ಕರ್ನಾಟಕದಲ್ಲಿ ಹಿಟ್ಲರ್ ಆಡಳಿತಕ್ಕೆ ಅವಕಾಶ ಕೊಡಲ್ಲ: ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಿದ್ದರಾಮಯ್ಯ ಕಿಡಿ
ಮೈಸೂರು

ಕರ್ನಾಟಕದಲ್ಲಿ ಹಿಟ್ಲರ್ ಆಡಳಿತಕ್ಕೆ ಅವಕಾಶ ಕೊಡಲ್ಲ: ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಿದ್ದರಾಮಯ್ಯ ಕಿಡಿ

January 10, 2020

ಬೆಂಗಳೂರು: ಶಿಕ್ಷಣ ಸಂಸ್ಥೆಗಳು ಜ್ಞಾನದ ಪ್ರಸಾರ ಕೇಂದ್ರಗಳು, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವದ ಮೂಲ ವಾಗಿದೆ. ಬಿಜೆಪಿಯ ಸಿದ್ಧಾಂತವು ಫ್ಯಾಸಿ ಸಂನ ದುರ್ಬಲ ಅಡಿಪಾಯದಲ್ಲಿದೆ. ನಮ್ಮ ವಿಶ್ವವಿದ್ಯಾಲಯಗಳ ಜ್ಞಾನದ ನೆಲೆಯಿಂದ ಬಿಜೆಪಿಗೆ ಬೆದರಿಕೆ ಇದೆ. ಆದ್ದರಿಂದ ಅವು ಗಳನ್ನು ಮಟ್ಟಹಾಕಲು ಮತ್ತು ದುರ್ಬಲ ಗೊಳಿಸಲು ಬಯಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಿಜೆಪಿಯ ಗೂಂಡಾಗಳು ಬೆಂಗಳೂ ರಿನ ಜ್ಯೋತಿನಿವಾಸ್ ಕಾಲೇಜಿನ ವಿದ್ಯಾರ್ಥಿ ಗಳಿಗೆ ಸಿಎಎಗೆ ಬೆಂಬಲ ನೀಡುವಂತೆ ಬೆದ ರಿಕೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರೇ, ನಿಮ್ಮ ಪಕ್ಷದ ಗೂಂಡಾಗಿರಿಗಳನ್ನು ನಿಯಂ ತ್ರಿಸಲು ನಾನು ನಿಮಗೆ ಒತ್ತಾಯಿಸುತ್ತಿದ್ದೇನೆ. ನಿಮ್ಮ ಸ್ವಾರ್ಥ ಉದ್ದೇಶಗಳಿಗಾಗಿ ಜ್ಞಾನ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮಟ್ಟ ಹಾಕಬೇಡಿ. ಕರ್ನಾಟಕದಲ್ಲಿ ನಿಮ್ಮ ಹಿಟ್ಲರ್ ಆಡಳಿತಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Translate »