ಹುಬ್ಬಳ್ಳಿ,ಜ.7-ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜ.7ರಿಂದ 28ರವರೆಗೆ ನಡೆಯಬೇಕಾಗಿದ್ದ ಪಿಎಸ್‍ಐ ಸಿವಿಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಅರ್ಹ ಅಭ್ಯರ್ಥಿಗಳ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯನ್ನು ದಿನಾಂಕ ಜ.7 ರಿಂದ ಜ.28 ರವರೆಗೂ ನಿಗದಿಪಡಿಸಲಾಗಿತ್ತು. ಆದರೆ ಜ.8ರಂದು ಭಾರತ ಬಂದ್ ಘೋಷಣೆಯಾಗಿರುವುದರಿಂದ ಸದರಿ ದಿನಾಂಕದಂದು ಇಟಿ/ಪಿಎಸ್‍ಟಿ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಲು ತೊಂದರೆಯುಂಟಾಗುವ ಸಾಧ್ಯತೆ ಇರುವ ಕಾರಣ ಪರೀಕ್ಷೆಯನ್ನು ಜ.13ರಂದು ನಿಗದಿಪಡಿಸಲಾಗಿದೆ. ಸದರಿ ಆದೇಶದಂತೆ ಇಟಿ/ಪಿಎಸ್‍ಟಿ ಪರೀಕ್ಷೆಗೆ ಹಾಜರಾಗುವಂತೆ ಹುಬ್ಬಳ್ಳಿ ಧಾರವಾಡ ಪೆÇಲೀಸ ಆಯುಕ್ತ ಆರ್.ದಿಲೀಪ್ ತಿಳಿಸಿದ್ದಾರೆ.