ವಿವಿಧ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ
ಮೈಸೂರು

ವಿವಿಧ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ

January 7, 2020

ಮೈಸೂರು, ಜ.6(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಗಳಲ್ಲಿ ಮೈಸೂರು ನಗರದ ವಿವಿಧೆಡೆ ಒಟ್ಟು 78.10 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.

ಮುಡಾ ಅನುದಾನದಲ್ಲಿ ಮೈಸೂರಿನ ಗಂಗೋತ್ರಿ ಹುಡ್ಕೋ ಬಡಾವಣೆಯಲ್ಲಿ 25 ಲಕ್ಷ ರೂ.ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, 24.90 ಲಕ್ಷ ರೂ.ಗಳಲ್ಲಿ ರಸ್ತೆ ಉದ್ಯಾನವನ ಅಭಿವೃದ್ಧಿ, 23.20 ಲಕ್ಷ ರೂ.ಗಳಲ್ಲಿ ಕುದುರೆಮಾಳದ (ಮಾನಸಿನಗರ) ಪರಿಶಿಷ್ಟರ ಕಾಲೋನಿಯಲ್ಲಿ ಮಳೆ ನೀರು ಚರಂಡಿಗೆ ಕಲ್ವರ್ಟ್ ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ 5 ಲಕ್ಷ ರೂ.ಗಳಲ್ಲಿ ಗೋಕುಲಂ ವಾಣಿವಿಲಾಸ ಮೊಹಲ್ಲಾದ ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರದ ಶಾಲೆಗೆ 2 ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ವೇದಾವತಿ, ಮುಡಾ ಇಇ ಪಾಂಡುರಂಗ, ಎಇಇ ದಿನೇಶ್, ಮುಖಂಡರಾದ ದಿನೇಶ್‍ಗೌಡ, ಮಾತೃ ಮಂಡಳಿ ಶಿಶು ವಿಹಾರ ಕೇಂದ್ರ ಮಂಡಳಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಇನ್ನಿತರರು ಉಪಸ್ಥಿತರಿದ್ದರು.

Translate »