ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಜಾರಿಗಾಗಿ ಪಾಲಿಕೆ ವ್ಯಾಪ್ತಿಯ 1.83 ಲಕ್ಷ ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ
ಮೈಸೂರು

ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಜಾರಿಗಾಗಿ ಪಾಲಿಕೆ ವ್ಯಾಪ್ತಿಯ 1.83 ಲಕ್ಷ ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ

January 9, 2020

ಮುಂದಿನ ಮಾರ್ಚ್-ಏಪ್ರಿಲ್‍ನೊಳಗಾಗಿ ಆನ್‍ಲೈನ್ ತೆರಿಗೆ ಪಾವತಿ ವ್ಯವಸ್ಥೆ ಜಾರಿ ಸಾಧ್ಯತೆ
ಮೈಸೂರು,ಜ.8(ಆರ್‍ಕೆ)-ನೀರಿನ ತೆರಿಗೆ, ವಿದ್ಯುತ್ ಶುಲ್ಕದಂತೆ ಆಸ್ತಿ ತೆರಿಗೆ ಯನ್ನೂ ಆನ್‍ಲೈನ್ ಮೂಲಕವೇ ಸುಲಭ ವಾಗಿ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯ ಲ್ಲಿರುವ ವಸತಿ ಬಡಾವಣೆಗಳ 1,83,000 ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ ನಡೆಸಿದೆ.

ಆಸ್ತಿ ತೆರಿಗೆ ಪಾವತಿಯನ್ನು ಆನ್‍ಲೈನ್ ವ್ಯವಸ್ಥೆಗೆ ಅಳವಡಿಸುವ ಮೂಲಕ ಸಾರ್ವ ಜನಿಕರು ಪಾಲಿಕೆ ವಲಯ ಕಚೇರಿಗಳ ಕೌಂಟರ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಚಲನ್ ಭರ್ತಿ ಮಾಡಿ ಹಣ ಪಾವತಿಸ ಬೇಕಾದ ತೊಂದರೆ ತಪ್ಪಿಸಬೇಕೆಂಬುದು ಪಾಲಿಕೆಯ ಉದ್ದೇಶವಾಗಿದೆ. ಹಲವು ವರ್ಷಗಳಿಂದ ಬಾಕಿ ಇರುವ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾದಂತಿದೆ.

ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆನ್‍ಲೈನ್‍ನಲ್ಲೇ ನಿವೇಶನ, ಮನೆ, ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಪಾವತಿಸಲು ಅನುವು ಮಾಡಿಕೊಡಲು ಸರ್ಕಾರಿ ಅಂಗ ಸಂಸ್ಥೆ ಯಾದ ಕಿಯೋನಿಕ್ಸ್ (ಏಚಿಡಿಟಿಚಿಣಚಿಞಚಿ Sಣಚಿಣe ಇಟeಛಿಣಡಿoಟಿiಛಿs ಆeveಟoಠಿmeಟಿಣ ಅoಡಿಠಿoಡಿಚಿಣioಟಿ ಐಣಜ.)ಗೆ ಜವಾಬ್ದಾರಿ ವಹಿ ಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಕುಡಿಯುವ ನೀರು ಪೂರೈಕೆ, ಕಸ ನಿರ್ವಹಣೆ, ಒಳಚರಂಡಿ ವ್ಯವಸ್ಥೆ, ನೈರ್ಮಲ್ಯ, ಪಾರ್ಕು, ರಸ್ತೆ ನಿರ್ವಹಣೆಯಂತಹ ಮೂಲ ನಾಗರಿಕ ಸೌಲಭ್ಯ ಒದಗಿಸಲು ತಗಲುವ ವೆಚ್ಚ ಭರಿಸಲು ನೀರಿನ ತೆರಿಗೆ, ಆಸ್ತಿ ತೆರಿಗೆ, ವಾಣಿಜ್ಯ ಉದ್ದಿಮೆ ಪರವಾನಗಿ ಶುಲ್ಕ ವಸೂಲಿ ಮಾಡುವುದೊಂದೇ ಪಾಲಿಕೆಯ ಸಂಪನ್ಮೂಲವಾಗಿದೆ.

ಗ್ರಾಹಕರು ಆಯಾ ಕಾಲಕ್ಕೆ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ. ಪತ್ರಿಕೆಗಳ ಮೂಲಕ ಜಾಹೀರಾತು ಪ್ರಕಟಿಸಿ ತಿಳಿವಳಿಕೆ ನೀಡಿ ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಆದ ಕಾರಣ ತೆರಿಗೆ ಪಾವತಿ ಯನ್ನೂ ಗ್ರಾಹಕರಿಗೆ ಮತ್ತಷ್ಟು ಸುಲಭ ಮಾಡಿ ಕೊಡುವ ಸಲುವಾಗಿ ಆನ್‍ಲೈನ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ಪಾಲಿಕೆ ಮುಂದಾಗಿದೆ.

ಆನ್‍ಲೈನ್ ತೆರಿಗೆ ಪಾವತಿ ಸೌಲಭ್ಯವನ್ನು 98 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಿಸಲು ಕಿಯೋ ನಿಕ್ಸ್ ಸಂಸ್ಥೆಗೆ ವಹಿಸಲು ನಿರ್ಧರಿಸಿರುವ ಪಾಲಿಕೆಯು (Woಡಿಞ ಔಡಿಜeಡಿ) ಕಾರ್ಯಾ ದೇಶ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಡಿಜಿಟಲೀಕರಣದಿಂದ ಆಸ್ತಿಗೆ ಸಂಬಂಧಿ ಸಿದ ನಿಖರ ಮಾಹಿತಿ, ಪಾವತಿಗೆ ಬಾಕಿ ಉಳಿದಿರುವ ಆಸ್ತಿ ತೆರಿಗೆ ಇತ್ಯಾದಿ ಮಾಹಿತಿ ಯನ್ನು ಅಳವಡಿಸುವುದರಿಂದ ತೆರಿಗೆ ವಂಚನೆ ಅಥವಾ ಹೆಚ್ಚು ಹಣ ಪಾವತಿಸುವುದಕ್ಕೆ ಅವಕಾಶವಾಗುವುದಿಲ್ಲ. ಈಗಾಗಲೇ ಬಾಕಿ ಇರುವ ಸುಮಾರು 150 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಪಾಲಿಕೆ ಕಂದಾಯ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.

ಮೊಬೈಲ್‍ನಲ್ಲಿ ಬಟನ್ ಕ್ಲಿಕ್ ಮಾಡಿದರೆ ಸಾಕು, ಆಸ್ತಿ ಸಂಬಂಧಿಸಿದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇದರಿಂದ ಕಾಗದ ರಹಿತ ವಹಿವಾಟು ನಡೆಸಬಹುದಲ್ಲದೆ, ಆಸ್ತಿ ತೆರಿಗೆ ಸಂಬಂಧ ಮಾಲೀಕರಿಗೆ ಕಾಲಕಾಲಕ್ಕೆ ಮೊಬೈಲ್‍ನಲ್ಲಿ ಅಲರ್ಟ್ ಎಸ್‍ಎಂಎಸ್ ಬರುತ್ತದೆ ಎಂದು ಅವರು ತಿಳಿಸಿದರು.

ರೀ ಸರ್ವೆ: ಆನ್‍ಲೈನ್ ಪದ್ಧತಿ ಜಾರಿಗೆ ತರುವ ಮೊದಲು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ 1,83,000 ಆಸ್ತಿಗಳನ್ನು ಮರು ಸಮೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಬರಲಾಗಿದೆ ಎಂದು ಕುಮಾರ್ ನಾಯಕ್ ತಿಳಿಸಿದ್ದಾರೆ.

ಖಾಲಿ ನಿವೇಶನದಲ್ಲಿ ಸಾಕಷ್ಟು ಕಟ್ಟಡ ನಿರ್ಮಿಸಲಾಗಿದೆ. ಕೆಲವು ಕಟ್ಟಡಗಳನ್ನು ವಿಸ್ತರಿಸಿಕೊಂಡಿರುತ್ತಾರೆ, ವಿಸ್ತೀರ್ಣಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿರುವುದರಿಂದ ಭೌತಿಕವಾಗಿ ಸರ್ವೆ ಮಾಡದೆ ಆನ್‍ಲೈನ್ ತೆರಿಗೆ ಪಾವತಿ ಜಾರಿಗೆ ತಂದರೆ ನಿಖರತೆ ಸಿಗುವುದಿಲ್ಲ ಎಂದು ನಗರಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಕುಮಾರ್ ನಾಯಕ್ ತಿಳಿಸಿದ್ದಾರೆ.

ರೀ ಸರ್ವೆ ಮಾಡಲು ಕಿಯೋನಿಕ್ಸ್ ಅಥವಾ ಅನುಭವವಿರುವ ಇತರ ಸಂಸ್ಥೆಗಳಿಗೆ ಟೆಂಡರ್ ಮೂಲಕ ಪ್ರಕ್ರಿಯೆ ವಹಿಸಿ ಪ್ರತೀ ಆಸ್ತಿಗೆ ಭೇಟಿ ನೀಡಿ ಮಾಹಿತಿ ಪಡೆದು ನಂತರ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡುವ ಕುರಿತಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಕಂದಾಯ ಉಪ ಆಯುಕ್ತರು ತಿಳಿಸಿದ್ದಾರೆ.

Translate »