ಮೈಸೂರು: ಅಲ್ಲಿ ವಿದ್ಯಾರ್ಥಿನಿಯರೆಲ್ಲರೂ ಬಾಣಸಿಗರಾಗಿದ್ದರು. ಪುಸ್ತಕ ಹಿಡಿಯಬೇಕಾದ ಕೈಗಳು ಸೌಟು ಹಿಡಿದು ರುಚಿಕರವಾದ ಅಡುಗೆ ತಯಾರಿಸಿ, ಹಸಿದವರ ನಾಲಿಗೆ ತಣಿಸಿದವು! ಮೈಸೂರು ಮಹಾರಾಣಿ ಕಲಾ ಕಾಲೇಜಿನ ಆವರಣದಲ್ಲಿ ಶುಕ್ರವಾರ ಶೈಕ್ಷ ಣಿಕ ಚಟುವಟಿಕೆಗೆ ವಿರಾಮ ಹಾಕಿ ಸಂತೆ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರೇ ತಯಾರಿಸಿದ ಸಸ್ಯಾಹಾರ, ಮಾಂಸಾಹಾರ, ಸಿಹಿ ತಿನಿಸು, ಪಾನೀಯ ಮತ್ತಿತರ ತಿನಿಸು ಗಳನ್ನು ಮಾರಾಟ ಮಾಡಿದರು. ಕಾಲೇಜು ಆವರಣದಲ್ಲಿ 20 ಮಳಿಗೆಗಳನ್ನು ತೆರೆಯಲಾಗಿತ್ತು. ವಿದ್ಯಾರ್ಥಿನಿಯರೇ ಮಾಡಿದ್ದ ಬಿರಿಯಾನಿ ಸೇವಿಸಲು ವಿದ್ಯಾರ್ಥಿನಿಯರು, ಉಪನ್ಯಾಸಕರು ಮುಗಿಬಿದ್ದರು. ಪಾನಿ ಪುರಿ, ಗೋಬಿಮಂಚೂರಿ,…
ಸಾಮೂಹಿಕ ಅತ್ಯಾಚಾರ ಆರೋಪ: ನಾಲ್ವರ ವಿರುದ್ಧ ಯುವತಿ ಪೊಲೀಸರಲ್ಲಿ ದೂರು ದಾಖಲು
February 9, 2019ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಸ್ನೇಹಿತ ಸೇರಿ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ವರದಿಯಾಗಿದೆ. ಜೆ.ಪಿ.ನಗರ ನಿವಾಸಿಯಾಗಿರುವ 20 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಕಳೆದ ಭಾನುವಾರದಂದು ರಾತ್ರಿ 9.30ರ ಸುಮಾರಿನಲ್ಲಿ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಆರ್ಚ್ ಬಳಿ ಪಾನಿಪೂರಿ ಸೇವಿಸಲು ತೆರಳಿದ್ದರಂತೆ. ತನ್ನನ್ನು ಮನೆಗೆ ಡ್ರಾಪ್ ಮಾಡುವಂತೆ ಸ್ನೇಹಿತ ಚಿರಾಗ್ ಎಂಬಾತ ನಿಗೆ ಮೊಬೈಲ್ ಮೂಲಕ ಕರೆ ಮಾಡಿ ಯುವತಿ ಕೇಳಿದ್ದರು ಎನ್ನಲಾಗಿದೆ. ಕಾರಿನಲ್ಲಿ ಸ್ಥಳಕ್ಕೆ…
1.50 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶ
February 9, 2019ಮೈಸೂರು: ಮೈಸೂರು ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದ್ದ 1.5 ಲಕ್ಷ ರೂ. ಮೌಲ್ಯದ ಮದ್ಯವನ್ನು ಶುಕ್ರ ವಾರ ಅಬಕಾರಿ ಸಿಬ್ಬಂದಿ ನಾಶಪಡಿಸಿದರು. ನಜರ್‍ಬಾದ್‍ನಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಇಂದು ಬೆಳಿಗ್ಗೆ ಈ ಹಿಂದೆ ಮೈಸೂರು ಜಿಲ್ಲೆಯ 16 ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾಗಿದ್ದ 1.5 ಲಕ್ಷ ರೂ. ಮೌಲ್ಯದ, ವಿವಿಧ ಬ್ರ್ಯಾಂಡ್‍ನ 133 ಲೀ. ಮದ್ಯ, 62.250 ಲೀಟರ್ ಬಿಯರ್ ನಾಶಪಡಿಸಲಾಯಿತು. ಕಳೆದ ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ವೇಳೆ ಹಾಗೂ ಕಿರಾಣಿ…
ಸಾಗುವಳಿ ಪತ್ರಕ್ಕಾಗಿ ಆಗ್ರಹಿಸಿ ರೈತರ ಪ್ರತಿಭಟನೆ
February 9, 2019ಮೈಸೂರು: ಬಗರ್‍ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ಸಾಗುವಳಿ ಪತ್ರ ನೀಡಲು ವಿಧಿಸಿರುವ ಷರತ್ತುಗಳನ್ನು ತೆಗೆದು, ಸಾಗುವಳಿ ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಆಶ್ರಯದಲ್ಲಿ ಮೈಸೂರಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಳೆದ 60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಉಳುಮೆ ಮಾಡುತ್ತಾ, ಜೀವನ ನಿರ್ವಹಿ ಸುತ್ತಾ ಬಂದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡದೆ ವಂಚಿಸಲಾಗಿದೆ. ಇದರಿಂದ ಸಾಗುವಳಿ ಪತ್ರ…
ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ: ಬಿಜೆಪಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್?
February 8, 2019ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ರಾಜ ಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ವನ್ನು ಉರುಳಿಸಲು ರಾಜ್ಯ ನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿದ್ದರೂ ಬಿಜೆಪಿ ಹೈ ಕಮಾಂಡ್ ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಆದರೆ ಬುಧವಾರ ಮತ್ತು ಗುರುವಾರ ಅಧಿವೇಶನಕ್ಕೆ ವ್ಹಿಪ್ ಜಾರಿಯಾಗಿದ್ದರೂ ಮಿತ್ರ ಪಕ್ಷದ ಶಾಸಕರು ಗೈರಾದ ಹಿನ್ನೆಲೆ ಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್…
ಇಡಿ ಅಧಿಕಾರಿಗಳಿಂದ ವಾದ್ರಾ ಹೆಚ್ಚಿನ ವಿಚಾರಣೆ
February 8, 2019ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಇಂದು ಸಹ ಜಾರಿ ನಿರ್ದೇಶ ನಾಲಯ ಅಧಿಕಾರಿಗಳು ವಿಚಾರಣೆ ಗೊಳಿಸಿದ್ದಾರೆ. ಇಬ್ಬರು ಉಪ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರನ್ನೊಳಗೊಂಡ ತಂಡ ದಿಂದ ರಾಬರ್ಟ್ ವಾದ್ರಾ ಅವರ ವಿಚಾ ರಣೆ ನಡೆಸಲಾಗಿದೆ ಎಂಬುದು ಇಡಿ ಮೂಲಗಳಿಂದ ತಿಳಿದುಬಂದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ಅವರ ಪತಿ ಆಗಿರುವ ರಾಬರ್ಟ್ ವಾದ್ರಾ ಬುಧವಾರ ಐದೂವರೆ…
ಪ್ರಸಾದದಲ್ಲಿ ವಿಷ ಹಾಕಲು ಉಗ್ರರ ಸ್ಕೆಚ್!
February 8, 2019ಮುಂಬೈ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಸುಳವಾಡಿಯ ಕಿಚ್‍ಗುತ್ತಿ ಮಾರಮ್ಮ ವಿಷ ಪ್ರಸಾದ ದುರಂತದಿಂದ ಪ್ರೇರಣೆ ಪಡೆದ ಐಸಿಸ್ ಉಗ್ರರು, ಅದೇ ರೀತಿ ಸ್ಕೆಚ್ ಹಾಕಿ 40 ಸಾವಿರ ಮಂದಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಉಗ್ರರು ನಡೆಸಿದ್ದ ಈ ಯತ್ನ ವಿಫಲವಾಗಿದೆ. ಅಂದಹಾಗೆ ವಿಷ ಹಾಕಲು ಪ್ಲಾನ್ ಮಾಡಿದ್ದ ಶಂಕಿತ 10 ಐಸಿಸ್ ಉಗ್ರರನ್ನು ಮುಂಬೈನ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಪೊಲೀಸರು ಸೆರೆ ಹಿಡಿದಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ವಿಷ ಪ್ರಸಾದ…
ಇಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ವಿತರಣೆ
February 8, 2019ಮೈಸೂರು: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ 7 ಲಕ್ಷ ಮಕ್ಕ ಳಿಗೆ ಜಂತು ಹುಳು ನಿವಾರಣೆ ಮಾತ್ರೆ ಗಳನ್ನು ವಿತರಣೆ ಮಾಡುವ ಗುರಿ ಹೊಂದ ಲಾಗಿದ್ದು, ಈ ಮಾತ್ರೆಗಳ ಸೇವೆನೆಯಿಂದ ಯಾವುದೇ ಅಡ್ಡ ಪರಿಣಾಮದ ಆತಂಕ ವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ತಿಳಿಸಿದರು. ಮೈಸೂರಿನ ಕುಂಬಾರಕೊಪ್ಪಲಿನ ಉನ್ನ ತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ…
ಮೈಸೂರು, ಚಾ.ನಗರ ಜಿಲ್ಲೆಯ ಶ್ರೀ ಬೀರದೇವರುಗಳ ವೈಭವಯುತ ಮೆರವಣಿಗೆ
February 8, 2019ಮೈಸೂರು: ಶ್ರೀ ಕಾಗಿನೆಲೆ ಶಾಖಾ ಮಠದ ವತಿಯಿಂದ ಮೈಸೂರಿನ ಸಿದ್ದಾರ್ಥನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಶ್ರೀ ಕನಕ ಭವನ’ ಲೋಕಾರ್ಪಣೆ ಅಂಗವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಗಡಿ ದೇವರಾದ ಶ್ರೀ ಬೀರದೇವರುಗಳ ಮೆರ ವಣಿಗೆ ವೈಭವಯುತವಾಗಿ ಗುರುವಾರ ಸಂಜೆ ನೆರವೇರಿತು. ಕಾಗಿನೆಲೆ ಶಾಖಾ ಮಠದ ಪೀಠಾಧ್ಯಕ್ಷ ರಾದ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಹಾಗೂ ಶ್ರೀ ಶಿವಾನಂದಾಪುರಿ ಸ್ವಾಮೀಜಿಯವರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ‘ಗಂಗೆ ಪೂಜೆ’ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲೆಯ…
ಸರ್ಕಾರ ರಂಗಭೂಮಿಗೆ ನೀಡುವ ಹಣ ದುರುಪಯೋಗವಾಗದಂತೆ ಎಚ್ಚರವಹಿಸಬೇಕು
February 8, 2019ಮೈಸೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಂಗಭೂಮಿಗೆ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಆದರೆ, ಆ ಹಣ ಉಪಯೋಗಿಸಿಕೊಂಡ ಹವ್ಯಾಸಿ ರಂಗ ಕಲಾವಿದರು ಎಷ್ಟು ಒಳ್ಳೆಯ ನಾಟಕಗಳನ್ನು ನೀಡಿದ್ದಾರೆ ಎಂಬುದನ್ನು ಇಲಾಖೆ ಪರಿಶೀಲಿಸಬೇಕು. ಜತೆಗೆ ಹಣ ದುರುಪಯೋಗವಾಗದಂತೆ ಎಚ್ಚರ ವಹಿಸಿ ತಲುಪಬೇಕಾದವರಿಗೆ ತಲುಪಿಸಬೇಕು ಎಂದು ಹಿರಿಯ ರಂಗಕರ್ಮಿ ಮೈಮ್ ರಮೇಶ್ ಹೇಳಿದರು. ಕಲಾಮಂದಿರದ ಕಿರುರಂಗಮಂದಿರದಲ್ಲಿ ಮೈಮ್ ರಮೇಶ್ ಅವರಿಗೆ ‘ನಾಟಕ ಅಕಾಡೆಮಿ ಪ್ರಶಸ್ತಿ’ ಬಂದ ಸಲುವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗ ದೊಂದಿಗೆ ಪ್ರತಿಬಿಂಬ ರಂಗತಂಡದ…