ಜ. 17 ರಿಂದ ಮೈಸೂರು-ಬೆಳಗಾವಿ  ನಡುವೆ ಟ್ರೂಜೆಟ್ ವಿಮಾನ ಹಾರಾಟ
ಮೈಸೂರು

ಜ. 17 ರಿಂದ ಮೈಸೂರು-ಬೆಳಗಾವಿ ನಡುವೆ ಟ್ರೂಜೆಟ್ ವಿಮಾನ ಹಾರಾಟ

January 8, 2020

ಮೈಸೂರು, ಜ. 7 (ಆರ್‍ಕೆ)-ಮೈಸೂರು-ಬೆಳಗಾವಿ ನಗರಗಳ ನಡುವೆ ವಿಮಾನ ಹಾರಾಟ ನಡೆಸಲು ಟ್ರೂಜೆಟ್ ಸಂಸ್ಥೆ ಮುಂದೆ ಬಂದಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದ್ದಾರೆ.

ಜನವರಿ 17 ರಿಂದ ಹೊಸ ಮಾರ್ಗದ ವಿಮಾನ ಸಂಚಾರ ಆರಂಭವಾಗಲಿದ್ದು, ಪ್ರತಿ ದಿನ ಬೆಳಿಗ್ಗೆ 9.35ಕ್ಕೆ ಬೆಳಗಾವಿ ನಗರದಿಂದ ಹೊರಡುವ ಟ್ರೂ ಜೆಟ್ ವಿಮಾನವು ಬೆಳಿಗ್ಗೆ 11ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪುವುದು. ಅದೇ ವಿಮಾನವು ಬೆಳಿಗ್ಗೆ 11.20ಕ್ಕೆ ಮೈಸೂರಿನಿಂದ ಪ್ರಯಾಣ ಆರಂಭಿಸಿ, ಮಧ್ಯಾಹ್ನ 12.45 ಗಂಟೆಗೆ ಬೆಳಗಾವಿ ತಲುಪಲಿದೆ.

ಬೆಳಗಾವಿಯಿಂದ ಕೊಲ್ಲಾಪುರ ಕನೆಕ್ಟಿಂಗ್ ಫ್ಲೈಟ್ ವ್ಯವಸ್ಥೆ ಇದ್ದು, ಮಧ್ಯಾಹ್ನ 1.05ಕ್ಕೆ ಬೆಳಗಾವಿಯಿಂದ ಹೊರಡಲಿರುವ ಟ್ರೂ ಜೆಟ್ ವಿಮಾನವು 30 ನಿಮಿಷದಲ್ಲಿ ಕೊಲ್ಲಾಪುರ ತಲುಪಲಿರುವುದರಿಂದ ಮೈಸೂರಿನಿಂದ ಬೆಳಗಾವಿಗೆ ಹೋಗುವವರಿಗೆ ಕೊಲ್ಲಾಪುರ ಪ್ರಯಾಣಕ್ಕೂ ಅವಕಾಶವಿದೆ ಎಂದು ಮಂಜುನಾಥ್ ತಿಳಿಸಿದರು.

 

Translate »