ಪ್ರಕೃತಿ ವಿರುದ್ಧ ಸಾಗಿದರೆ ಸೋಲು ಖಚಿತ
ಮೈಸೂರು

ಪ್ರಕೃತಿ ವಿರುದ್ಧ ಸಾಗಿದರೆ ಸೋಲು ಖಚಿತ

January 9, 2020

ಮೈಸೂರು, ಜ.8(ಎಂಕೆ)- ಮನುಷ್ಯ ತನ್ನ ದುರಾಸೆಯಿಂದ ಪ್ರಕೃತಿ ವಿರುದ್ಧ ನಡೆದಾಗ ಸೋಲುವುದು ಖಂಡಿತ ಎಂಬುದನ್ನು ಅದಮ್ಯ ರಂಗಶಾಲೆ ಪುಟಾಣಿಗಳು ಮನೋಜ್ಞ ಅಭಿನಯದ ಮೂಲಕ ತೋರಿಸಿಕೊಟ್ಟರು.

ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ಮೈಸೂರು ಆಯೋಜಿಸಿರುವ ‘ಸಂಚಲನ ಮಕ್ಕಳ ನಾಟಕೋತ್ಸವ’ದಲ್ಲಿ ಅದಮ್ಯ ರಂಗಶಾಲೆ ಪುಟಾಣಿಗಳು ಹೆಚ್.ಎಸ್.ವೆಂಕಟೇಶ್ ಮೂರ್ತಿ ರಚಿತ ‘ಕುಣಿ ಕುಣಿ ನವಿಲೆ’ ನಾಟಕ ಪ್ರದರ್ಶನ ಮಾಡಿದರು.

ಮೈಸೂರಿನ ಸಿ.ವಿನೋದ್ ನಿರ್ದೇಶನ ದಲ್ಲಿ ಮೂಡಿಬಂದ ನಾಟಕದಲ್ಲಿ ಬಣ್ಣ ಬಣ್ಣದ ವೇಷ-ಭೂಷಣ ತೊಟ್ಟ ಪುಟಾಣಿ ಗಳು, ನವಿಲುಗಳಿಗೆ ಕುಣಿಯುವುದೇ ನಿತ್ಯ ಕಾಯಕದಂತೆ ಪ್ರಕೃತಿಯ ನಿಯಮದಂತೆ ಹತ್ತು ಹಲವು ಚಟುವಟಿಕೆಗಳು ನಡೆಯು ತ್ತವೆ. ಆದರೆ ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಸೋಲು ಖಚಿತ ಎಂಬುದನ್ನು ತಿಳಿಸಿದರು.

ಈ ವೇಳೆ ಹಿರಿಯ ರಂಗಕಲಾವಿದೆ ಇಂದಿರಾ ನಾಯರ್ ಮಾತನಾಡಿ, ಮಕ್ಕ ಳಲ್ಲಿ ರಂಗಭೂಮಿಯ ಮೇಲೇ ಆಸಕ್ತಿ ಹಾಗೂ ಅವರಲ್ಲಿನ ಪ್ರತಿಭೆಯನ್ನು ಗುರುತಿ ಸಲು ನಾಟಕೋತ್ಸವ ಉತ್ತಮ ವೇದಿಕೆ ಯಾಗಿದೆ. ಮಕ್ಕಳು ಬೇರೆ ಬೇರೆ ನಟರನ್ನು ಅನುಕರಣೆ ಮಾಡುವುದರ ಜತೆಗೆ ತಮ್ಮದೇ ಸ್ವಂತ ಅಭಿನಯ ಶೈಲಿ ಯನ್ನು ಬೆಳೆಸಿಕೊಳ್ಳಬೇಕು. ನಾಟ ಕೋತ್ಸವಗಳಲ್ಲಿ ಸಾಮಾನ್ಯ ಮಕ್ಕಳ ಜತೆಗೆ ವಿಶೇಷಚೇತನ ಮಕ್ಕಳಿಗೂ ಅವಕಾಶ ನೀಡಬೇಕು. ವಿಶೇಷ ಮಕ್ಕಳ ವಿಶೇಷ ಅಭಿನಯ ನಾಟ ಕೋತ್ಸವಕ್ಕೆ ಮತ್ತಷ್ಟು ಮೆರಗು ತರ ಲಿದೆ ಎಂದು ಹೇಳಿದರು.

ಚಲನಚಿತ್ರ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಮಕ್ಕಳ ನಾಟಕೋತ್ಸವ ಎಂಬುದೇ ವಿಶೇಷ. ಮಕ್ಕಳ ಮನಸ್ಥಿತಿ ಎಲ್ಲವನ್ನು ಸ್ವೀಕರಿಸುವಂತಿರು ತ್ತದೆ. ಕೆಲವೆಡೆ ಮಕ್ಕಳಿಗೆ ಹಾರೆ-ಗುದ್ದಲಿ ಕೊಟ್ಟು ಮಸೀದಿ, ಮಂದಿರವನ್ನು ಹೇಗೆ ಕೆಡವಿ ಹಾಕಬೇಕು ಎಂಬುದನ್ನು ಹೇಳಿ ಕೊಡುತ್ತಿದ್ದಾರೆ. ಆದ್ದರಿಂದ ತಮ್ಮ ಮಕ್ಕಳು ಏನನ್ನು ನೋಡಿ, ಹೇಗೆ ಕಲಿಕೆಯುತ್ತಿದ್ದಾರೆ ಎಂಬುದರ ಕುರಿತು ತಂದೆ-ತಾಯಂದಿರು ಎಚ್ಚರ ವಹಿಸಬೇಕು ಎಂದರು.

ರಂಗಭೂಮಿಯಲ್ಲಿ ಮಕ್ಕಳು ತೊಡಗಿಸಿ ಕೊಳ್ಳುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜತೆಗೆ ದೇಶದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜು ಪ್ರಾಂಶುಪಾಲ ಡಾ.ಎಂ.ರುದ್ರಯ್ಯ, ಮೈಸೂರು ವಿಶ್ವವಿದ್ಯಾ ನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇ ಶನಾಲಯದ ಸಹಾಯಕ ನಿರ್ದೇಶಕ ಡಾ.ಜೆ.ಲೋಹಿತ್, ಸಂಚಲನ ಮೈಸೂ ರಿನ ದೀಪಕ್ ಸೇರಿದಂತೆ ಮತ್ತಿತರರು ಈ ಉಪಸ್ಥಿತರಿದ್ದರು.

Translate »