ಕಲಾವಿದರು ಲಭ್ಯವಿರುವ ಅನುದಾನ ಬಳಸಿಕೊಳ್ಳಲು ಕನ್ನಡ, ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಸಲಹೆ
ಮೈಸೂರು

ಕಲಾವಿದರು ಲಭ್ಯವಿರುವ ಅನುದಾನ ಬಳಸಿಕೊಳ್ಳಲು ಕನ್ನಡ, ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಸಲಹೆ

January 7, 2020

ಮೈಸೂರು,ಜ.6(ಎಸ್‍ಪಿಎನ್)-ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಮೈಸೂರಿನ ಕಲಾವಿದರು ಭಾರತೀಯ ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ಪರಿಚಯಿಸುತ್ತಿ ರುವುದು ಉತ್ತಮ ಸಂಗತಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇ ಶಕ ಹನೂರು ಚೆನ್ನಪ್ಪ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ನಂದನ ಪ್ರದರ್ಶಕ ಕಲೆಗಳ ಕೇಂದ್ರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ವಿದ್ವತ್ ಭ್ರಮರ-2020ರ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಕಲಾವಿದರು ಬೇರೆಬೇರೆ ವೇದಿಕೆಗಳಲ್ಲಿ ಉತ್ತಮ ಕಲಾ ಪ್ರದರ್ಶನದಿಂದ ಮೈಸೂರು ಸಾಂಸ್ಕøತಿಕ ಲೋಕದ ಕೀರ್ತಿ ದೇಶ-ವಿದೇಶಗಳಲ್ಲೂ ಉತ್ತಮ ಹೆಸರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಪ್ರತಿಭಾವಂತ ಕಲಾವಿದರು ಕೇವಲ ಮೈಸೂರಿಗೆ ಮಾತ್ರ ಸೀಮಿತ ವಾಗಿಲ್ಲ. ಇವರು ನಾಡಿನ ಸಾಂಸ್ಕøತಿಕ ಲೋಕದ ಆಸ್ತಿಯಾಗಿದ್ದಾರೆ. ಇದು ಮೈಸೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೂ ಹೆಮ್ಮೆಯ ಸಂಗತಿ. ಕಲಾ ಕ್ಷೇತ್ರದಲ್ಲಿ ಸ್ವಂತ ದುಡಿಮೆಯಿಂದ ಕಲಾಕ್ಷೇತ್ರವನ್ನು ಮುನ್ನಡೆಸುವುದು ಕಷ್ಟದ ಕೆಲಸ. ಆದ್ದರಿಂದ ಕಲಾವಿದರು ಇಲಾಖೆ ಯಲ್ಲಿ ಇದಕ್ಕಾಗಿ ಮೀಸಲಾಗಿರುವ ಅನುದಾನವನ್ನು ಬಳಸಿಕೊಳ್ಳುವಂತೆ ಕಲಾವಿದರಿಗೆ ಸಲಹೆ ನೀಡಿದರು.

ಹಿರಿಯ ಕಲಾವಿದೆ ಡಾ.ವಸುಂಧರ ದೊರೆಸ್ವಾಮಿ ಮಾತನಾಡಿ, ಕಲಾಕ್ಷೇತ್ರದ ಸಾಧನೆಯನ್ನು ವಯಸ್ಸಿನ ಮಿತಿ ಇಲ್ಲದೆ ಸಮಾಜ ಗೌರವಿಸುತ್ತದೆ. ಅದರಲ್ಲೂ ಕರ್ನಾಟಕದ ಕಲಾವಿದರಿಗೆ ದೇಶ-ವಿದೇಶಗಳಲ್ಲೂ ಸಾಕಷ್ಟು ಗೌರವವಿದೆ ಎಂದರಲ್ಲದೆ, ಯುವ ಪ್ರತಿಭೆಗಳಿಗೆ ನಂದನ ಪ್ರದರ್ಶಕ ಕಲೆಗಳ ಕೇಂದ್ರದವರು ಅವಕಾಶ ಕಲ್ಪಿಸಿರುವುದು ಉತ್ತಮ ಸಂಗತಿ ಎಂದರು.

ವೇದಿಕೆಯಲ್ಲಿ ಉದ್ಯಮಿ ಕೆ.ವಿ.ಮೂರ್ತಿ, ನೂಪುರ ಕಲಾವಿದರು,ಸಾಂಸ್ಕøತಿಕ ಟ್ರಸ್ಟ್‍ನ ಪ್ರೊ.ಕೆ.ರಾಮಮೂರ್ತಿ ರಾವ್, ನಂದನ ಪ್ರದರ್ಶಕ ಕಲೆಗಳ ಕೇಂದ್ರದ ನಿರ್ದೇಶಕಿ ವಿದುಷಿ ವಾರಿಜಾ ನಲಿಗೆ ಉಪಸ್ಥಿತರಿದ್ದರು. ಬೆಂಗಳೂರಿನ ಅಮೃತಾ ಶಶಾಂಕ್ ನೃತ್ಯ ಪ್ರದರ್ಶಿಸಿದರು.

Translate »