ಜೆಎನ್‍ಯು ಘಟನೆ ಖಂಡಿಸಿ ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಮೈಸೂರು

ಜೆಎನ್‍ಯು ಘಟನೆ ಖಂಡಿಸಿ ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ

January 9, 2020

ಮೈಸೂರು, ಜ.8(ಎಂಕೆ)- ದೆಹಲಿಯ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ, ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬುಧ ವಾರ ಪಂಜಿನ ಮೆರವಣಿಗೆ ನಡೆಸಿದವು.

ಮೈಸೂರಿನ ಮಾನಸಗಂಗೋತ್ರಿ ಆವ ರಣದಲ್ಲಿರುವ ಗಡಿಯಾರ ವೃತ್ತದಲ್ಲಿ ಜಮಾಯಿಸಿದ ಮೈಸೂರು ವಿವಿ ಸಂಶೋ ಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಹುಜನ ವಿದ್ಯಾರ್ಥಿ ಸಂಘ, ಎಸ್‍ಎಫ್‍ಐ, ಎಐಡಿಎಸ್‍ಓ ಸಂಘ ಟನೆಯ ನೂರಾರು ವಿದ್ಯಾರ್ಥಿಗಳು, ಗಡಿ ಯಾರ ವೃತ್ತದಿಂದ ಕುವೆಂಪು ಪುತ್ಥಳಿ ವರೆಗೆ ಪಂಜಿನ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿ ಸಬೇಕು. ಅಲ್ಲದೆ ಇಂತಹ ಕೃತ್ಯಗಳಿಗೆ ಸಹಕಾರ ನೀಡುತ್ತಿರುವ ಸಂಘಟನೆಗಳ ರದ್ದುಪಡಿಸಬೇಕು ಎಂದು ಒತ್ತಾಯಿಸಿ ದರು. ಪ್ರತಿಭಟನೆಯಲ್ಲಿ ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಎಸ್. ಮರಿದೇವಯ್ಯ, ದಲಿತ ವಿದ್ಯಾರ್ಥಿ ಒಕ್ಕೂ ಟದ ಸಂದೇಶ್, ಬಿವಿಎಸ್‍ನ ಸಂದೀಪ್, ಎಸ್‍ಎಫ್‍ಐನ ವಿಷ್ಣು, ಎಐಡಿಎಸ್‍ಓನ ಚಂದ್ರಕಲಾ ಸೇರಿದಂತೆ ಇನ್ನೂ ಮುಂತಾ ದವರು ಪಾಲ್ಗೊಂಡಿದ್ದರು.

Translate »