ರಕಾಶನ ಜತೆ ಮಾತುಕತೆ  ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಸಿಸ್ಟಮ್ ತಂತ್ರಜ್ಞಾನ ಬಳಕೆ ಮೈಸೂರು,ಜ.8(ಪಿಎಂ)-ತಾಳೆಗರಿ ಹಸ್ತಪ್ರತಿಗಳು ಪ್ರಾಚೀನ ಕಾಲದ ಜ್ಞಾನ ಕಣಜ. ಇಂತಹ ಜ್ಞಾನ ಭಂಡಾರದ ಸಂರ ಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ (ಓಆರ್‍ಐ) `ಕೌಟಿಲ್ಯನ ಅರ್ಥಶಾಸ್ತ್ರ’ ಗ್ರಂಥದ ಮೂಲ ತಾಳೆಗರಿ ಹಸ್ತಪ್ರತಿ ಸೇರಿದಂತೆ 70 ಸಾವಿ ರಕ್ಕೂ ಹೆಚ್ಚು ತಾಳೆಗರಿ ಜ್ಞಾನ ಸಂಪತ್ತು ಶೇಖರಣೆಗೊಂಡು ಸಂರಕ್ಷಣೆಗೊಂಡಿವೆ. ಇದೀಗ ಇಲ್ಲಿನ ಹಸ್ತಪ್ರತಿಗಳಿಗೆ ಡಿಜಿ ಟಲ್ ಸ್ಪರ್ಶ…

ಇತ್ತೀಚೆಗೆ ಮೈಸೂರು ವಿವಿ ಘನತೆಗೆ ಧಕ್ಕೆಯಾಗುವಂತಹ ಬೆಳವಣಿಗೆ: ಶ್ರೀನಿವಾಸ ಪ್ರಸಾದ್ ವಿಷಾದ
ಮೈಸೂರು

ಇತ್ತೀಚೆಗೆ ಮೈಸೂರು ವಿವಿ ಘನತೆಗೆ ಧಕ್ಕೆಯಾಗುವಂತಹ ಬೆಳವಣಿಗೆ: ಶ್ರೀನಿವಾಸ ಪ್ರಸಾದ್ ವಿಷಾದ

January 9, 2020

ಮೈಸೂರು,ಜ.8(ಎಸ್‍ಪಿಎನ್)- ರಾಷ್ಟ್ರಕವಿ ಕುವೆಂಪು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಮೈಸೂರು ವಿವಿ ದೇಶ ದಲ್ಲೇ ಉನ್ನತ ಸ್ಥಾನ ಪಡೆದಿದೆ. ಪ್ರಸ್ತುತ ಆ ವಿವಿಯ ಪ್ರಾಧ್ಯಾಪಕರು ಹಾಗೂ ಕುಲ ಪತಿಗಳಾಗಿದ್ದವರ ಮೇಲೆಯೇ ನಾನಾ ರೀತಿಯ ಆರೋಪ ಕೇಳಿ ಬರುತ್ತಿರುವುದು ತಲೆತಗ್ಗಿ ಸುವ ವಿಚಾರ ಎಂದು ಸಂಸದ ವಿ.ಶ್ರೀನಿ ವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣ ದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಮೈಸೂರು ಘಟಕದ ವತಿಯಿಂದ ಆಯೋಜಿ…

ಜೆಎನ್‍ಯು ಘಟನೆ ಖಂಡಿಸಿ ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಮೈಸೂರು

ಜೆಎನ್‍ಯು ಘಟನೆ ಖಂಡಿಸಿ ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ

January 9, 2020

ಮೈಸೂರು, ಜ.8(ಎಂಕೆ)- ದೆಹಲಿಯ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ, ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬುಧ ವಾರ ಪಂಜಿನ ಮೆರವಣಿಗೆ ನಡೆಸಿದವು. ಮೈಸೂರಿನ ಮಾನಸಗಂಗೋತ್ರಿ ಆವ ರಣದಲ್ಲಿರುವ ಗಡಿಯಾರ ವೃತ್ತದಲ್ಲಿ ಜಮಾಯಿಸಿದ ಮೈಸೂರು ವಿವಿ ಸಂಶೋ ಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಹುಜನ ವಿದ್ಯಾರ್ಥಿ ಸಂಘ, ಎಸ್‍ಎಫ್‍ಐ, ಎಐಡಿಎಸ್‍ಓ ಸಂಘ ಟನೆಯ ನೂರಾರು ವಿದ್ಯಾರ್ಥಿಗಳು, ಗಡಿ ಯಾರ ವೃತ್ತದಿಂದ ಕುವೆಂಪು ಪುತ್ಥಳಿ ವರೆಗೆ ಪಂಜಿನ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ…

ಪ್ರಕೃತಿ ವಿರುದ್ಧ ಸಾಗಿದರೆ ಸೋಲು ಖಚಿತ
ಮೈಸೂರು

ಪ್ರಕೃತಿ ವಿರುದ್ಧ ಸಾಗಿದರೆ ಸೋಲು ಖಚಿತ

January 9, 2020

ಮೈಸೂರು, ಜ.8(ಎಂಕೆ)- ಮನುಷ್ಯ ತನ್ನ ದುರಾಸೆಯಿಂದ ಪ್ರಕೃತಿ ವಿರುದ್ಧ ನಡೆದಾಗ ಸೋಲುವುದು ಖಂಡಿತ ಎಂಬುದನ್ನು ಅದಮ್ಯ ರಂಗಶಾಲೆ ಪುಟಾಣಿಗಳು ಮನೋಜ್ಞ ಅಭಿನಯದ ಮೂಲಕ ತೋರಿಸಿಕೊಟ್ಟರು. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ಮೈಸೂರು ಆಯೋಜಿಸಿರುವ ‘ಸಂಚಲನ ಮಕ್ಕಳ ನಾಟಕೋತ್ಸವ’ದಲ್ಲಿ ಅದಮ್ಯ ರಂಗಶಾಲೆ ಪುಟಾಣಿಗಳು ಹೆಚ್.ಎಸ್.ವೆಂಕಟೇಶ್ ಮೂರ್ತಿ ರಚಿತ ‘ಕುಣಿ ಕುಣಿ ನವಿಲೆ’ ನಾಟಕ ಪ್ರದರ್ಶನ ಮಾಡಿದರು. ಮೈಸೂರಿನ ಸಿ.ವಿನೋದ್ ನಿರ್ದೇಶನ ದಲ್ಲಿ ಮೂಡಿಬಂದ ನಾಟಕದಲ್ಲಿ ಬಣ್ಣ ಬಣ್ಣದ ವೇಷ-ಭೂಷಣ ತೊಟ್ಟ ಪುಟಾಣಿ ಗಳು, ನವಿಲುಗಳಿಗೆ ಕುಣಿಯುವುದೇ ನಿತ್ಯ…

ರೈಲ್ವೆ ಖಾಸಗೀಕರಣ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈಲ್ವೆ ನೌಕರರ ಪ್ರತಿಭಟನೆ
ಮೈಸೂರು

ರೈಲ್ವೆ ಖಾಸಗೀಕರಣ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈಲ್ವೆ ನೌಕರರ ಪ್ರತಿಭಟನೆ

January 8, 2020

ಮೈಸೂರು,ಜ.7(ಪಿಎಂ)-ರೈಲ್ವೆ ಖಾಸ ಗೀಕರಣ ಪ್ರಸ್ತಾಪಗಳನ್ನು ರೈಲ್ವೆ ಸಚಿವಾ ಲಯ ಕೈಬಿಡಬೇಕೆಂದು ಆಗ್ರಹಿಸಿ ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನೈರುತ್ಯ ರೈಲ್ವೆಯ ವಿಭಾ ಗೀಯ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಉತ್ಪಾದನಾ ಘಟಕ, ವರ್ಕ್‍ಶಾಪ್‍ಗಳನ್ನು 100 ದಿನಗಳ ಕಾರ್ಯ ಯೋಜನೆಯಡಿ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಕಂಪನಿಗೆ ಹಸ್ತಾಂತರಿಸುವ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ರೈಲ್ವೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಜ.2ರಿಂದ ಪ್ರತಿಭಟನಾ ಸಪ್ತಾಹ…

1 77 78 79 80 81 330
Translate »