ಇತ್ತೀಚೆಗೆ ದೇಹಕ್ಕಿರುವ ಬೆಲೆ ವ್ಯಕ್ತಿತ್ವಕ್ಕೆ ಇಲ್ಲವಾಗಿದೆ
ಮೈಸೂರು

ಇತ್ತೀಚೆಗೆ ದೇಹಕ್ಕಿರುವ ಬೆಲೆ ವ್ಯಕ್ತಿತ್ವಕ್ಕೆ ಇಲ್ಲವಾಗಿದೆ

January 7, 2020

 ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ವಿಷಾದ  ಸಿಕ್ಸ್ ಪ್ಯಾಕ್ ಬೇಕಿರುವುದು ಮನಸ್ಸು, ಹೃದಯಕ್ಕೆ
ಮೈಸೂರು,ಜ.6-ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ದೊರೆಯುತ್ತಿರುವ ಬೆಲೆ ವ್ಯಕ್ತಿತ್ವಕ್ಕೆ ದೊರೆಯುತ್ತಿಲ್ಲ. ಸಿಕ್ಸ್‍ಪ್ಯಾಕ್ ದೇಹ ಹೊಂದ ಬೇಕೆಂದು ಯುವಜನ ಬಯಸುತ್ತಾರೆ. ಆದರೆ ನಿಜವಾಗಿ ಸಿಕ್ಸ್‍ಪ್ಯಾಕ್ ಬೇಕಿರುವುದು ಮನಸ್ಸು ಮತ್ತು ಹೃದಯಗಳಿಗೆ. ಸರ್ವಾಂಗೀಣ ಬೆಳವಣಿಗೆ ಇಂದಿನ ತುರ್ತಾಗಿದೆ ಎಂದು ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿಪೂರ್ವ ಕಾಲೇಜಿನಲ್ಲಿ ಜನವರಿ 4ರ ಶನಿವಾರದಂದು ನಡೆದ 2019-20ನೇ ಸಾಲಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟು ವಟಿಕೆಗಳ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡುತ್ತಿದ್ದರು.

ಯೌವನ ಬದುಕಿನಲ್ಲಿ ಬಹಳ ಬೆಲೆ ಬಾಳುವಂತಹ ವಯಸ್ಸು. ಈ ವಯಸ್ಸಿನಲ್ಲಿ ದೇಹ ಮನಸ್ಸುಗಳೆರಡೂ ಬಾಹ್ಯಪ್ರಪಂಚದ ನೂರಾರು ಬಣ್ಣಗಳೆಡೆಗೆ ಆಕರ್ಷಿತಗೊಳ್ಳು ತ್ತವೆ. ಆದರೆ ನೂರಾರು ಬಣ್ಣಗಳು ಆಂತ ರ್ಯದಲ್ಲಿ ಮೂಡಿದಾಗ ಮಾತ್ರ ವ್ಯಕ್ತಿತ್ವ ವಿಕಸನ ಹೊಂದುತ್ತದೆÉ. ಇಂದಿನ ಜನರಲ್ಲಿ ಬುದ್ಧಿವಂತಿಕೆಯ ಅಥವಾ ದೈಹಿಕ ಸದೃಢತೆಯ ಕೊರತೆಯಿಲ್ಲ. ಆದರೆ ಸಂಸ್ಕø ತಿಯ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ಯೊಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಂಸ್ಕøತಿಕ ಮತ್ತು ಕ್ರೀಡಾ ತ್ಮಕ ಆಯಾಮಗಳು ಚೆನ್ನಾಗಿದ್ದರೆ ಸಮಾಜ ದಲ್ಲಿ ಸಂಬಂಧಗಳು ಚೆನ್ನಾಗಿರುತ್ತವೆ ಎಂದರು.

ಗುರಿ ಸ್ಪಷ್ಟವಾಗಿರಬೇಕು ಮತ್ತು ಅದನ್ನು ಸಾಧಿಸಲು ಬದ್ಧತೆ ತೋರಬೇಕು. ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇಂದು ಬೆರಳತುದಿಯಲ್ಲಿ ಲಭ್ಯವಿದೆ. ದೈನಂದಿನ ಸಣ್ಣ ಸಣ್ಣ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಹ ತಂತ್ರಜ್ಞಾನದ ಮೊರೆ ಹೋಗುವ ಇಂದಿನ ಜನಾಂಗಕ್ಕೆ ನಮ್ಮ ಸಮಾ ಜದ ಮಹಾನ್ ವ್ಯಕ್ತಿಗಳ, ದೇಶದ ಇತಿಹಾಸ ಮತ್ತು ಸ್ಥಳಗಳ ಪರಿಚಯವೇ ಇಲ್ಲದಿರುವುದು ಬಹಳ ಶೋಚನೀಯ ಸಂಗತಿ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆಎಸ್‍ಎಸ್ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯ ನಿರ್ವಾಹಕರಾದ ಪ್ರೊ. ಬಿ.ವಿ.ಸಾಂಬ ಶಿವಯ್ಯ ಅವರು ಕಾಲೇಜುಗಳು ಕೇವಲ ಪಠ್ಯವಿಷಯಗಳನ್ನು ಕಲಿಸುವ ಕಾರ್ಖಾನೆ ಗಳಾಗಿರÀದೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸುವ ಸಂಪನ್ಮೂಲ ಕೇಂದ್ರಗಳಾಗ ಬೇಕು. ಅವರಲ್ಲಿ ಅಡಗಿರುವ ಸುಪ್ತಪ್ರತಿಭೆ ಯನ್ನು ಹೊರತೆಗೆದು ಉತ್ಕøಷ್ಟ ಜೀವನ ಸಾಧನೆಗೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಬೇಕು ಎಂದರು.

ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿ ಗಳ ಮುಂದೆ ಹಲವಾರು ಆಯ್ಕೆಗಳು ಲಭ್ಯವಿದೆ. ಆಯ್ದುಕೊಂಡ ವಿಷಯದಲ್ಲಿ ತಲಸ್ಪರ್ಶಿಯಾಗಿ ಅಧ್ಯಯನ ನಡೆಸಬೇಕು. 2025ರ ವೇಳೆಗೆ ವಿಶ್ವಮಟ್ಟದಲ್ಲಿ ಸೃಷ್ಟಿ ಯಾಗುವ ಉದ್ಯೋಗಾವಕಾಶದಲ್ಲಿ ಅತ್ಯಧಿಕ ಪಾಲು ಭಾರತೀಯರಿಗೆ ಸಿಗುವ ಸಾಧ್ಯತೆಯಿದೆ. ಅದನ್ನು ಪಡೆದುಕೊಳ್ಳಲು ಬೇಕಾದ ಕೌಶಲ್ಯಗಳನ್ನು ಇಂದಿನ ವಿದ್ಯಾರ್ಥಿಗಳು ಗಳಿಸಬೇಕಿದೆ. ಈ ನಿಟ್ಟಿನಲ್ಲಿ ಎಂಎಚ್‍ಆರ್‍ಡಿ ಮತ್ತು ಯುಜಿಸಿ ಸಹ ಯೋಗದಲ್ಲಿ ಕೇಂದ್ರ ಸರ್ಕಾರವು ಹಲವಾರು ಕೌಶಲ್ಯಾಧಾರಿತ ಕೋರ್ಸು ಗಳನ್ನು ದೇಶದ ವಿವಿಧ ಪ್ರತಿಷ್ಠಿತ ಕಾಲೇಜು ಗಳಲ್ಲಿ ಈಗಾಗಲೇ ಪ್ರಾರಂಭಿಸಿದೆ. ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಕಾಲೇಜು ಅಂತಹ ಕೆಲವೇ ಕಾಲೇಜು ಗಳಲ್ಲಿ ಒಂದಾಗಿರುವುದು ಹೆಮ್ಮೆಯ ಸಂಗತಿ. ಪದವಿಪೂರ್ವ ಶಿಕ್ಷಣದಿಂದ ಹಿಡಿದು ಪಿಎಚ್‍ಡಿ ಹಂತದವರೆಗಿನ ಅಧ್ಯ ಯನಕ್ಕೆ ಇಲ್ಲಿ ಅವಕಾಶವಿದ್ದು ವಿದ್ಯಾರ್ಥಿ ಗಳು ಇದರ ಪೂರ್ಣ ಪ್ರಯೋಜನ ಪಡೆದು ಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ಹಾಗೂ ಮೈಸೂರು ರೈಲ್ವೇ ಇಲಾಖೆ ಡೆಪ್ಯುಟಿ ಚೀಫ್ ಟಿಕೆಟ್ ಇನ್ಸ್‍ಪೆಕ್ಟರ್ ಎಸ್. ಗೋಪಾಲಕೃಷ್ಣ, ಸಾಧನೆ ಮಾಡಬೇಕಾ ದರೆ ಆಸಕ್ತಿ ಮತ್ತು ಕಠಿಣ ಪರಿಶ್ರಮ ಬಹಳ ಮುಖ್ಯ. ಇವೆರಡರಲ್ಲಿ ಯಾವುದರಲ್ಲಿ ಕೊರತೆ ಯಾದರೂ ಗುರಿ ಸಾಧಿಸಲು ಸಾಧ್ಯವಾಗು ವುದಿಲ್ಲ ಎಂದು ಕಿವಿಮಾತು ಹೇಳಿದರು.

ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿ ನಿಯರಾದ ಕು.ಅಲೀನ ಮೆಂಡೀಜ್ ಮತ್ತು ಕು.ಎಂ.ಸುಷ್ಮಿತಾ ಕ್ರಮವಾಗಿ ವಾರ್ಷಿಕ ಸಾಂಸ್ಕøತಿಕ ವರದಿ ಹಾಗೂ ಕ್ರೀಡಾ ವರದಿ ಗಳನ್ನು ಮಂಡಿಸಿದರು. ಇದೇ ಸಂದರ್ಭ ದಲ್ಲಿ ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಪಿಯುಸಿ ಕಲಾ ವಿದ್ಯಾರ್ಥಿ ಎಸ್.ಚೇತನ್ ಸ್ಪೀಡ್ ಪೇಂಯ್ಟಿಂಗ್ ಮೂಲಕ ಗಣೇಶನ ಚಿತ್ರವನ್ನು ಬಿಡಿಸಿ ಗಮನ ಸೆಳೆದರು. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಜಾದೂಗಾರ ಎಸ್.ಎಸ್ ಗುರುಸ್ವಾಮಿ ಅವರು ಜಾದೂ ಕಾರ್ಯಕ್ರಮ ನಡೆಸಿಕೊಟ್ಟು ವಿದ್ಯಾರ್ಥಿಗಳನ್ನು ರಂಜಿಸಿದರು.

ಗಣಕ ವಿಜ್ಞಾನ ಉಪನ್ಯಾಸಕಿ ಕು. ಡಿ.ಎಂ.ಮಾದಲಾಂಬಿಕಾ ಪ್ರಾರ್ಥಿಸಿದರು. ಜೆಎಸ್‍ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಸೋಮಶೇಖರ ಅತಿಥಿಗಳನ್ನು ಸ್ವಾಗತಿಸಿದರು. ಸಾಂಸ್ಕøತಿಕ ಸಮಿತಿಯ ಸಂಚಾಲಕರಾದ ಕನ್ನಡ ಉಪನ್ಯಾಸಕ ಎಸ್.ನಂಜುಂಡಸ್ವಾಮಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಟಿ.ಅರವಿಂದ್ ವೇದಿಕೆಯಲ್ಲಿ ಉಪಸ್ಥಿತರಿ ದ್ದರು. ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿನಿ ಕು.ಆರ್.ಜೀವಿತಾ ಕಾರ್ಯ ಕ್ರಮ ನಿರೂಪಿಸಿದರು. ಕು. ಎಂ.ಅಪೂರ್ವ ವಂದಿಸಿದರು.

Translate »