ಕಲಾರಸಿಕರ ಮನಸೆಳೆದ ‘ನೂಪುರ ನೃತ್ಯೋತ್ಸವ’
ಮೈಸೂರು

ಕಲಾರಸಿಕರ ಮನಸೆಳೆದ ‘ನೂಪುರ ನೃತ್ಯೋತ್ಸವ’

January 10, 2020

ಮೈಸೂರು, ಜ.9(ಎಂಕೆ)- ಮೈಸೂರಿನ ಕಲಾಮಂದಿರದಲ್ಲಿ ನೂಪುರ ನೃತ್ಯಾಲಯ ಆಯೋಜಿಸಿದ್ದ ‘ನೂಪುರ ನೃತ್ಯೋತ್ಸವ’ ಭರತನಾಟ್ಯ ಪ್ರಿಯರ ಮನಸೆಳೆಯಿತು.

ಮಹಿಳೆಯರಿಂದಲೇ ಭರ್ತಿಯಾಗಿದ್ದ ವೇದಿಕೆಯಲ್ಲಿ ಭರತನಾಟ್ಯ ಕಲಾವಿದೆಯರಾದ ಪುಣ್ಯ, ತಾನಿಯ, ರೋಹಿಣಿ, ಹರಿಥಾ, ನಿಶಿತಾ, ಪೂರ್ಣಿಮಾ, ಆದ್ರ್ರ, ಲೀಶಾ ಮತ್ತು ನೇಶಾ ಅವರು, ಅಮೋಘ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ರಂಜಿಸಿದರು.

ಗಣಪತಿ ಸ್ತುತಿಯೊಂದಿಗೆ ನೃತ್ಯ ಪ್ರಾರಂ ಭಿಸಿದ ಭರತನಾಟ್ಯ ಕಲಾವಿದೆಯರು, ಪುಷ್ಪಾಂ ಜಲಿ, ಅಲಿರುಪು, ಜತಿಸ್ವರ, ರಾಗಮಾಲಿಕೆಯ ಪದಂ, ಕೀರ್ತನಂ, ನಟೇಶ ಕೌತುವಂ, ತಿಲ್ಲಾಣ ಕೃತಿಗಳ ಗಾಯನಕ್ಕೆ ಆಕರ್ಷಕ ಭಾವಭಂಗಿಯಲ್ಲಿ ನೃತ್ಯ ಮಾಡುವ ಮೂಲಕ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದರು.

ನಟುವಾಂಗದಲ್ಲಿ ವಿದುಷಿ ಡಾ.ಸ್ವಾತಿ ಪಿ. ಭಾರದ್ವಾಜ್, ಹಾಡುಗಾರಿಕೆಯಲ್ಲಿ ಸಿ.ಎನ್. ಲಕ್ಷ್ಮಿ, ಮೃದಂಗ ವಾದನದಲ್ಲಿ ವಿದುಷಿ ಕೆ.ಶಶಿ ಕಲಾ, ಪಿಟೀಲು ರಾಧಿಕಾ ವೆಂಕಟರಾಮನ್, ಕೊಳಲು ಡಾ.ಡಿ.ಆರ್.ಜಯಶ್ರೀ ಸಾಥ್ ನೀಡಿದರು.

ಈ ವೇಳೆ ನೂಪುರ ನೃತ್ಯೋತ್ಸವಕ್ಕೆ ಚಾಲನೆ ನೀಡಿದ ವಿದುಷಿ ಡಾ.ದೀಪಿಕಾ ಮಾಧವ್ ಪಾಂಡುರಂಗಿ ಮಾತನಾಡಿ, ನೃತ್ಯದೊಂದಿಗೆ ಅಭಿನಯಿಸುವುದು ಕಷ್ಟ. ಕಲಿಕೆಯಲ್ಲಿ ವಯಸ್ಸು ಲೆಕ್ಕಕ್ಕಿಲ್ಲ. ಅದರಲ್ಲೂ ಶಾಸ್ತ್ರೀಯ ಕಲೆಗಳ ಕಲಿಕೆ ಯಲ್ಲಿ ಚೌಕಾಸಿ ಮಾಡುವಂತಿಲ್ಲ ಎಂದರು.

ಇವತ್ತಿನ ಕಾರ್ಯಕ್ರಮ ಮಾದರಿ ಕಾರ್ಯ ಕ್ರಮವಾಗಿದೆ. ಮೈಸೂರಿನಲ್ಲಿ ಕಲಾಮಂಡಲಂ ಶೈಲಿಯ ಭರತನಾಟ್ಯ ಹೇಳಿಕೊಡುವವರ ಸಂಖ್ಯೆ ಕಡಿಮೆ. ಈ ನಿಟ್ಟಿನಲ್ಲಿ ನೂಪುರ ನೃತ್ಯಾ ಲಯ ಹಲವಾರು ವಿದ್ಯಾರ್ಥಿಗಳಿಗೆ ವಿಶೇಷ ಭರತನಾಟ್ಯ ಶೈಲಿಗಳನ್ನು ಕಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಆಧ್ಯಾತ್ಮ ಚಿಂತಕಿ ಸೌಮ್ಯಾ ರಾಜಗೋಪಾಲ್, ಲೀಲಾವತಿ ವೆಂಕಟೇಶ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Translate »