ವಿವಿಧ ವಸತಿ ಯೋಜನೆಯ ಫಲಾನುಭವಿಗಳ ಹಣ ನೇರ ಅವರ ಬ್ಯಾಂಕ್ ಖಾತೆಗೇ ಸಂದಾಯ
ಮೈಸೂರು

ವಿವಿಧ ವಸತಿ ಯೋಜನೆಯ ಫಲಾನುಭವಿಗಳ ಹಣ ನೇರ ಅವರ ಬ್ಯಾಂಕ್ ಖಾತೆಗೇ ಸಂದಾಯ

January 7, 2020

ಬೆಂಗಳೂರು, ಜ. 6(ಕೆಎಂಶಿ)- ಬೆಳೆ ನಷ್ಟ ಪರಿಹಾರ ರೈತರ ಖಾತೆಗೆ ನೇರವಾಗಿ ತಲುಪುವ ಮಾದರಿ ಯಲ್ಲೇ ಇನ್ನುಮುಂದೆ ವಿವಿಧ ವಸತಿ ಯೋಜ ನೆಗಳ ಫಲಾನುಭವಿಗಳ ಹಣವನ್ನು ಅವರ ಖಾತೆಗೆ ಸರ್ಕಾರ ವರ್ಗಾ ವಣೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳ ಗ್ರಾಮ ಆವಾಸ್ ಯೋಜನೆಯಡಿ ನೀಡಲಾಗುತ್ತಿರುವ ಹಣದ ಪ್ರಮಾಣವನ್ನು 1.20 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ, ದೇವರಾಜ ಅರಸು ಹಿಂದುಳಿದ ವರ್ಗ ಗಳ ವಸತಿ ನಿಗಮದ ವತಿಯಿಂದ ನಿರ್ಮಾ ಣವಾಗುತ್ತಿದ್ದ ಮನೆಗಳಿಗೆ ನೀಡಲಾಗುವ ಹಣದ ಪ್ರಮಾಣವನ್ನು 1.80 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿ ಗಳಿಗೆ ಏರಿಸಲು ಸರ್ಕಾರ ನಿರ್ಧರಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಅರ್ಹ ಫಲಾನುಭವಿಗಳಿಗೆ ಪೂರ್ಣ ಹಣ ತಲುಪಿಸುವ ಉದ್ದೇಶದಿಂದ ಇಂತಹ ಕ್ರಮ ಕೈಗೊಳ್ಳಲಾಗುತ್ತದೆ. ವಿವಿಧ ವಸತಿ ಯೋಜನೆ ಯಡಿ ಸರ್ಕಾರಿ ದಾಖಲೆಯಲ್ಲಿ ಮನೆಗಳ ನಿರ್ಮಾಣವಾಗಿರುವುದೇ ಒಂದು, ವಾಸ್ತ ವವೇ ಬೇರೆ ಇದೆ. ಹಣ ಬಿಡುಗಡೆಯಾಗಿ ದ್ದರೂ, ಮನೆ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಇಲಾಖೆಯಲ್ಲಿ ನಡೆಯುತ್ತಿರುವ ಗೋಲ್ ಮಾಲ್‍ಗೆ ಇತಿಶ್ರೀ ಹಾಡಲು ಜಿಪಿಎಸ್ ಅಳ ವಡಿಸಿ, ಅದರಡಿಯೇ ಫಲಾನುಭವಿಗಳ ಮನೆಗಳು ಯಾವ ಹಂತದಲ್ಲಿದೇ ಎಂಬು ದನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಕುಳಿತು ಪರಿಶೀಲನೆ ಮಾಡಬಹುದಾಗಿದೆ.

ಈ ಹಿಂದೆಯೂ ಜಿಪಿಎಸ್ ಅಳವಡಿಸಿ ದ್ದರೂ, ಅದನ್ನು ಕಡಿತಗೊಳಿಸಿ, ವಿವಿಧ ವಸತಿ ಯೋಜನೆಯಡಿ ಫಲಾನುಭವಿ ಗಳಿಗೆ ನಿವೇಶನ ಇಲ್ಲವೆ ಮನೆಯನ್ನು ಮಂಜೂರು ಮಾಡಲಾಗಿದೆ.

ಕಳೆದ ಸರ್ಕಾರಗಳು ವರ್ಷಕ್ಕೆ ಹತ್ತ ರಿಂದ ಹದಿನೈದು ಲಕ್ಷ ಮನೆ ಮಾಡುವ ಗುರಿ ಹೊಂದಿದ್ದರು. ಆದರೆ ಶೇ.20ರಷ್ಟನ್ನು ಅವರಿಂದ ಮುಟ್ಟಲು ಸಾಧ್ಯವಾಗಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಿ ದ್ದಾರೆ. ಇದು ಕಾರ್ಯಸಾಧು ಅಲ್ಲ ಎಂದರು.

ಸರ್ಕಾರದ ವಿವಿಧ ವಸತಿ ಯೋಜನೆ ಗಳ ಅಡಿಯಲ್ಲಿ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವ ಸಂದರ್ಭದಲ್ಲಿ ಸರ್ಕಾರ ನಾಲ್ಕು ಕಂತುಗಳಲ್ಲಿ ಹಣ ಬಿಡುಗಡೆ ಮಾಡು ತ್ತಿತ್ತು. ಆದರೆ ಗ್ರಾಮಮಟ್ಟದಲ್ಲಿ ಬಿಡುಗಡೆ ಯಾದ ಹಣ ಪೂರ್ಣವಾಗಿ ಫಲಾನು ಭವಿಗಳ ಕೈಗೆ ತಲುಪುವ ಬದಲು ನಿರ್ದಿಷ್ಟ ಪ್ರಮಾಣದ ಕಮಿಷನ್ ಪಡೆಯುವ ಕೆಲಸ ಪ್ರಭಾವಿಗಳಿಂದಾಗುತ್ತಿತ್ತು.

ಹೀಗಾಗಿ ಸರ್ಕಾರ ಕೊಡುವ ಹಣದಲ್ಲಿ ಮನೆಯನ್ನು ಕಟ್ಟಲಾಗದೆ,ಪ್ರಭಾವಿಗಳಿಗೆ ಕಮೀಷನ್ ನೀಡಿ ಸುಮ್ಮನಾಗುತ್ತಿದ್ದ ಫಲಾ ನುಭವಿಗಳೇ ಅಧಿಕ ಎಂಬ ಮಾಹಿತಿಯ ಹಿನ್ನೆಲೆ ಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಹೀಗಾಗಿ ಇನ್ನು ಮುಂದೆ ಮಂಜೂರಾದ ಮನೆಗಳು,ಅದರ ಫಲಾನುಭವಿಗಳ ಕುರಿತು ಆನ್‍ಲೈನ್ ಮಾಹಿತಿ ಸರ್ಕಾರಕ್ಕಿರಲಿದ್ದು ಮನೆ ಕಟ್ಟಲು ನಾಲ್ಕು ಹಂತಗಳ ಬದಲು ಎರಡೇ ಹಂತಗಳಲ್ಲಿ ಫಲಾನುಭವಿಗಳಿಗೆ ಹಣ ನೀಡುವುದು.ಹಾಗೆಯೇ ಬಿಡುಗಡೆ ಯಾದ ಹಣವನ್ನು ನೇರವಾಗಿ ಫಲಾನುಭವಿ ಗಳ ಖಾತೆಗೇ ಹಾಕುವುದು ಅದರ ನಿರ್ಧಾರ.

ಹಾಗೆಯೇ ಒಂದು ಕ್ಷೇತ್ರದ ವ್ಯಾಪ್ತಿಯ ಲ್ಲಿರುವ ಗ್ರಾಮಪಂಚಾಯ್ತಿಗಳು ಎಷ್ಟು ಆಯಾ ಗ್ರಾಮಪಂಚಾಯ್ತಿಗಳಿಗೆ ಬೇಕಾದ ಮನೆ ಎಷ್ಟು ಎಂಬ ವಿಷಯವನ್ನು ನಿಕ್ಕಿ ಮಾಡಿ ಕೊಳ್ಳಲು ಇದುವರೆಗೆ ಗ್ರಾಮಸಭೆಗಿದ್ದ ಅಧಿ ಕಾರ ಶಾಸಕರಿಗೆ ವರ್ಗಾವಣೆ ಮಾಡಿದ್ದೇವೆ.
ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾ ರದ ವಿವಿಧ ವಸತಿ ಯೋಜನೆಗಳ ಫಲಾ ನುಭವಿಗಳ ಪಟ್ಟಿಯನ್ನು ಶಾಸಕರೇ ನಿರ್ಧ ರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಿ ದ್ದಾರೆ ಎಂಬುದು ಮೂಲಗಳ ಸ್ಪಷ್ಟ ವಿವರಣೆ.

Translate »