ಜ.19ರಂದು `ಒಬ್ಸಟ್ಯಾಕಲ್ ಕೋರ್ಸ್ ರೇಸ್’ ಮಕ್ಕಳ ಸಾಹಸ ಗುಣಗಳ ಉತ್ತೇಜಿಸುವ ಕ್ರೀಡೆ
ಮೈಸೂರು

ಜ.19ರಂದು `ಒಬ್ಸಟ್ಯಾಕಲ್ ಕೋರ್ಸ್ ರೇಸ್’ ಮಕ್ಕಳ ಸಾಹಸ ಗುಣಗಳ ಉತ್ತೇಜಿಸುವ ಕ್ರೀಡೆ

January 7, 2020
  • ಮೈಸೂರು ಅಮಿಟಿ ಲೇಡೀಸ್ ಸರ್ಕಲ್ 108ರಿಂದ ಆಯೋಜನೆ
  • ಮೈಸೂರಿನಲ್ಲಿ ಪ್ರಥಮ ಬಾರಿಗೆ ಒಬ್ಸಟ್ಯಾಕಲ್ ಕ್ರೀಡೆ

ಮೈಸೂರು,ಜ.6(ಪಿಎಂ)-ಮಕ್ಕಳಲ್ಲಿರುವ ಸಾಹಸ ಪ್ರವೃತ್ತಿ, ಧೈರ್ಯ ಹಾಗೂ ಉತ್ಸಾಹಿ ಗುಣಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ `ಮೈಸೂರು ಅಮಿಟಿ ಲೇಡೀಸ್ ಸರ್ಕಲ್ 108’ ಇದೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ಜ.19ರಂದು `ಒಬ್ಸಟ್ಯಾಕಲ್ ಕೋರ್ಸ್ ರೇಸ್ (ಅಡೆತಡೆ ನಡುವಿನ ಓಟ)’ ಆಯೋಜಿಸಿದೆ.

ಮಕ್ಕಳ ಸಾಮಥ್ರ್ಯಕ್ಕೆ ಅನುಗುಣವಾಗಿ ಅಡೆತಡೆ ಓಟವನ್ನು ವಿನ್ಯಾಸಗೊಳಿಸಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವ್ಯವಸ್ಥಿತವಾಗಿ ಈ ಕ್ರೀಡೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 5ರಿಂದ 16 ವರ್ಷ ವಯೋಮಾನದೊಳಗಿನ ಮಕ್ಕಳು ಇದರಲ್ಲಿ ಪಾಲ್ಗೊಳ್ಳಲು ಅವಕಾಶ ವಿದೆ. ಮೈಸೂರಿನ ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆ ಮೈದಾನದಲ್ಲಿ ಅಂದು ಬೆಳಿಗ್ಗೆ 7ರಿಂದ ಈ ಕ್ರೀಡೆ ಜರುಗಲಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಈ ವಿಷಯ ತಿಳಿಸಿದ ಮೈಸೂರು ಅಮಿಟಿ ಲೇಡೀಸ್ ಸರ್ಕಲ್ 108 (ಎಂಎಎಲ್‍ಸಿ-108) ಅಧ್ಯಕ್ಷೆ ರುಪಾಲ್ ಚಿರಾಗ್ (ರುಪಾಲ್ ಮೆಹ್ತಾ), `ಆರ್‍ಇ 3 ಕಮಾಂಡ್ ಫಿಟ್‍ನೆಸ್’ ಸಹಯೋಗ ದೊಂದಿಗೆ ಒಬ್ಸಟ್ಯಾಕಲ್ ಕೋರ್ಸ್ ರೇಸ್ ಆಯೋಜಿಸಿದ್ದು, `ಒಬ್ರಾಟ್ಸ್’ ಶೀರ್ಷಿಕೆಯಡಿ ಈ ಕ್ರೀಡೆ ನಡೆಯಲಿದೆ. ರೇಸ್‍ನಲ್ಲಿ ಭಾಗ ವಹಿಸುವ ಮಕ್ಕಳು 15 ಅಡೆತಡೆ ಚಟುವ ಟಿಕೆಗಳನ್ನು ದಾಟಿ ನಿಗದಿತ ಗುರಿ ತಲುಪ ಬೇಕಾಗುತ್ತದೆ. ಮೈಸೂರಿನಲ್ಲಿ ಈವರೆಗೆ ಈ ರೀತಿ ಕ್ರೀಡೆ ನಡೆದಿಲ್ಲ ಎಂದು ತಿಳಿಸಿದರು.

ಎಂಎ ಎಲ್‍ಸಿ-108ರ ಉಪಾಧ್ಯಕ್ಷೆ ಸಂಪದಾಶೀತಲ್ ಮಾತನಾಡಿ, ಮಕ್ಕಳಲ್ಲಿ ರುವ ಸಾಹಸಮಯ ಪ್ರವೃತ್ತಿಗೆ ಉತ್ತೇಜನ ನೀಡುವುದು ಈ ಕ್ರೀಡೆ ಆಯೋಜನೆಯ ಉದ್ದೇಶ. ಹೆಚ್‍ಡಿ ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ 2 ಕೊಠಡಿಗಳ ನಿರ್ಮಿಸಲು ಎಂಎಎಲ್‍ಸಿ -108 ಮುಂದಾಗಿದೆ. ಈ ಕ್ರೀಡೆಯಲ್ಲಿ ಭಾಗವಹಿಸುವವರ ನೋಂದಣಿ ಶುಲ್ಕದಿಂದ ಬರುವ ಹಣವನ್ನು ಈ ಕೊಠಡಿ ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು ಎಂದರು.

5ರಿಂದ 8 ವರ್ಷದೊಳಗಿನ ಕಿರಿಯರ ವಿಭಾಗ ಹಾಗೂ 9ರಿಂದ 16 ವರ್ಷದೊ ಳಗಿನ ಹಿರಿಯರ ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿಭಾಗ ದಲ್ಲಿ ಸ್ಪರ್ಧೆ ನಡೆಯಲಿದ್ದು, ಒಟ್ಟು 4 ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರತಿ ವಿಭಾಗದಲ್ಲೂ ಕ್ರಮವಾಗಿ ಮೂರು ಬಹುಮಾನ ನೀಡಲಾಗುವುದು. ವಿಜೇತ ರಿಗೆ ಟ್ರೋಫಿ ದೊರೆಯಲಿದ್ದು, ಭಾಗವ ಹಿಸಿದ ಎಲ್ಲರಿಗೂ ಪದಕ, ಪ್ರಮಾಣ ಪತ್ರ ಹಾಗೂ ಸಸಿಗಳನ್ನು ವಿತರಿಸಲಾ ಗುವುದು. ಕಿರಿಯರ ವಿಭಾಗಕ್ಕೆ 750 ರೂ. ಹಾಗೂ ಹಿರಿಯರ ವಿಭಾಗಕ್ಕೆ 850 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಮೈಸೂರಿನ ನೆಲೆ ಅನಾಥಾಶ್ರಮ ಹಾಗೂ ಹಿನಕಲ್‍ನ ಸರ್ಕಾರಿ ಶಾಲೆ ಸೇರಿದಂತೆ ಒಟ್ಟು 10 ಮಕ್ಕಳಿಗೆ ಉಚಿತವಾಗಿ ಪಾಲ್ಗೊಳ್ಳಲು ಅವ ಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಅಂದು ಬೆಳಿಗ್ಗೆ 7ಕ್ಕೆ ಲೇಡೀಸ್ ಸರ್ಕಲ್ ಇಂಡಿಯಾದ ಅಧ್ಯಕ್ಷೆ ನಿಧಿ ಗುಪ್ತಾ ಕ್ರೀಡೆಗೆ ಹಸಿರು ನಿಶಾನೆ ತೋರಲಿದ್ದಾರೆ. ಇವ ರೊಂದಿಗೆ ಅನೇಕ ಗಣ್ಯರು ಪಾಲ್ಗೊಳ್ಳಲಿ ದ್ದಾರೆ. ಅಂದು ಬೆಳಿಗ್ಗೆ 10ರೊಳಗೆಲ್ಲಾ ಕ್ರೀಡಾ ಚಟುವಟಿಕೆ ಮುಕ್ತಾಯಗೊಳ್ಳಲಿದೆ. ಟೈರ್‍ವಾಲ್ ಕ್ಲೈಂಬಿಂಗ್, ಟಾರ್ಜನ್ ಜಂಪ್, ಲಾಗ್‍ಕ್ಯಾರಿಂಗ್ ಮತ್ತು ಮಂಕಿ ಬಾರ್‍ಗಳಂತಹ ಅಡೆತಡೆಗಳನ್ನು ಈ ಕ್ರೀಡೆ ಹೊಂದಿರುತ್ತದೆ. ಸುರಕ್ಷತೆಗೆ ಸಂಬಂ ಧಿಸಿದಂತೆ ಎಲ್ಲಾ ಕ್ರಮಗಳನ್ನು ವಹಿಸ ಲಾಗುವುದು. ಸ್ಥಳದಲ್ಲಿ 2 ಆಂಬುಲೆನ್ಸ್ ಇರಲಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯರ ತಂಡವೂ ಸ್ಥಳದಲ್ಲಿ ಇರಲಿದೆ. ಜೊತೆಗೆ ಯಾವುದೇ ಅನಾಹುತಕ್ಕೆ ಎಡೆ ಯಾಗದಂತೆ ಕ್ರೀಡೆ ಚಟುವಟಿಕೆ ವಿನ್ಯಾಸ ಗೊಳಿಸಿದ್ದು, ಆದಾಗ್ಯೂ ಈ ಎಲ್ಲಾ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಒಬ್ರಾಟ್ಸ್ ಕ್ರೀಡೆಯ ನಿರ್ದೇಶಕ ಅಭಿಜಿತ್ ರವೀಂದ್ರ ಮಾತನಾಡಿ, ಇದೊಂದು ಸಾಹಸಮಯ ಕ್ರೀಡೆ. ಆದರೆ ಮಕ್ಕಳ ಸಾಮಥ್ರ್ಯ ಗಮನದಲ್ಲಿರಿಸಿಕೊಂಡು ಕ್ರೀಡಾ ಚಟುವಟಿಕೆ ವಿನ್ಯಾಸ ಮಾಡಲಾ ಗಿದೆ. ಎನ್‍ಸಿಸಿ ಶಿಬಿರದಲ್ಲಿ ಇಂತಹ ಕ್ರೀಡೆ ಗಳನ್ನು ಕಾಣಬಹುದು. ಇದರಲ್ಲಿ ಓಟ ಪ್ರಮುಖವಾಗಿರುವ ಚಟುವಟಿಕೆ ಯಾಗಿದ್ದು, 15 ಅಡೆತಡೆ ಚಟುವಟಿಕೆ ಗಳನ್ನು ನೀಡಲಾಗಿರುತ್ತದೆ. ಇಂತಹ ಚಟುವಟಿಕೆ ನಿಭಾಯಿಸಲು ವಿಶೇಷ ತರಬೇತಿ ಬೇಕೆಂದೇನು ಇಲ್ಲ. ಆ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ತಿಳಿಸಿದರು.

ಕಿರಿಯರ ವಿಭಾಗದಲ್ಲಿ ಮಕ್ಕಳು ಒಬ್ಬರು ಸಹಾಯಕರನ್ನು ಇರಿಸಿಕೊಳ್ಳಲು ಅವಕಾಶವಿದೆ. ಆದರೆ ಹೀಗೆ ಸಹಾಯದ ಮೂಲಕ ಆಟ ಆಡುವವರಿಗೆ ಬಹು ಮಾನ ಇರುವುದಿಲ್ಲ. ಸಹಾಯವಿಲ್ಲದೇ ಸ್ವತಂತ್ರವಾಗಿ ಪಾಲ್ಗೊಂಡು ಗುರಿ ಮುಟ್ಟವವರಿಗೆ ಬಹುಮಾನ ಇರುತ್ತದೆ. ಹಿರಿಯರ ವಿಭಾಗದಲ್ಲಿ ಸಹಾಯಕರನ್ನು ನಿಯೋಜಿಸಿಕೊಳ್ಳುವ ಅವಕಾಶ ಇರುವುದಿಲ್ಲ. ಯಾವುದೇ ಅಪಾಯಕ್ಕೆ ಆಸ್ಪದ ಆಗದಂತೆ ಕ್ರೀಡಾ ಚಟುವಟಿಕೆ ವಿನ್ಯಾಸ ಮಾಡ ಲಾಗಿದೆ ಎಂದು ವಿರಿಸಿದರು. ಎಂಎಎಲ್‍ಸಿ -108ರ ಸದಸ್ಯೆ ಸಹನಾ, ಕಾರ್ಯದರ್ಶಿ ಪೂಜಾ ಕಿರಣ್ ರಂಗ, ನಿಧಿ ಸಂಗ್ರಹ ಸಂಚಾ ಲಕಿ ಕಾವ್ಯ ಕೈಲಾಸ್ ಗೋಷ್ಠಿಯಲ್ಲಿದ್ದರು.

Translate »