ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪ
ಮೈಸೂರು,ಜ.6(ಪಿಎಂ)-ಪೌರತ್ವ ತಿದ್ದು ಪಡಿ ಕಾಯ್ದೆ (ಸಿಎಎ) ಪರ ಬಿಜೆಪಿ, ಸಾಮಾ ಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಿಎಎ ಪರ ಬೆಂಬಲ ಪಡೆಯಲು ಬಿಜೆಪಿಯವರು ಮಿಸ್ಡ್ ಕಾಲ್ (ದೂರವಾಣಿ ಕರೆ) ಅಭಿಯಾನ ಆರಂಭಿಸಿ ದ್ದಾರೆ. ಆದರೆ ಬೆಂಬಲಿಸಲು ನೀಡಿರುವ ದೂರವಾಣಿ ಕರೆ ಸಂಖ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರು ಎಂದು ಸೃಷ್ಟಿಸಿರುವ ನಕಲಿ ಖಾತೆಗಳಲ್ಲಿ ಕಾಣಿಸಿ ಕೊಂಡಿದೆ. `ಅಶ್ಲೀಲ ಹರಟೆಗೆ ಕರೆ ಮಾಡಿ’, `ಕಾಲ್ ಮಾಡಿ’ ಎಂಬಿತ್ಯಾದಿ ಬರಹಗಳ ಕೆಳಗೆ ಈ ಸಂಖ್ಯೆ ಕಾಣಿಸುತ್ತಿದ್ದು, ಇದು ಬಿಜೆಪಿಯವರ ಹೀನ ಸಂಸ್ಕøತಿ ತೋರಿಸು ತ್ತದೆ ಎಂದು ವಾಗ್ದಾಳಿ ನಡೆಸಿದರು.
ಸಿಎಎ ವಿರುದ್ಧ ಪ್ರತಿಭಟನೆ ಮಾಡುವ ವರ ಕುರಿತು ಬಿಜೆಪಿ ಶಾಸಕ ಸೋಮ ಶೇಖರ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿ ದ್ದಾರೆ. ಇದು ಕೋಮು ಸೌಹಾರ್ದತೆ ಕದಡುವ ಹೇಳಿಕೆಯಾಗಿದ್ದು, ಅವರು ಅಲ್ಪ ಸಂಖ್ಯಾತರಿಗೆ ಅಕ್ಷರಶಃ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಜೆಎನ್‍ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಹಲ್ಲೆ ಖಂಡನೀಯ. ಸಿಎಎ ಹಾಗೂ ಎನ್‍ಆರ್‍ಸಿ ಬೆಂಬಲ ಪಡೆ ಯಲು ಬಿಜೆಪಿಯವರು ಹಂಚುತ್ತಿರುವ ಕರ ಪತ್ರದಲ್ಲಿ ಅರ್ಧಕ್ಕರ್ಧ ಸುಳ್ಳೇ ಇದ್ದು, ಇವರು ಮರೆಮಾಚಿದ ವಿಷಯಗಳನ್ನು ಒಳಗೊಂಡಂತೆ ಕಾಂಗ್ರೆಸ್‍ನಿಂದಲೂ ಕರ ಪತ್ರ ಹಂಚಲಾಗುವುದು ಎಂದರು.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತ ನಾಡಿ, 2024ರಲ್ಲಿ ಲೋಕಸಭಾ ಚುನಾ ವಣೆ ಗೆಲ್ಲಲು ಬಿಜೆಪಿಯವರು ಸಿಎಎ, ಎನ್‍ಆರ್‍ಸಿ ಮೂಲಕ ಜನತೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಸಿಎಎ ಹಾಗೂ ಎನ್‍ಆರ್‍ಸಿ ಮೂಲಕ ದಲಿತರು, ಹಿಂದು ಳಿದವರ ಮತದಾನದ ಹಕ್ಕು ಕಸಿಯಲು ಹುನ್ನಾರ ನಡೆಸಿದ್ದಾರೆ. ಸಿಎಎ ಮತ್ತು ಎನ್‍ಆರ್‍ಸಿ ಅನಾಹುತಗಳನ್ನು ನಾವು ಸಾಬೀತು ಪಡಿಸಲು ಸಿದ್ಧವಿದ್ದು, ಬಿಜೆಪಿಯವರು ಬೇಕಿದ್ದರೆ ನಮ್ಮೊಂದಿಗೆ ಚರ್ಚೆಗೆ ಬರಲಿ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಯಾದರೂ ಸರಿಯೇ ಎಂದು ಸವಾಲು ಹಾಕಿದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಮತ್ತಿತರರು ಗೋಷ್ಠಿಯಲ್ಲಿದ್ದರು.