ಇತ್ತೀಚೆಗೆ ಮೈಸೂರು ವಿವಿ ಘನತೆಗೆ ಧಕ್ಕೆಯಾಗುವಂತಹ ಬೆಳವಣಿಗೆ: ಶ್ರೀನಿವಾಸ ಪ್ರಸಾದ್ ವಿಷಾದ
ಮೈಸೂರು

ಇತ್ತೀಚೆಗೆ ಮೈಸೂರು ವಿವಿ ಘನತೆಗೆ ಧಕ್ಕೆಯಾಗುವಂತಹ ಬೆಳವಣಿಗೆ: ಶ್ರೀನಿವಾಸ ಪ್ರಸಾದ್ ವಿಷಾದ

January 9, 2020

ಮೈಸೂರು,ಜ.8(ಎಸ್‍ಪಿಎನ್)- ರಾಷ್ಟ್ರಕವಿ ಕುವೆಂಪು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಮೈಸೂರು ವಿವಿ ದೇಶ ದಲ್ಲೇ ಉನ್ನತ ಸ್ಥಾನ ಪಡೆದಿದೆ. ಪ್ರಸ್ತುತ ಆ ವಿವಿಯ ಪ್ರಾಧ್ಯಾಪಕರು ಹಾಗೂ ಕುಲ ಪತಿಗಳಾಗಿದ್ದವರ ಮೇಲೆಯೇ ನಾನಾ ರೀತಿಯ ಆರೋಪ ಕೇಳಿ ಬರುತ್ತಿರುವುದು ತಲೆತಗ್ಗಿ ಸುವ ವಿಚಾರ ಎಂದು ಸಂಸದ ವಿ.ಶ್ರೀನಿ ವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣ ದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಮೈಸೂರು ಘಟಕದ ವತಿಯಿಂದ ಆಯೋಜಿ ಸಿದ್ದ ಕುವೆಂಪು ಜನ್ಮ ದಿನಾಚರಣೆ, ಕವಿ ಗೋಷ್ಠಿ ಹಾಗೂ ವಿವಿಧ ಕ್ಷೇತ್ರದ ಸಾಧ ಕರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಮತ್ತು ದೇಜಗೌ ಅವರು ಮೈಸೂರು ವಿವಿ ಕುಲಪತಿಗಳಾಗಿದ್ದಾಗ ಅದರ ಘನತೆ ಹೆಚ್ಚಾಗಿತ್ತು. ಇದೀಗ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಬೇಸರ ಸಂಗತಿ. ಮನುಷ್ಯ ಹುಟ್ಟುತ್ತಾ ವಿಶ್ವಮಾನವನಾಗುತ್ತಾನೆ. ಆದರೆ, ಸಮಾಜ ಅಂತಹವರನ್ನು ಅಲ್ಪ ಮಾನವ ರಂತೆ ಕಾಣುವುದು ತರವಲ್ಲ ಎಂದರು.

ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು, ತಮ್ಮ ಬರಹಗಳಲ್ಲ್ಲಿ ವೈಜ್ಞಾನಿಕ ಹಿನ್ನೆಲೆಯ ಸಾಹಿತ್ಯ ಕಟ್ಟಿಕೊಟ್ಟಿ ದ್ದಾರೆ. ಈ ದೃಷ್ಟಿಕೋನಗಳಲ್ಲಿ ಅವರನ್ನು ಸಮಾಜ ಸುಧಾರಕರೇ ಎನ್ನಬಹುದು. ಡಾ. ಶಿವರಾಮ ಕಾರಂತ ರಚಿತ `ಚೋಮನ ದುಡಿ’ ಕೃತಿಯನ್ನು ನಾನು ಸುಮಾರು 20ಕ್ಕೂ ಹೆಚ್ಚು ಬಾರಿ ಓದಿದ್ದೇನೆ. ಈಗಲೂ ಆ ಪುಸ್ತಕವನ್ನು ಮತ್ತೆಮತ್ತೆ ಓದಬೇಕೆನಿಸುತ್ತದೆ. ನಾನು ಮೆಚ್ಚಿದ ಕೃತಿಗಳಲ್ಲಿ ಅದು ಸ್ಥಾನ ಪಡೆದಿದೆ ಎಂದು ಅಭಿಪ್ರಾಯಪಟ್ಟರು.

1983ರಲ್ಲಿ ಹಿರಿಯ ಸಾಹಿತಿ ವಿಕೃ ಗೋಕಾಕ್ ನೇತೃತ್ವದ ಸಮಿತಿ ಕನ್ನಡ ಭಾಷೆ ಯನ್ನು ಆಡಳಿತ ಭಾಷೆಯಾಗಿ ಮಾಡು ವಂತೆ ವರದಿ ಸಲ್ಲಿಸಿದ್ದಾಗ, ಅಂದಿನ ಮುಖ್ಯ ಮಂತ್ರಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಡೆಗಣಿಸಿತ್ತು. ಮುಂದೆ ಕನ್ನಡಿ ಗರ ಕಿಚ್ಚಿಗೆ ಆ ಸರ್ಕಾರವೇ ಬಿದ್ದು ಹೋಯ್ತು. ಆ ಚಳವಳಿ ಹಲವು ದಶಕಗಳೇ ಕಳೆದಿದೆ. ಇದರ ಪರಿಣಾಮವಾಗಿ ಇಂದು ಬೆಂಗಳೂ ರಿನಲ್ಲಿ ಕನ್ನಡಕ್ಕೆ ಸ್ಥಾನಮಾನ ದೊರಕಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಗೊಳಿಸುವ ಚಿಂತನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕುವೆಂಪು ಜೀವಿತಾವಧಿಯಲ್ಲಿ ಕನ್ನಡ ಮತ್ತು ಕರ್ನಾ ಟಕವನ್ನು ತಮ್ಮ ಉಸಿರೆಂದು ಭಾವಿಸಿರುವ ಬಗ್ಗೆ ಅವರ ಸಾಹಿತ್ಯಗಳಲ್ಲಿ ಕಾಣಬಹು ದಾಗಿದೆ. ಅವರ ಸಾಹಿತ್ಯದಲ್ಲಿ ಮಹಿಳೆಯರು, ಶೋಷಿತರು, ರೈತರು ಹಾಗೂ ಗ್ರಾಮೀಣ ಯುವಕರು ನಗರ ಪ್ರದೇಶದ ಆಕರ್ಷಣೆ ಕುರಿತು ವಿವಿಧ ಆಯಾಮಗಳಲ್ಲಿ ವಿಶ್ಲೇಷಣೆ ಮಾಡಿದ್ದಾರೆ ಎಂದರು.

ದೇಶ-ಭಾಷೆ, ನಾಡು-ನುಡಿ ವಿಚಾರ ವಾಗಿ ಕುವೆಂಪು ಸದಾ ಭಾವನಾತ್ಮಕ ಪ್ರತಿ ಕ್ರಿಯೆ ನೀಡುತ್ತಿದ್ದರು. ಕುವೆಂಪು ಬರೆದಿ ರುವ ಅನೇಕ ಕಾವ್ಯಗಳಲ್ಲಿ ಇದನ್ನು ಕಾಣ ಬಹುದಾಗಿದೆ. ಪ್ರಸ್ತುತ ದೇಶದಲ್ಲಿ ಗೊಂದಲ-ಕೋಲಾಹಲ ಸೃಷ್ಟಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಕುರಿತು ಮಾತನಾಡುವುದಾದರೆ ಕುವೆಂಪು ಸಾಹಿತ್ಯವನ್ನು ಪರಿಗಣಿಸಿದರೆ ತಪ್ಪಿಲ್ಲ ಎಂದರು.

ಈ ವೇಳೆ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ ಜೋಯಿಸ್, ಹೆಚ್.ಡಿ. ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಸಮಾಜ ಸೇವಕ ಸಿ.ಎನ್.ಲಕ್ಷ್ಮೀಶ್ ಅವರನ್ನು ಸನ್ಮಾ ನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀ ಕೆರೆ ಗೋಪಾಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ಹೆಳವರ ಹುಂಡಿ ಸಿದ್ದಪ್ಪ, ಚಂದ್ರಶೇಖರಯ್ಯ, ಮೂಗೂರು ನಂಜುಂಡಸ್ವಾಮಿ ಉಪಸ್ಥಿತರಿದ್ದರು. ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಟಿ.ಸತೀಶ್ ಜವರೇಗೌಡ, ಮುಖ್ಯಅತಿಥಿಗಳಾಗಿ ರಂಗನಾಥ್ ಮೈಸೂರು ಉಪಸ್ಥಿತರಿದ್ದರು. ಅನೇಕ ಯುವಕವಿ ಗಳು ಸ್ವರಚಿತ ಕವಿತೆ ವಾಚನ ಮಾಡಿದರು.

Translate »