ಪೌರತ್ವ ಕಾಯ್ದೆ ಎಂದರೆ ಏನು ಗೊತ್ತೆ…? ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಶಾಸಕ ರಾಮದಾಸ್ ಜನಜಾಗೃತಿ
ಮೈಸೂರು

ಪೌರತ್ವ ಕಾಯ್ದೆ ಎಂದರೆ ಏನು ಗೊತ್ತೆ…? ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಶಾಸಕ ರಾಮದಾಸ್ ಜನಜಾಗೃತಿ

January 7, 2020

ಮೈಸೂರು, ಜ.6(ಆರ್‍ಕೆಬಿ)- ಪೌರತ್ವ ತಿದ್ದುಪಡಿ ಕಾಯ್ದೆ-2019 ಅಂದರೆ ಏನು ಗೊತ್ತೆ…? ಅದು ಪೌರತ್ವ ನೀಡುವುದಕ್ಕೆ ಇರುವುದೇ ಹೊರತು ಪೌರತ್ವ ಕಿತ್ತುಕೊಳ್ಳು ವುದಕ್ಕಲ್ಲ ಎಂಬ ಅಂಶವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾಹಿತಿ ಇರುವ ಕರಪತ್ರಗಳನ್ನು ಜನರಿಗೆ ವಿತರಿಸಿ, ಕಾಯ್ದೆಯಿಂದ ದೇಶದಲ್ಲಿ ಯಾರಿಗೂ ತೊಂದರೆ ಇಲ್ಲ ಎಂಬ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ದೇಶಕ್ಕೆ ಅಕ್ರಮ ನುಸುಳುಕೋರರನ್ನು ತಡೆಯಲು ಮತ್ತು 1971ರಲ್ಲಿ ಬಾಂಗ್ಲಾದೇಶದ ಯುದ್ಧ ಸಂದರ್ಭದಲ್ಲಿ ಬಂದವರು ವಾಪಸ್ ಕಳಿಸಿಬಿಡುತ್ತಾರೆ ಎಂದು ತಪ್ಪುತಿಳುವಳಿಕೆ ಇದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿ ಸ್ತಾನ ದೇಶಗಳ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತಿದ್ದು ಅಲ್ಲಿಯ ಅಲ್ಪ ಸಂಖ್ಯಾತ ಮಹಿಳೆಯರನ್ನು ಅತ್ಯಾಚಾರ ವೆಸಗಿ, ದೇವಸ್ಥಾನಗಳನ್ನು ಧ್ವಂಸ ಮಾಡಿ ತೊಂದರೆ ನೀಡಲಾಗುತ್ತಿದೆ. ಅಂಥವರಿಗೆ ಪೌರತ್ವ ಕೊಡಲು ಇರುವ ಕಾಯ್ದೆ ಇದು. ಸಾಕಷ್ಟು ಜನರಿಗೆ ಕಾಯ್ದೆಯ ಕುರಿತು ಮಾಹಿತಿ ಇಲ್ಲ. ಈ ಬಗ್ಗೆ ಯಾರೂ ಜನರಿಗೆ ತಿಳುವಳಿಕೆ ಮೂಡಿಸುತ್ತಿಲ್ಲ. ಈಗ ಜನರು ಜಾಗೃತರಾಗುತ್ತಿದ್ದಾರೆ ಎಂದರು.

ನೀವು ತಂದಿರುವ ಕಾಯ್ದೆಗೆ ನಮ್ಮ ಬೆಂಬಲವಿದೆ ಎಂಬ ಸಂದೇಶವುಳ್ಳ ಪ್ರತಿಗೆ ಒಂದು ಲಕ್ಷ ಸಹಿ ಪಡೆದು ಪ್ರಧಾನಮಂತ್ರಿ ಗಳಿಗೆ ಕಳುಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು,

ಈ ವೇಳೆ ಉರ್ದು ಶಾಲೆಯ ಕೆಲ ಮುಸ್ಲಿಂ ಮಕ್ಕಳು ಪೌರತ್ವ ಕಾಯ್ದೆ ಬಗ್ಗೆ ಪ್ರಶ್ನಿಸಿ ನಾವು ದಾಖಲೆ ನೀಡಬೇಕೇ? ಎಂದು ನೇರ ವಾಗಿ ಶಾಸಕರ ಮುಂದೆ ಪ್ರಶ್ನೆ ಇಟ್ಟಾಗ, ಈ ಕುರಿತು ಮಕ್ಕಳಿಗೆ ಪೌರತ್ವ ಕಾಯ್ದೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಅವರಲ್ಲಿದ್ದ ಗೊಂದಲ ನಿವಾರಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷ ವಡಿವೇಲು, ಎಂ.ಆರ್.ಬಾಲ ಕೃಷ್ಣ, ಪಾಲಿಕೆ ವಿಪಕ್ಷ ನಾಯಕ ಬಿ.ವಿ.ಮಂಜು ನಾಥ್, ಮುಖಂಡರಾದ ವಿದ್ಯಾಅರಸ್, ಪ್ರಸನ್ನ, ಸಂತೋಷ್, ಶಂಭು, ಹೇಮಂತ್, ಗ್ರಿಲ್ ಸಂತೋಷ್, ಗುರುರಾಜ್ ಶೆಣೈ, ಆದಶ್, ಸುಭಾಷ್, ಮನು ಅಪ್ಪಿ, ಜನಾಧರ್Àನ್, ವಸಂತ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »