ಸುವರ್ಣಾವತಿ ಮತ್ತಿತರ ಜಲಾಶಯಗಳಿಂದ ಬೆಳೆಗೆ ನೀರು ಹರಿಸುವ ಸಂಬಂಧ ಚರ್ಚೆ
ಮೈಸೂರು

ಸುವರ್ಣಾವತಿ ಮತ್ತಿತರ ಜಲಾಶಯಗಳಿಂದ ಬೆಳೆಗೆ ನೀರು ಹರಿಸುವ ಸಂಬಂಧ ಚರ್ಚೆ

January 9, 2020

ಮೈಸೂರು,ಜ.8-ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ, ಚಿಕ್ಕಹೊಳೆ ಮತ್ತು ನಲ್ಲೂರು ಅಮಾನಿಕೆರೆ ಜಲಾಶಯಗಳಿಂದ ಬೇಸಿಗೆ ಬೆಳೆಗಳಿಗೆ ನೀರು ಹಂಚಿಕೆ ಬಗ್ಗೆ ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಅವರು ಮಂಗಳವಾರ ಕಾಡಾ ಕಚೇರಿಯಲ್ಲಿ ಅಧಿಕಾರಿ ಗಳು ಮತ್ತು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಜಲಾಶಯದಲ್ಲಿನ ನೀರಿನ ಮಟ್ಟ ಸಮೀಕ್ಷೆ ವರದಿ ಆಧಾರಿತ ಮಾತನಾಡಿದ ಸಚಿವರು, ಸುವರ್ಣಾವತಿ ಜಲಾ ನಯನ ಪ್ರದೇಶದಲ್ಲಿ ಈ ಬಾರಿ ಸಾಧಾರಣ ಮಳೆಯಾಗಿದ್ದು, ಜಲಾಶಯದಲ್ಲಿ 1105.43 ಎಮ್‍ಸಿಎಫ್‍ಟಿ ನೀರು ಶೇಖರಣೆ ಯಾಗಿದೆ. ಜಲಾಶಯದ ಅಡಿಯಲ್ಲಿ ಒಟ್ಟು 10494 ಎಕರೆ ಅಚ್ಚಕಟ್ಟು ಪ್ರದೇಶವಿದ್ದು, ಇದರಲ್ಲಿ ಬಲದಂಡೆನಾಲೆ 6600.00 ಎಕರೆ, ಎಡದಂಡೆ ನಾಲೆ 400 ಎಕರೆ ಹಾಗೂ ನದಿನಾಲೆಗಳಲ್ಲಿ 3494.00 ಎಕರೆ ಅಚ್ಚುಕಟ್ಟು ಪ್ರದೇಶವಿದೆ ಎಂದರು.

ಸುವರ್ಣಾವತಿ ಜಲಾಶಯದ ನೀರಿನ ಲಭ್ಯತೆ ಪ್ರಮಾಣವನ್ನು ಆಧರಿಸಿ ಪೂರ್ಣಪ್ರಮಾಣದ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸಲು ಸಾಧ್ಯವಿಲ್ಲದ ಕಾರಣ ಒಟ್ಟಾರೆ ಉಪಯೋಗಕ್ಕೆ ಬರುವ ನೀರಿನಲ್ಲಿ 510.77ಎಮ್‍ಸಿಎಫ್‍ಟಿ ನೀರನ್ನು 4397.12 ಎಕರೆ ಪ್ರದೇಶಕ್ಕೆ ಅರೆ ನೀರಾವರಿ ಬೆಳೆಗಳಿಗೆ ಕಟ್ಟು ಪದ್ಧತಿ ಅನ್ವಯ ನೀರನ್ನು ಹರಿಸಲು ಯೋಚಿಸಲಾಗುವುದು ಎಂದರು.

ಚಿಕ್ಕಹೊಳೆ ಜಲಾಶಯದಲ್ಲಿ 273.24 ಎಮ್‍ಸಿಎಫ್‍ಟಿ ನೀರು ಶೇಖರಣೆಯಾಗಿದೆ ಎಂದು ಅಂದಾಜಿಸಲಾಗಿದೆ. ಜಲಾಶಯದ ವ್ಯಾಪ್ತಿಯಲ್ಲಿ ಒಟ್ಟು 4076.00 ಎಕರೆ ಅಚ್ಚುಕಟ್ಟು ಪ್ರದೇಶವಿದ್ದು, ಇದರಲ್ಲಿ ಬಂಡಿಗೆರೆ ನಾಲೆ 388.00 ಎಕರೆ, ಎಡದಂಡೆ ನಾಲೆ 3688.00 ಎಕರೆ ಅಚ್ಚುಕಟ್ಟು ಪ್ರದೇಶವಿದೆ ಎಂದು ಹೇಳಿದರು. ಜಲಾಶಯದಲ್ಲಿ ಉಪಯೋಗಿಲ್ಪ ಡುವ ನೀರಿನ ಪ್ರಮಾಣ 144.03 ಎಮ್‍ಸಿಎಫ್‍ಟಿ ಆಗಿದೆ. ಆದ್ದರಿಂದ ಎಡದಂಡೆ ನಾಲೆಯ ಹಾಗೂ ಬಂಡಿಗೆರೆ ನಾಲೆಯ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರನ್ನು ಹರಿಸಲು ಸಾಧ್ಯವಿಲ್ಲ. ಜಲಾಶಯದ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ಶೇ.40 ರಷ್ಟು ನೀರನ್ನು ಒದಗಿದಸಲು ಕ್ರಮ ವಹಿಸಲಾಗುವುದು ಎಂದರು.

ನಲ್ಲೂರು ಅಮಾನಿಕೆರೆ ಜಲಾಶಯದಲ್ಲಿ ಈ ಸಾಲಿನಲ್ಲಿ ಮಳೆಯ ಅಭಾವದಿಂದ ನೀರು ಶೇಖರಣೆಯಾಗಿಲ್ಲದ ಕಾರಣ ಬೆಳೆಗಳಿಗೆ ನೀರನ್ನು ಬಿಡಲು ಸಾಧ್ಯವಿಲ್ಲ. ಮುಂದೆ ಜಲಾಶಯಕ್ಕೆ ಸಾಕಷ್ಟು ಪ್ರಮಾಣ ದಲ್ಲಿ ನೀರು ಬಂದಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಪ್ರತ್ಯೇಕ ಸಭೆ ಕರೆದು ನೀರನ್ನು ವಿತರಿಸಲು ತೀರ್ಮಾನಿಸಲಾಗುವುದು ಎಂದರು.
ನಾಲೆಗಳಿಗೆ ನೀರು ಹಂಚಿಕೆ ವಿಷಯಾಧಾರಿತ ಮೀಸಲಿಟ್ಟಿರುವ ನೀರು ಸಮರ್ಪಕವಾಗಿ ಎಲ್ಲಾ ರೈತರಿಗೆ ದೊರಕುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸ ಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು. ಚಾಮರಾಜನಗರ ಡಿಸಿ ಬಿ.ಬಿ.ಕಾವೇರಿ, ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್. ನಾರಾಯಣರಾವ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »