ಹುಬ್ಬಳ್ಳಿ,ಜ.7-ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜ.7ರಿಂದ 28ರವರೆಗೆ ನಡೆಯಬೇಕಾಗಿದ್ದ ಪಿಎಸ್‍ಐ ಸಿವಿಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಅರ್ಹ ಅಭ್ಯರ್ಥಿಗಳ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯನ್ನು ದಿನಾಂಕ ಜ.7 ರಿಂದ ಜ.28 ರವರೆಗೂ ನಿಗದಿಪಡಿಸಲಾಗಿತ್ತು. ಆದರೆ ಜ.8ರಂದು ಭಾರತ ಬಂದ್ ಘೋಷಣೆಯಾಗಿರುವುದರಿಂದ ಸದರಿ ದಿನಾಂಕದಂದು ಇಟಿ/ಪಿಎಸ್‍ಟಿ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಲು ತೊಂದರೆಯುಂಟಾಗುವ ಸಾಧ್ಯತೆ ಇರುವ ಕಾರಣ ಪರೀಕ್ಷೆಯನ್ನು ಜ.13ರಂದು ನಿಗದಿಪಡಿಸಲಾಗಿದೆ. ಸದರಿ ಆದೇಶದಂತೆ ಇಟಿ/ಪಿಎಸ್‍ಟಿ ಪರೀಕ್ಷೆಗೆ…
ಸಿಎಎ ಪರ ಬೆಂಬಲಕ್ಕೆ ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ
January 7, 2020ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪ ಮೈಸೂರು,ಜ.6(ಪಿಎಂ)-ಪೌರತ್ವ ತಿದ್ದು ಪಡಿ ಕಾಯ್ದೆ (ಸಿಎಎ) ಪರ ಬಿಜೆಪಿ, ಸಾಮಾ ಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಿಎಎ ಪರ ಬೆಂಬಲ ಪಡೆಯಲು ಬಿಜೆಪಿಯವರು ಮಿಸ್ಡ್ ಕಾಲ್ (ದೂರವಾಣಿ ಕರೆ) ಅಭಿಯಾನ ಆರಂಭಿಸಿ ದ್ದಾರೆ. ಆದರೆ ಬೆಂಬಲಿಸಲು ನೀಡಿರುವ ದೂರವಾಣಿ ಕರೆ ಸಂಖ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರು ಎಂದು ಸೃಷ್ಟಿಸಿರುವ ನಕಲಿ ಖಾತೆಗಳಲ್ಲಿ…
ಜ.8ರ ದೇಶವ್ಯಾಪಿ ಮುಷ್ಕರಕ್ಕೆ ಮೈಸೂರಿನಲ್ಲೂ ಕಾರ್ಮಿಕ ಸಂಘಟನೆಗಳ ಬೆಂಬಲ
January 7, 2020ಮೈಸೂರು, ಜ.6(ಪಿಎಂ)- ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜ.8ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಮೈಸೂರಿನ ಹಲವು ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ. ವಿಕ್ರಾಂತ್ ಟೈರ್ಸ್ ಎಂಪ್ಲಾಯ್ಸ್ ಯೂನಿಯನ್ (ಸಿಐಟಿಯು) ಹಾಗೂ ಎಐಎಸ್‍ಎಫ್, ಎಸ್‍ಎಫ್‍ಐ, ಎಐಡಿಎಸ್‍ಓ, ಎಐವೈಎಫ್, ಡಿವೈಎಫ್‍ಐ, ಎಐಡಿ ವೈಓ, ಎನ್‍ಎಫ್‍ಐಡಬ್ಲ್ಯೂ, ಎಐಡಿಡಬ್ಲ್ಯೂಎ, ಎಐಎಂಎಸ್‍ಎಸ್ ಹಾಗೂ ಎಐಪಿಡಬ್ಲ್ಯೂಎ ಸಂಘಟನೆಗಳ ಜಿಲ್ಲಾ ಸಮಿತಿಗಳು ಬೆಂಬಲ ನೀಡಿವೆ. ವಿಕ್ರಾಂತ್ ಟೈರ್ಸ್ ಎಂಪ್ಲಾಯ್ಸ್ ಯೂನಿಯನ್ ಹಾಗೂ…
ಜೆಎನ್‍ಯು ವಿದ್ಯಾರ್ಥಿಗಳು, ಅಧ್ಯಾಪಕರ ಮೇಲೆ ದಾಳಿ ಖಂಡಿಸಿ ಮೈಸೂರಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
January 7, 2020ಮೈಸೂರು,ಜ.6(ಎಂಟಿವೈ, ಎಸ್‍ಪಿಎನ್)-ದೆಹಲಿ ಜೆಎನ್‍ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲಿನ ಹ¯್ಲÉ ಖಂಡಿಸಿ ನಗರದ ವಿವಿಧ ಸಂಘಟನೆಗಳು ಪ್ರತ್ಯೇಕ ಸ್ಥಳಗಳಲ್ಲಿ ಸೋಮ ವಾರ ಪ್ರತಿಭಟನೆ ನಡೆಸಿದ್ದಾರೆ. ಎಐಡಿಎಸ್‍ಓ ಪ್ರತಿಭಟನೆ: ಜೆಎನ್‍ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲಿನ ಹಲ್ಲೆ ಖಂಡಿಸಿ ಎಐಡಿಎಸ್‍ಒ ಕಾರ್ಯಕರ್ತರು ಮೈಸೂ ರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ವಿರುದ್ಧ ವಿವಿಧ ಘೋಷಣೆ ಕೂಗಿದ ರಲ್ಲದೆ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಜೆಎನ್‍ಯುಗೆ ಹೊರಗಡೆಯಿಂದ ಬಂದ ಕೆಲ ಕಿಡಿಗೇಡಿಗಳು,…
ಜ.19ರಂದು `ಒಬ್ಸಟ್ಯಾಕಲ್ ಕೋರ್ಸ್ ರೇಸ್’ ಮಕ್ಕಳ ಸಾಹಸ ಗುಣಗಳ ಉತ್ತೇಜಿಸುವ ಕ್ರೀಡೆ
January 7, 2020ಮೈಸೂರು ಅಮಿಟಿ ಲೇಡೀಸ್ ಸರ್ಕಲ್ 108ರಿಂದ ಆಯೋಜನೆ ಮೈಸೂರಿನಲ್ಲಿ ಪ್ರಥಮ ಬಾರಿಗೆ ಒಬ್ಸಟ್ಯಾಕಲ್ ಕ್ರೀಡೆ ಮೈಸೂರು,ಜ.6(ಪಿಎಂ)-ಮಕ್ಕಳಲ್ಲಿರುವ ಸಾಹಸ ಪ್ರವೃತ್ತಿ, ಧೈರ್ಯ ಹಾಗೂ ಉತ್ಸಾಹಿ ಗುಣಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ `ಮೈಸೂರು ಅಮಿಟಿ ಲೇಡೀಸ್ ಸರ್ಕಲ್ 108’ ಇದೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ಜ.19ರಂದು `ಒಬ್ಸಟ್ಯಾಕಲ್ ಕೋರ್ಸ್ ರೇಸ್ (ಅಡೆತಡೆ ನಡುವಿನ ಓಟ)’ ಆಯೋಜಿಸಿದೆ. ಮಕ್ಕಳ ಸಾಮಥ್ರ್ಯಕ್ಕೆ ಅನುಗುಣವಾಗಿ ಅಡೆತಡೆ ಓಟವನ್ನು ವಿನ್ಯಾಸಗೊಳಿಸಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವ್ಯವಸ್ಥಿತವಾಗಿ ಈ ಕ್ರೀಡೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 5ರಿಂದ…
ಕಲಾವಿದರು ಲಭ್ಯವಿರುವ ಅನುದಾನ ಬಳಸಿಕೊಳ್ಳಲು ಕನ್ನಡ, ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಸಲಹೆ
January 7, 2020ಮೈಸೂರು,ಜ.6(ಎಸ್‍ಪಿಎನ್)-ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಮೈಸೂರಿನ ಕಲಾವಿದರು ಭಾರತೀಯ ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ಪರಿಚಯಿಸುತ್ತಿ ರುವುದು ಉತ್ತಮ ಸಂಗತಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇ ಶಕ ಹನೂರು ಚೆನ್ನಪ್ಪ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ನಂದನ ಪ್ರದರ್ಶಕ ಕಲೆಗಳ ಕೇಂದ್ರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ವಿದ್ವತ್ ಭ್ರಮರ-2020ರ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಕಲಾವಿದರು ಬೇರೆಬೇರೆ ವೇದಿಕೆಗಳಲ್ಲಿ…
ವಿವಿಧ ವಸತಿ ಯೋಜನೆಯ ಫಲಾನುಭವಿಗಳ ಹಣ ನೇರ ಅವರ ಬ್ಯಾಂಕ್ ಖಾತೆಗೇ ಸಂದಾಯ
January 7, 2020ಬೆಂಗಳೂರು, ಜ. 6(ಕೆಎಂಶಿ)- ಬೆಳೆ ನಷ್ಟ ಪರಿಹಾರ ರೈತರ ಖಾತೆಗೆ ನೇರವಾಗಿ ತಲುಪುವ ಮಾದರಿ ಯಲ್ಲೇ ಇನ್ನುಮುಂದೆ ವಿವಿಧ ವಸತಿ ಯೋಜ ನೆಗಳ ಫಲಾನುಭವಿಗಳ ಹಣವನ್ನು ಅವರ ಖಾತೆಗೆ ಸರ್ಕಾರ ವರ್ಗಾ ವಣೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ಗ್ರಾಮ ಆವಾಸ್ ಯೋಜನೆಯಡಿ ನೀಡಲಾಗುತ್ತಿರುವ ಹಣದ ಪ್ರಮಾಣವನ್ನು 1.20 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ, ದೇವರಾಜ ಅರಸು ಹಿಂದುಳಿದ ವರ್ಗ ಗಳ ವಸತಿ ನಿಗಮದ ವತಿಯಿಂದ ನಿರ್ಮಾ ಣವಾಗುತ್ತಿದ್ದ ಮನೆಗಳಿಗೆ…
ಪೌರತ್ವ ಕಾಯ್ದೆ ಎಂದರೆ ಏನು ಗೊತ್ತೆ…? ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಶಾಸಕ ರಾಮದಾಸ್ ಜನಜಾಗೃತಿ
January 7, 2020ಮೈಸೂರು, ಜ.6(ಆರ್‍ಕೆಬಿ)- ಪೌರತ್ವ ತಿದ್ದುಪಡಿ ಕಾಯ್ದೆ-2019 ಅಂದರೆ ಏನು ಗೊತ್ತೆ…? ಅದು ಪೌರತ್ವ ನೀಡುವುದಕ್ಕೆ ಇರುವುದೇ ಹೊರತು ಪೌರತ್ವ ಕಿತ್ತುಕೊಳ್ಳು ವುದಕ್ಕಲ್ಲ ಎಂಬ ಅಂಶವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾಹಿತಿ ಇರುವ ಕರಪತ್ರಗಳನ್ನು ಜನರಿಗೆ ವಿತರಿಸಿ, ಕಾಯ್ದೆಯಿಂದ ದೇಶದಲ್ಲಿ ಯಾರಿಗೂ ತೊಂದರೆ ಇಲ್ಲ ಎಂಬ ಬಗ್ಗೆ ಮಾಹಿತಿ ನೀಡಿದರು. ಈ…
ವಿವಿಧ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ
January 7, 2020ಮೈಸೂರು, ಜ.6(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಗಳಲ್ಲಿ ಮೈಸೂರು ನಗರದ ವಿವಿಧೆಡೆ ಒಟ್ಟು 78.10 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು. ಮುಡಾ ಅನುದಾನದಲ್ಲಿ ಮೈಸೂರಿನ ಗಂಗೋತ್ರಿ ಹುಡ್ಕೋ ಬಡಾವಣೆಯಲ್ಲಿ 25 ಲಕ್ಷ ರೂ.ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, 24.90 ಲಕ್ಷ ರೂ.ಗಳಲ್ಲಿ ರಸ್ತೆ ಉದ್ಯಾನವನ ಅಭಿವೃದ್ಧಿ, 23.20 ಲಕ್ಷ ರೂ.ಗಳಲ್ಲಿ ಕುದುರೆಮಾಳದ (ಮಾನಸಿನಗರ) ಪರಿಶಿಷ್ಟರ ಕಾಲೋನಿಯಲ್ಲಿ…
ಇತ್ತೀಚೆಗೆ ದೇಹಕ್ಕಿರುವ ಬೆಲೆ ವ್ಯಕ್ತಿತ್ವಕ್ಕೆ ಇಲ್ಲವಾಗಿದೆ
January 7, 2020 ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ವಿಷಾದ ಸಿಕ್ಸ್ ಪ್ಯಾಕ್ ಬೇಕಿರುವುದು ಮನಸ್ಸು, ಹೃದಯಕ್ಕೆ ಮೈಸೂರು,ಜ.6-ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ದೊರೆಯುತ್ತಿರುವ ಬೆಲೆ ವ್ಯಕ್ತಿತ್ವಕ್ಕೆ ದೊರೆಯುತ್ತಿಲ್ಲ. ಸಿಕ್ಸ್‍ಪ್ಯಾಕ್ ದೇಹ ಹೊಂದ ಬೇಕೆಂದು ಯುವಜನ ಬಯಸುತ್ತಾರೆ. ಆದರೆ ನಿಜವಾಗಿ ಸಿಕ್ಸ್‍ಪ್ಯಾಕ್ ಬೇಕಿರುವುದು ಮನಸ್ಸು ಮತ್ತು ಹೃದಯಗಳಿಗೆ. ಸರ್ವಾಂಗೀಣ ಬೆಳವಣಿಗೆ ಇಂದಿನ ತುರ್ತಾಗಿದೆ ಎಂದು ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಅಭಿಪ್ರಾಯಪಟ್ಟರು. ನಗರದ ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿಪೂರ್ವ ಕಾಲೇಜಿನಲ್ಲಿ ಜನವರಿ 4ರ ಶನಿವಾರದಂದು ನಡೆದ 2019-20ನೇ ಸಾಲಿನ ಸಾಂಸ್ಕøತಿಕ…










