Tag: Puttaranga Shetty

ಕ್ಷೇತ್ರದ ಮತದಾರರನ್ನು ನಾನಲ್ಲ, ನನ್ನ ವಂಶವೂ ಮರೆಯೊಲ್ಲ ಕೃತಜ್ಞತಾ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಭಾವನಾತ್ಮಕ ಹೇಳಿಕೆ
ಚಾಮರಾಜನಗರ

ಕ್ಷೇತ್ರದ ಮತದಾರರನ್ನು ನಾನಲ್ಲ, ನನ್ನ ವಂಶವೂ ಮರೆಯೊಲ್ಲ ಕೃತಜ್ಞತಾ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಭಾವನಾತ್ಮಕ ಹೇಳಿಕೆ

June 19, 2018

ಚಾಮರಾಜನಗರ:  ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮತದಾರರನ್ನು ನಾನು ಮಾತ್ರವಲ್ಲ, ನನ್ನ ವಂಶವೂ ಮರೆಯೊದಿಲ್ಲ. ಸದಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕ್ಷೇತ್ರ ಮತ ದಾರರಿಗೆ ಅನಂತ, ಅನಂತ ಕೃತಜ್ಞತೆಗಳು… -ಎನ್ನುತ್ತ ಭಾವನಾತ್ಮಕವಾಗಿ ಮಾತು ಗಳನ್ನು ಆರಂಭಿಸಿದ ಹಿಂದುಳಿದ ವರ್ಗ ಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಕ್ಷೇತ್ರದ ಜನತೆ ಹಾಗೂ ಸಿದ್ದರಾಮಯ್ಯ, ಧ್ರುವನಾರಾಯಣ ಅವರ ಬೆಂಬಲವನ್ನು ಸ್ಮರಿಸಿದರು. ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಚಾಮ ರಾಜನಗರ ಬ್ಲಾಕ್ ಕಾಂಗ್ರೆಸ್ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‍ನಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ…

ರಸ್ತೆ ಕಾಮಗಾರಿ ಶೀಘ್ರ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ
ಚಾಮರಾಜನಗರ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ

June 19, 2018

ಚಾಮರಾಜನಗರ:  ನಗರ ದಲ್ಲಿ ಕೈಗೊಂಡಿರುವ ಎಲ್ಲ ರಸ್ತೆ ಕಾಮ ಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸ ಬೇಕೆಂದು ಹಿಂದುಳದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿಂದು ಚಾಮರಾಜನಗರ ಪಟ್ಟಣ ವ್ಯಾಪ್ತಿಯ ರಸ್ತೆ ಹಾಗೂ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿಯ ವಿಶೇಷ ಅನು ದಾನ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ಹಾದುಹೋಗಿರುವ ಹೆದ್ದಾರಿ ವಿಸ್ತರಣೆ ಹಾಗೂ ಪಟ್ಟಣದ ವಿವಿ ಧೆಡೆ ಪ್ರಗತಿಯಲ್ಲಿರುವ…

ಸಚಿವರಾದ ನಂತರ ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ಇಂದು ಪುಟ್ಟರಂಗಶೆಟ್ಟಿ ಭೇಟಿ
ಚಾಮರಾಜನಗರ

ಸಚಿವರಾದ ನಂತರ ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ಇಂದು ಪುಟ್ಟರಂಗಶೆಟ್ಟಿ ಭೇಟಿ

June 18, 2018

ಸಮಸ್ಯೆಗಳ ಆಗರವಾಗಿರುವ ಚಾ.ನಗರಕ್ಕೆ ಮುಕ್ತಿ ಸಿಕ್ಕೀತೆ? ಚಾಮರಾಜನಗರ: ಚಾಮ ರಾಜನಗರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಶಾಸಕರ ಪೈಕಿ ಪ್ರಥಮ ಬಾರಿಗೆ ಸಚಿವ ಎಂಬ ಕೀರ್ತಿಗೆ ಪಾತ್ರ ರಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಸಿ. ಪುಟ್ಟರಂಗಶೆಟ್ಟಿ ಸಚಿವರಾದ ನಂತರ ಮೊದಲ ಬಾರಿಗೆ ನಾಳೆ(ಜೂ.18) ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಚಾಮರಾಜನಗರ ಗ್ರಾಮಾಂತರ ಹಾಗೂ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಮತದಾರ ರಿಗೆ ಕೃತಜ್ಞತೆ ಹಾಗೂ ಅಭಿ ನಂದನಾ ಸಮಾರಂಭದಲ್ಲಿ ಅವರು ಭಾಗವಹಿಸಲಿ ದ್ದಾರೆ….

ಸಿ.ಪುಟ್ಟರಂಗಶೆಟ್ಟಿ v/s ಎನ್.ಮಹೇಶ್: ಜಿಲ್ಲೆಯ ಉಸ್ತುವಾರಿ ನೊಗ ಯಾರ ಹೆಗಲಿಗೆ
ಚಾಮರಾಜನಗರ

ಸಿ.ಪುಟ್ಟರಂಗಶೆಟ್ಟಿ v/s ಎನ್.ಮಹೇಶ್: ಜಿಲ್ಲೆಯ ಉಸ್ತುವಾರಿ ನೊಗ ಯಾರ ಹೆಗಲಿಗೆ

June 8, 2018

ಚಾಮರಾಜನಗರ:  ಜಿಲ್ಲೆಯ ಇಬ್ಬರು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ದೊರಕಿದೆ. ಈ ಇಬ್ಬರ ಪೈಕಿ ಯಾರಿಗೆ ಜಿಲ್ಲಾ ಉಸ್ತುವಾರಿ ಹೊಣೆ ದೊರೆಯಲಿದೆ ಎಂಬ ಚರ್ಚೆ ಜಿಲ್ಲೆ ಯಾದ್ಯಂತ ನಡೆಯುತ್ತಿದೆ. ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಿ ಕೊಳ್ಳಲು ಈ ಇಬ್ಬರು ಸಚಿವರು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಯಾರ ಹೆಗಲಿಗೆ ಜಿಲ್ಲೆಯ ಉಸ್ತು ವಾರಿ ನೊಗ ಬೀಳಲಿದೆ ಎಂಬುದು ರಾಜ ಕೀಯ ಹಾಗೂ ಸಾರ್ವಜನಿಕ ವಲಯ ದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜನಗರ…

ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಡಬಲ್ ಧಮಾಕ: ಚಾ.ನಗರ ಕ್ಷೇತ್ರಕ್ಕೆ ಮೊದಲ ಸಚಿವ ಪಟ್ಟ, ಕೊಳ್ಳೇಗಾಲಕ್ಕೆ ಎರಡನೇ ಸಚಿವ ಸ್ಥಾನ
ಚಾಮರಾಜನಗರ

ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಡಬಲ್ ಧಮಾಕ: ಚಾ.ನಗರ ಕ್ಷೇತ್ರಕ್ಕೆ ಮೊದಲ ಸಚಿವ ಪಟ್ಟ, ಕೊಳ್ಳೇಗಾಲಕ್ಕೆ ಎರಡನೇ ಸಚಿವ ಸ್ಥಾನ

June 7, 2018

ಚಾಮರಾಜನಗರ:  ಚಾಮರಾಜ ನಗರ ಜಿಲ್ಲೆಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆತಿದೆ. ಚಾಮರಾಜನಗರ ಕ್ಷೇತ್ರದಿಂದ ಮೂರನೇ ಬಾರಿಗೆ ಹ್ಯಾಟ್ರಿಕ್ ಜಯ ಸಾಧಿಸಿದ್ದ ಕಾಂಗ್ರೆ ಸ್‍ನ ಸಿ.ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇ ಗಾಲ ಮೀಸಲು ಕ್ಷೇತ್ರದಿಂದ ಇದೇ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದ ಬಿಎಸ್‍ಪಿ-ಜೆಡಿಎಸ್ ಮೈತ್ರಿಯ ಎನ್.ಮಹೇಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಇತಿಹಾಸ ದಲ್ಲೇ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ರಾಗುವ ಯೋಗ ಕೂಡಿ ಬಂದಿರುವುದು ಇದೇ ಮೊದಲು. ಇದಲ್ಲದೇ ಚಾಮರಾಜ…

ಪುಟ್ಟರಂಗಶೆಟ್ಟಿ ಪರ ಸಂಸದ ಧ್ರುವನಾರಾಯಣ್ ಮತ ಯಾಚನೆ
ಚಾಮರಾಜನಗರ

ಪುಟ್ಟರಂಗಶೆಟ್ಟಿ ಪರ ಸಂಸದ ಧ್ರುವನಾರಾಯಣ್ ಮತ ಯಾಚನೆ

April 30, 2018

ಚಾಮರಾಜನಗರ: ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಶಕ ಸಿ.ಪುಟ್ಟರಂಗಶೆಟ್ಟಿ ಪರವಾಗಿ ಸಂಸದ ಆರ್.ಧ್ರುವನಾರಾಯಣ್ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಭಾನುವಾರ ಮತ ಯಾಚಿಸಿದರು. ತಾಲೂಕಿನ ಮಂಗಲದಲ್ಲಿ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಜತೆಗೂಡಿ ಧ್ರುವನಾರಾಯಣ್ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಮತ ಯಾಚಿಸಿದರು. ನಂತರ ಹರದನಹಳ್ಳಿ, ವೆಂಕಟಯ್ಯನಛತ್ರ, ಕೋಡಿಉಗನೆ, ಬಿಸಿಲವಾಡಿ, ಕೋಳಿಪಾಳ್ಯ, ಚಿಕ್ಕಹೊಳೆ ಚೆಕ್‍ಪೋಸ್ಟ್, ಸಿದ್ದಯ್ಯನಪುರ, ದೊಡ್ಡಮೋಳೆ, ಚಂದಕವಾಡಿ, ಹೆಬ್ಬಸೂರು, ನಾಗವಳ್ಳಿ, ಜ್ಯೋತಿಗೌಡನಪುರ, ಕಾಗಲವಾಡಿ, ಆಲೂರು ಮತ್ತು ದೊಡ್ಡರಾಯಪೇಟೆ ಗ್ರಾಮಗಳಲ್ಲಿ ಧ್ರುವನಾರಾಯಣ್ ಮನೆ ಮನೆಗೆ ತೆರಳಿ ಕಾಂಗ್ರೆಸ್…

ಗ್ರಾಮಗಳಲ್ಲಿ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಮತ ಬೇಟೆ
ಚಾಮರಾಜನಗರ

ಗ್ರಾಮಗಳಲ್ಲಿ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಮತ ಬೇಟೆ

April 26, 2018

ಚಾಮರಾಜನಗರ: ವಿಧಾನಸಭಾ ಕ್ಷೇತ್ರದ ಚಂದಕವಾಡಿ ಹಾಗೂ ಹೆಬ್ಬಸೂರು ಗ್ರಾಪಂ ವ್ಯಾಪ್ತಿಗಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಬಿರುಸಿನ ಮತಯಾಚಿಸಿದರು. ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲು ಹೋದ ಸಂದರ್ಭದಲ್ಲಿ ಹಾರ ತುರಾಯಿಗಳು, ಬೆಲ್ಲದಾರತಿ ಮಾಡಿ ಅದ್ದೂರಿ ಸ್ವಾಗತ ಕೋರಿ ನಾವು ಈ ಬಾರಿಯೂ ನಿಮ್ಮ ಜಯಗಳಿಸಲು ಶ್ರಮಿಸುತ್ತೇವೆಂದು ಭರವಸೆ ನೀಡುವ ದೃಶ್ಯಗಳು ಸರ್ವೇ ಸಾಮಾನ್ಯ ವಾಗಿ ಕಾಣಬರುತ್ತಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮೂರನೇ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಕಳೆದ ಎರಡು…

1 2
Translate »