ಅಪ್ರಾಪ್ತ ಬಾಲಕಿಗೆ ಜನಿಸಿದ ಮಗು ಮಾರಾಟ ಪ್ರಕರಣ: ಜಿಲ್ಲಾಸ್ಪತ್ರೆಯ ವೈದ್ಯ ದಂಪತಿ ವಿರುದ್ಧ ತನಿಖೆ
ಕೊಡಗು

ಅಪ್ರಾಪ್ತ ಬಾಲಕಿಗೆ ಜನಿಸಿದ ಮಗು ಮಾರಾಟ ಪ್ರಕರಣ: ಜಿಲ್ಲಾಸ್ಪತ್ರೆಯ ವೈದ್ಯ ದಂಪತಿ ವಿರುದ್ಧ ತನಿಖೆ

January 10, 2020

ವೈದ್ಯಕೀಯ ಅಧೀಕ್ಷಕ ಡಾ.ಲೋಕೇಶ್ ಭರವಸೆ
ಮಡಿಕೇರಿ, ಜ.9- ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿ, ಮಗುವನ್ನು 1.50 ಲಕ್ಷ ರೂ. ಹಣಕ್ಕೆ ಮಾರಾಟ ಮಾಡಿದ ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯ ದಂಪತಿಯ ವಿರುದ್ದ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಗ್ಯ ಇಲಾಖೆಯ ಮೇಲ ಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಲೋಕೇಶ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಲೋಕೇಶ್, ಮಡಿಕೇರಿ ನಗರ ಪೊಲೀಸ್ ಠಾಣೆ ಯಲ್ಲಿ ಸರಕಾರಿ ವೈದ್ಯ ದಂಪತಿಯ ವಿರುದ್ದ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಗಂಭೀರ ಮೊಕದ್ದಮ್ಮೆ ದಾಖಲಾಗಿದ್ದು, ಸೆಕ್ಷನ್‍ಗಳ ವಿವಿರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ತಮಗೆ ನೀಡಿದ್ದಾರೆ. ಈ ವಿಚಾರದ ಕುರಿತು ವೈದ್ಯ ದಂಪತಿ ಕರ್ತವ್ಯ ನಿರ್ವಹಿಸುತ್ತಿರುವ ವಿಭಾಗಗಳ ಮುಖ್ಯಸ್ಥರಿಗೆ ಈಗಾಗಲೇ ನೋಟಿಸ್ ನೀಡಿ, ಪ್ರಕರಣದ ವಿಚಾರಣೆ ನಡೆಸು ವಂತೆ ಸೂಚಿಸಲಾಗಿದೆ ಎಂದು ಲೋಕೇಶ್ ಹೇಳಿದರು.

ಈ ವರದಿ ಮತ್ತು ಪೊಲೀಸ್ ಇಲಾಖೆ ದಾಖಲಿಸಿ ರುವ ಮೊಕದ್ದಮ್ಮೆಯನ್ನು ಕೂಡ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ರಂಗಪ್ಪ ಮಾತನಾಡಿ, ಅಪ್ರಾ ಪ್ತೆಗೆ ಹೆರಿಗೆ, ಮಗು ಮಾರಾಟ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಯ ಜಂಟಿ ಆಯುಕ್ತರು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ. ಕೆಪಿಎಂ ಕಾಯಿದೆ ಅಡಿಯಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಕೆಪಿಎಂ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಹಿನ್ನೆಲೆ ಯಲ್ಲಿ ಅವರೊಂದಿಗೆ ಚರ್ಚಿಸಿ, ಸಮಗ್ರ ವರದಿಯನ್ನು ಶೀಘ್ರದಲ್ಲೇ ಆರೋಗ್ಯ ಇಲಾಖೆಯ ಜಂಟಿ ಆಯುಕ್ತರಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಮನವಿ ಸಲ್ಲಿಕೆ: ಇದೇ ವೇಳೆ ಮಡಿಕೇರಿ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಕ್ಕಳ ಸಾಗಾಣಿಕೆ ಆರೋಪ ಎದುರಿಸು ತ್ತಿರುವ ಸರಕಾರಿ ವೈದ್ಯ ದಂಪತಿಯನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಿಗೆ ಮನವಿ ಪತ್ರ ಸಲ್ಲಿಸಿದರು. ಆರೋಪಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳದಿದ್ದಲ್ಲಿ ಆಸ್ಪತ್ರೆ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಸಿದರು. ಜಿಲ್ಲಾಸ್ಪತ್ರೆಯ ವೈದ್ಯರು ಕರ್ತವ್ಯ ಸಮಯದಲ್ಲಿ ಖಾಸಗಿ ಕ್ಲಿನಿಕ್‍ಗಳಲ್ಲಿ ಕೆಲಸ ಮಾಡುತ್ತಾರೆ. ಇಂತಹ ವೈದ್ಯರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬಳಿಕ ಮಾತನಾಡಿದ ಮಡಿಕೇರಿ ರಕ್ಷಣಾ ವೇದಿಕೆ ಸಂಚಾ ಲಕ, ವಕೀಲ ಪವನ್ ಪೆಮ್ಮಯ್ಯ, ಅಮಾನುಷ ಕೃತ್ಯ ಎಸಗಿ ತಲೆ ಮರೆಸಿಕೊಂಡಿರುವ ವೈದ್ಯ ದಂಪತಿ ಕೊಡಗು ಜಿಲ್ಲೆಗೆ ಅವಮಾನ ಮಾಡಿದ್ದಾರೆ. ವೈದ್ಯ ವೃತ್ತಿಗೆ ಕಳಂಕ ತಂದು, ಇದೀಗ ತಲೆ ಮರೆಸಿಕೊಂಡಿರುವ ವೈದ್ಯರು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದು, ಅವರ ವಿರುದ್ದ ಹೋರಾಟ ಮಾಡುತ್ತಿರುವ ಸಂಘಟನೆಗಳು ಮತ್ತು ಪತ್ರಿಕಾ ಮಾಧ್ಯಮ ಗಳಲ್ಲಿ ವರದಿ ಮಾಡುವವರಿಗೆ ಮಾನನಷ್ಟ ಮೊಕದ್ದಮೆ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ಪೊಲೀಸರು ಅವರನ್ನು ಬಂಧಿಸದಿರುವುದು ಸಂಶಯ ಮೂಡಿಸುತ್ತಿದೆ ಎಂದು ಆರೋಪಿಸಿದರು. ಕರ್ನಾಟಕ ಮೆಡಿಕಲ್ ಅಸೋಸಿಯೇ ಷನ್ ಅಧ್ಯಕ್ಷರಿಗೂ ಈ ಬಗ್ಗೆ ಮನವಿ ಮಾಡಿದ ಹಿನೆÀ್ನಲೆ ಯಲ್ಲಿ ವೈದ್ಯ ಡಾ.ನವೀನ್ ಅವರನ್ನು ಕೊಡಗು ಮೆಡಿ ಕಲ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸ ಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಡಿಕೇರಿ ರಕ್ಷಣಾ ವೇದಿಕೆಯ ಪ್ರಮುಖ ರಾದ ಕೊಟ್ಟಕೇರಿಯನ ಅಜಿತ್, ಬಿ.ಎಂ.ಹರೀಶ್, ಉಮೇಶ್, ಪಾಪುರವಿ, ಶ್ರೀನಿವಾಸ್, ಸತ್ಯ ಮತ್ತಿತರರು ಹಾಜರಿದ್ದರು.

Translate »