ಮೈಸೂರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಪರಿಣಾಮಕಾರಿ ಬೀದಿ ನಾಟಕ
ಮೈಸೂರು

ಮೈಸೂರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಪರಿಣಾಮಕಾರಿ ಬೀದಿ ನಾಟಕ

January 9, 2020

`ನಾವೆಲ್ಲಾ ಟೀಕು-ಟಾಕು… ಊರು ತುಂಬ ಪ್ಲಾಸ್ಟಿಕ್ಕು…’

1969ಕ್ಕೆ ಮಿಸ್ಡ್‍ಕಾಲ್ ನೀಡಿ, ಸ್ವಚ್ಛ ಸರ್ವೇಕ್ಷಣೆಗೆ ಪ್ರತಿಕ್ರಿಯಿಸಿ

ಮೈಸೂರು,ಜ.8(ಆರ್‍ಕೆಬಿ)- `ನಾವೆಲ್ಲಾ ಟೀಕು-ಟಾಕು… ಊರು ತುಂಬ ಪ್ಲಾಸ್ಟಿಕ್ಕು…’
ಪ್ಲಾಸ್ಟಿಕ್‍ನಿಂದ ಪರಿಸರ ಹಾಳಾಗುತ್ತಿ ರುವ ಕುರಿತ ಈ ಹಾಡು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಮೈಸೂರಿನ ಅಲ್ಲಲ್ಲಿ ಕೇಳಿ ಬರುತ್ತಿದೆ.

ಏಳೆಂಟು ಜನರಿರುವ ಕಲಾವಿದರ ತಂಡ ಮೈಸೂರಿನ ಬೀದಿ ಬೀದಿಗಳಲ್ಲಿ ತಿರುಗಿ ಸ್ವಚ್ಛತೆಯ ಕುರಿತಂತೆ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮೈಸೂರನ್ನು ಮತ್ತೊಮ್ಮೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಬೆಂಗ ಳೂರಿನ ಚುಕ್ಕಿ ಟಾಕೀಸ್ ಕಲಾ ತಂಡ ಬೀದಿ ನಾಟಕದ ಮೂಲಕ ಬೆವರು ಹರಿಸುತ್ತಿದೆ.

ಈ ಕಲಾವಿದರು `ಈ ನೆಲ, ಈ ಜಲ ಈ ಮಣ್ಣು ನಮ್ಮದು..’, `ಎಲ್ಲಿ ಹೋದವು ಕಣ್ಣಿಗೆ ಕಾಣದಾದವು.. ಜಿಂಕೆ, ಮರ ಝೂನಲ್ಲಿ ನೋಡಬೇಕಲ್ಲ…’ ಎಂಬಿತ್ಯಾದಿ ಹಾಡುಗಳ ಮೂಲಕ ಜನರನ್ನು ತಮ್ಮತ್ತ ಸೆಳೆದು ಕೇವಲ 8-10 ನಿಮಿಷದಲ್ಲಿ ಸ್ವಚ್ಛ ತೆಯ ಬಗ್ಗೆ ಮೈಸೂರಿನ ಜನರಲ್ಲಿ ಪರಿ ಣಾಮಕಾರಿ ಅರಿವು ಮೂಡಿಸುತ್ತಾ ಸಾಗಿದ್ದಾರೆ.

ಮಹಾರಾಜರ ಕಾಲದ ವೈಭವ, ರಸ್ತೆ, ಹಸಿರಿನಿಂದ ಕಂಗೊಳಿಸುತ್ತಿದ್ದ ಮೈಸೂರು, ಮಾನಸಗಂಗೋತ್ರಿ, ಕೃಷ್ಣರಾಜಸಾಗರ, ದಸರಾ ವೈಭವ, ಅರಮನೆ, ಮೈಸೂರು ಮಲ್ಲಿಗೆ, ಮೈಸೂರು ಪಾಕು, ವಿಶ್ವದಲ್ಲಿ ಮೈಸೂರು ತಲೆ ಎತ್ತಿ ನಿಲ್ಲೋದಕ್ಕೆ ಇಷ್ಟೇ ಸಾಲದು. ಜನ ಸ್ವಚ್ಛತೆಯ ಕಡೆಗೆ ಮುಖ ಮಾಡ ಬೇಕು. ಎಲ್ಲೆಂದರಲ್ಲಿ ಕಸ ಹಾಕಬಾರದು. ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಕಸವನ್ನು ಪ್ರತ್ಯೇಕ ಗೊಳಿಸಿ ಪಾಲಿಕೆಯ ಕಸದ ವಾಹನಗಳಿಗೆ ನೀಡಬೇಕು ಎಂಬ ಸಂದೇಶ ಸಾರುತ್ತಿದೆ.

ಕೆ.ಎಸ್.ಸ್ವರೂಪ್ ನೇತೃತ್ವದ ಬೆಂಗಳೂ ರಿನ ಚುಕ್ಕಿ ಟಾಕೀಸ್ ಕಲಾ ತಂಡದಲ್ಲಿ ಪ್ರಸಿತ್ ಪೆರೇರಾ, ಶರಣ್ ಅವರೊಂದಿಗೆ ಮೈಸೂ ರಿನ ಪ್ರತಿಭಾವಂತ ಕಲಾವಿದರಾದ ರಮೇಶ್, ಪುಷ್ಪಲತಾ, ಶಿವಾನಿ, ಕಾರ್ತಿಕ್ ಇದ್ದಾರೆ.

ದಿನ ನಿತ್ಯ ಬೆಳಿಗ್ಗೆ ಮತ್ತು ಸಂಜೆ ತಮ್ಮ ಸುಶ್ರಾವ್ಯ ಕಂಠದಿಂದ `ಈ ನೆಲ, ಈ ಜಲ, ಈ ಮಣ್ಣು ನಮ್ಮದು…’ ಎಂಬ ಆರಂಭಿಕ ಗೀತೆಯೊಂದಿಗೆ ನಾಟಕ ಶುರುವಾಗುತ್ತದೆ. ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಸತತ ಎರಡು ಬಾರಿ ಅಗ್ರಸ್ಥಾನದಲ್ಲಿದ್ದ ಅರಮನೆ ನಗರಿ ಮೈಸೂರು, 2014 ಮತ್ತು 2015 ರಲ್ಲಿ ದೇಶದ ಸ್ವಚ್ಛ ನಗರಗಳ ಪೈಕಿ ಮೊದಲ ಸ್ಥಾನದಲ್ಲಿತ್ತು. ಆದರೆ, 2017ರ ಸಾಲಿನ ಸ್ವಚ್ಛ ನಗರಗಳಲ್ಲಿ 5ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿಯೂ ಸ್ವಚ್ಛ ಸರ್ವೇಕ್ಷಣೆ ತಂಡ ಮೈಸೂರಿನ ಸ್ವಚ್ಛತೆಯ ಪರಿಶೀಲನೆ ನಡೆಸ ಲಿದ್ದು, ಈ ಬಾರಿ ಮೈಸೂರು ಮತ್ತೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆಯಲು ನಗರದ ನಾಗರಿಕರ ಸಹಕಾರ ಮುಖ್ಯ. ಕಸ ವನ್ನು ಕಂಡ ಕಂಡಲ್ಲಿ ರಸ್ತೆ ಬದಿಯಲ್ಲಿ ಬಿಸಾ ಡದೆ ಒಣ ಕಸ, ಹಸಿ ಕಸ, ಪ್ಲಾಸ್ಟಿಕ್ ಕಸ ಪ್ರತ್ಯೇಕಿಸಿ ಮೈಸೂರು ನಗರಪಾಲಿಕೆಯ ಕಸದ ವಾಹನಗಳಿಗೆ ನೀಡಬೇಕು. ಈ ಮೂಲಕ ಮೈಸೂರನ್ನು ಸ್ವಚ್ಛವಾಗಿಟ್ಟುಕೊಂಡು `ಸ್ವಚ್ಛ ಮೈಸೂರು’ ಕಿರೀಟ ಮತ್ತೆ ಪಡೆ ಯಲು ಸಹಕರಿಸಬೇಕು ಎಂದು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಸ್ವಚ್ಛತೆಗೆ ಹೆಚ್ಚು ತಯಾರಿ ಮಾಡಿಕೊಳ್ಳ ಬೇಕು. ಕಸ ಬೀದಿಗೆ ಎಸೆಯಬಾರದು. ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಬೇಕು. 1969ಗೆ ಮಿಸ್ಡ್ ಕಾಲ್ ಕೊಡ ಬೇಕು. ಅಲ್ಲಿಂದ ನಿಮಗೆ ಕರೆ ಬಂದಾಗ ಅವರು ಕೇಳುವ 10 ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು. ಹೀಗೆ ಜನರ ಸಹಕಾರ ಸಿಕ್ಕರೆ ಮೈಸೂರು ಮತ್ತೊಮ್ಮೆ ಸ್ವಚ್ಛತೆ ಯಲ್ಲಿ ನಂಬರ್ ಒನ್ ಸ್ಥಾನ ಪಡೆಯು ವುದರಲ್ಲಿ ಸಂದೇಹವೇ ಇಲ್ಲ ಎಂಬುದನ್ನು ಜನರಿಗೆ ತಿಳಿಸುವಲ್ಲಿ ಕಲಾವಿದರು ಯಶಸ್ವಿ ಯಾಗುತ್ತಿದ್ದಾರೆ. ಇತ್ತೀಚೆಗೆ ಬೀದಿ ನಾಟಕ ವನ್ನು ನೋಡಿ ಪ್ರಭಾವಿತನಾದ ಮೈಸೂ ರಿನ ಕಾಲೇಜು ವಿದ್ಯಾರ್ಥಿ ಮಯೂರ್, ಮೈಸೂರು ನಗರಪಾಲಿಕೆ ಆಯೋಜಿಸಿದ್ದ ಪ್ಲಾಗಥಾನ್ (ಪಿಕ್ ಅಂಡ್ ರನ್) ಕಾರ್ಯ ಕ್ರಮದಲ್ಲಿ ಓಡುತ್ತಲೇ ಪ್ಲಾಸ್ಟಿಕ್ ಕಸ ಆಯುತ್ತಾ 2 ಕೆಜಿಗೂ ಹೆಚ್ಚಿನ ಪ್ಲಾಸ್ಟಿಕ್ ಕಸ ಸಂಗ್ರಹಿಸಿ 10,000 ರೂ. ಬಹುಮಾನ ವನ್ನೂ ಪಡೆದುಕೊಂಡ. ಹೀಗೆ ಅನೇಕರು ಬೀದಿ ನಾಟಕದಿಂದ ಪ್ರಭಾವಿತರಾಗಿ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಿಕೊಂಡಿದ್ದಾರೆ.

Translate »