ಕೊಡಗಿನಲ್ಲಿ ಕಾಡಾನೆಗಳ ಅಟ್ಟಹಾಸ..!
ಕೊಡಗು

ಕೊಡಗಿನಲ್ಲಿ ಕಾಡಾನೆಗಳ ಅಟ್ಟಹಾಸ..!

January 7, 2020
  • ಕಾಫಿ ತೋಟಗಳಲ್ಲೇ ಕಾಡಾನೆಗಳ ವಾಸ ಸಂಕಷ್ಟದಲ್ಲಿ ಕಾರ್ಮಿಕರು, ಬೆಳೆಗಾರರು
  • ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ವಿಫಲಕಾಫಿ ಕೊಯ್ಲು, ಭತ್ತ ಕಟಾವಿಗೆ ಕಂಟಕ

ಮಡಿಕೇರಿ, ಜ.6- ಕೊಡಗು ಜಿಲ್ಲೆ ಯಾದ್ಯಂತ ಕಾಡಾನೆಗಳ ಅಟ್ಟಹಾಸ ಮುಂದುವರೆದಿದೆ. ವೀರಾಜಪೇಟೆ ಮತ್ತು ಸೋಮವಾರಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಈಗ ಕಾಡಾನೆ-ಮಾನವ ಸಂಘರ್ಷ ಸಾಮಾನ್ಯ ಎಂಬಂತಾ ಗಿದ್ದು, ಆತಂಕ ಸೃಷ್ಟಿ ಮಾಡಿದೆ.

ಜಿಲ್ಲೆಯ ಜನತೆಗೆ ವರ್ಷದ ಕೂಳು ನೀಡುವ ಕಾಫಿ ಮತ್ತು ಭತ್ತ ಕೊಯ್ಲು ಸಂದರ್ಭದಲ್ಲಿ ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡು ತ್ತಿರುವುದು ಸ್ಥಳೀಯರನ್ನು ಭಯ ಭೀತಿ ಗೊಳಿಸಿದೆ. ಇದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆ ಯಲ್ಲಿ ಕಳೆದ 10 ವರ್ಷದಲ್ಲಿ 77 ಮಂದಿ ಆನೆ ದಾಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೃತ ಪಟ್ಟಿರುವುದು ಆತಂಕ ಹುಟ್ಟಿಸಿದೆ.

ಕಾಫಿ ಕೊಯ್ಲು, ಭತ್ತ ಕಟಾವಿಗೆ ಹಿನ್ನಡೆ: ಜಿಲ್ಲೆಯಾದ್ಯಂತ ಈಗ ಅರೆಬಿಕಾ ಕಾಫಿ ಕೊಯ್ಲು ಕಾರ್ಯ ನಡೆಯುತ್ತಿದ್ದು, ಅತಿ ವೃಷ್ಟಿ ಎದುರಿಸಿ ಉಳಿದುಕೊಂಡಿರುವ ಕಾಫಿಯನ್ನು ಕಾಡಾನೆ ಹಾವಳಿ ನಡುವೆ ಕೊಯ್ಲು ಮಾಡಲೇಬೇಕಾದ ಅನಿ ವಾರ್ಯತೆಯಲ್ಲಿ ಬೆಳೆಗಾರರಿದ್ದಾರೆ. ಅದ ರೊಂದಿಗೆ ಬಹುತೇಕ ಪ್ರದೇಶಗಳಲ್ಲಿ ಭತ್ತ ಕಟಾವು ಕಾರ್ಯವೂ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಡಾನೆಗಳು ದಾಂಧಲೆ ಎಬ್ಬಿಸುತ್ತಿರುವುದು ಬೆಳೆಗಾ ರರು, ರೈತರು ಮತ್ತು ಕೃಷಿ ಕಾರ್ಮಿಕ ವರ್ಗವನ್ನು ಕಂಗೆಡಿಸಿದೆ. ಕಾಫಿ ತೋಟ, ಭತ್ತದ ಗದ್ದೆಗಳಿಗೆ ಕಾಡಾನೆಗಳು ದಾಳಿ ಇಡುತ್ತಿರುವುದರಿಂದ ಬೆಳೆಗಾರರು, ರೈತರು ತಮ್ಮ ಜಮೀನಿಗೆ ತೆರಳಲು ಭಯಪಡು ತ್ತಿದ್ದಾರೆ. ದುಪ್ಪಟ್ಟು ಕೂಲಿ ಕೊಡುತ್ತೇವೆ ಎಂದರೂ ಕಾರ್ಮಿಕರು ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ. ಕೆಲಸ ಮಾಡುತ್ತಿರುವವರ ಮೇಲೆ ಆನೆಗಳು ಏಕಾಏಕಿ ದಾಳಿ ನಡೆಸಿ ಗಾಯ ಗೊಳಿಸುತ್ತಿರುವ ಪ್ರಕರಣಗಳು ಕಾರ್ಮಿಕ ರಿಗೆ ಜೀವ ಭಯ ಕಾಡುವಂತೆ ಮಾಡಿದೆ. ಹಾಗಾಗಿ ಕಾಫಿ ಕೊಯ್ಲು ಮತ್ತು ಭತ್ತ ಕಟಾವು ಕಾರ್ಯದಲ್ಲಿ ಹಿನ್ನಡೆ ಯಾಗು ತ್ತಿದೆ ಎನ್ನುವುದು ಇಲ್ಲಿನ ಬೆಳೆಗಾರರ ಅಳಲು.

ಹಗಲಿನಲ್ಲೇ ಹಾವಳಿ: ರಾತ್ರಿ ವೇಳೆ ಯಲ್ಲಿ ಜನವಸತಿ ಪ್ರದೇಶಗಳಿಗೆ ನುಗ್ಗಿ ರೈತರ ಬೆಳೆಗಳನ್ನು ನಾಶಪಡಿಸಿ ಮತ್ತೆ ಕಾಡಿಗೆ ಮರಳುತ್ತಿದ್ದ ಕಾಡಾನೆಗಳು ಈಗ ಹಗಲಿನ ವೇಳೆಯಲ್ಲೇ ರಾಜಾರೋಷ ವಾಗಿ ಕಾಫಿ ತೋಟ, ಹೊಲಗಳಿಗೆ ದಾಳಿ ಇಡುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಸಿದ್ದಾಪುರ ಸಮೀಪದ ಇಂಜಿಲಗೆರೆಯಲ್ಲಿ ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ಶಾಲೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಕಾಡಾನೆ ದಾಳಿ ನಡೆಸಿದೆ.

ಅಮ್ಮತ್ತಿ ಸಮೀಪ ಕಾಫಿ ತೋಟದಲ್ಲಿ ಕಾಫಿ ಬೆಳೆಗಾರನ ಮೇಲೆ ಹಗಲಿನ ವೇಳೆಯೇ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯ ಗೊಳಿಸಿದೆ. ಸೋಮವಾರಪೇಟೆ ತಾಲೂ ಕಿನ ಕೂಡಿಗೆಯಂತಹ ಜನನಿಬಿಡ ಊರು ಗಳಲ್ಲೂ ಗಜರಾಜನು ನಿರ್ಭೀತಿಯಿಂದ ಸಂಚರಿಸಿ, ಹಾರಂಗಿ ನದಿಯಲ್ಲಿ ಜಲಕ್ರೀಡೆ ಯಾಡಿ ಸ್ಥಳೀಯರಲ್ಲಿ ಭಯದ ವಾತಾ ವರಣ ಸೃಷ್ಟಿಯಾಗಲು ಕಾರಣವಾಗಿದೆ.

ಕೂಡಿಗೆ ಗ್ರಾಪಂ ವ್ಯಾಪ್ತಿಯ ಮದಲಾ ಪುರ, ಹುದುಗೂರು, ಬ್ಯಾಡಗೊಟ್ಟ, ಸೀಗೆ ಹೊಸೂರು, ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಕಣಿವೆ, ಹುಲುಸೆ ಪ್ರದೇಶದಲ್ಲೂ ಹಗಲಿ ನಲ್ಲಿ ಕಾಡಾನೆಗಳ ದರ್ಶನ ಸಾಮಾನ್ಯ ಎಂಬಂತಾಗಿದೆ. ಕಾಫಿ ತೋಟಗಳಲ್ಲೇ ಬಿಡು ಬಿಡುತ್ತಿವೆ. ಇನ್ನು ದಕ್ಷಿಣ ಕೊಡಗಿನ ಗ್ರಾಮಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಾಡಾನೆ ಉಪಟಳದಿಂದ ದಕ್ಷಿಣ ಕೊಡಗಿನಲ್ಲಿ ಸಾವಿರಾರು ಎಕರೆ ಪ್ರದೇಶ ದಲ್ಲಿ ಭತ್ತದ ಬೆಳೆಯುತ್ತಿದ್ದ ಗದ್ದೆಗಳು ಇಂದು ಪಾಳು ಬಿದ್ದಿವೆ. ಒಂದು ಕಾಲ ದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಹಚ್ಚ ಹಸುರಿನ ಭತ್ತದ ಪೈರುಗಳಿಂದ ಕಂಗೊಳಿ ಸುತ್ತಿದ್ದ ಗದ್ದೆಗಳು ಇಂದು ಬರಡು ಭೂಮಿಯಾಗಿ ಗೋಚರಿಸುತ್ತಿವೆ.

ಪ್ರಸಾದ್ ಸಂಪಿಗೆಕಟ್ಟೆ

Translate »