ಫೆ.26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಸಿನಿಮಾಗಳ ಪ್ರದರ್ಶನ
ಮೈಸೂರು

ಫೆ.26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಸಿನಿಮಾಗಳ ಪ್ರದರ್ಶನ

January 10, 2020

ಬೆಂಗಳೂರು,ಜ.9-ಮುಂದಿನ ತಿಂಗಳು 26 ರಿಂದ ನಗರದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ ವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಚಲನಚಿತ್ರೋತ್ಸವದ ಲಾಂಛನ ವನ್ನು ಬಿಡುಗಡೆ ಮಾಡಿದರು.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಲಾಂಛನ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಸಿ.ಸಿ. ಪಾಟೀಲ್, ಶಾಸಕ ಎಸ್.ಆರ್.ವಿಶ್ವನಾಥ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯ ದರ್ಶಿ ಪಿ.ಮಣಿವಣ್ಣನ್ ಉಪಸ್ಥಿತರಿದ್ದರು. ಫೆಬ್ರವರಿ 26ರಂದು ಕಂಠೀರವ ಒಳಾಂ ಗಣ ಕ್ರೀಡಾಂಗಣದಲ್ಲಿ ಸಿಎಂ ಯಡಿ ಯೂರಪ್ಪ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ, ಚಲನಚಿತ್ರ ವಾಣಿಜ್ಯ ಮಂಡಳಿ ಗಳ ಸಹಯೋಗದೊಡನೆ ಈ ಬಾರಿಯ ಚಲನಚಿತ್ರೋತ್ಸವ ನಡೆಯಲಿದ್ದು ರಾಜಾಜಿ ನಗರದ ಓರಿಯನ್ ಮಾಲ್‍ನ 11 ಪರದೆ ಯಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಒಟ್ಟಾರೆ 7 ದಿನ 14 ವಿಭಾಗಗಳಲ್ಲಿ 50 ದೇಶಗಳ 200 ಚಿತ್ರಗಳು ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವಕ್ಕೆ ಪ್ರವೇಶ ದರ ಸಹ ನಿಗದಿಯಾಗಿದ್ದು ಸಾಮಾನ್ಯ ಜನ ರಿಗೆ 800 ರೂ. ಚಿತ್ರತಂಡ, ಚಲನಚಿತ್ರ ವಿದ್ಯಾರ್ಥಿಗಳಿಗೆ 400 ರೂ. ವಿಧಿಸಲಾಗಿದೆ.

Translate »