Tag: shravanabelagola

ಜೂ.24ರಿಂದ ಶ್ರವಣಬೆಳಗೊಳದಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನ
ಹಾಸನ

ಜೂ.24ರಿಂದ ಶ್ರವಣಬೆಳಗೊಳದಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನ

June 22, 2018

ಹಾಸನ: ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಜೂ. 24, 25 ಹಾಗೂ 26ರಂದು ಚಾವುಂಡರಾಯ ಸಭಾಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹಾಗೂ ಡಾ.ಷ.ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಜೂ. 24 ರಂದು ಬೆಳಿಗ್ಗೆ 9.30ರಿಂದ 12.30ರವರೆಗೆ ವಿಶೇಷ ಆಹ್ವಾನಿತರಿಂದ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೇರವೇರಲಿದೆ. ಸಂಜೆ…

ಜೈನಕಾಶಿಯಲ್ಲಿ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವ
ಹಾಸನ

ಜೈನಕಾಶಿಯಲ್ಲಿ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವ

June 18, 2018

ಶ್ರವಣಬೆಳಗೊಳ: ಶಾಸ್ತ್ರಗಳ ಪೂಜೆ ಎಂದರೆ ಗ್ರಂಥಗಳನ್ನು ಸ್ವಅಧ್ಯಯ ಮಾಡುವುದು ಹಾಗೂ ಅದರಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳು ವುದು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಜೈನಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಶ್ರುತ ಪಂಚಮಿ ಮಹೋತ್ಸವ-18ರ ಪ್ರಯುಕ್ತ ನಡೆದ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವದಲ್ಲಿ ಮಾತನಾಡಿದ ಅವರು, ತೀರ್ಥಂಕರರನ್ನು ಪೂಜಿಸುವುದಷ್ಟೇ ಅಲ್ಲದೆ, ಅವರ ಬೋಧನೆಗಳನ್ನು ಅಧ್ಯಯನ ಮಾಡಬೇಕು. ಇದುವರೆಗೂ ಪ್ರಾಕೃತ ಭಾಷೆಯಲ್ಲಿದ್ದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲಾ ಆಗಮ ಗ್ರಂಥಗಳಿಗೆ…

ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಹಾಸನಕ್ಕೆ ವಿಸ್ತರಣೆ
ಹಾಸನ

ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಹಾಸನಕ್ಕೆ ವಿಸ್ತರಣೆ

June 15, 2018

ಶ್ರವಣಬೆಳಗೊಳ: ಸೊಲ್ಲಾಪುರದಿಂದ ಯಶವಂತಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಸಂಚರವನ್ನು ಹಾಸನದವರೆಗೆ ವಿಸ್ತರಿಸಲಾಗಿದ್ದು, ಈ ರೈಲಿಗೆ ಶ್ರವಣಬೆಳಗೊಳದ ರೈಲ್ವೆ ನಿಲ್ದಾಣದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪೂರ್ಣಕುಂಭ ಸ್ವಾಗತ ಕೋರಿದರು. ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭಗವಾನ್ ಬಾಹುಬಲಿ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರಿಶ್ರಮದಿಂದ ಮತ್ತೊಂದು ರೈಲು ಸಂಚಾರಕ್ಕೆ ಚಾಲನೆ ದೊರೆತಿದ್ದು, ಈ ಭಾಗದ ಪ್ರವಾಸೋ ದ್ಯಮ ಬೆಳೆಯಲು ಸಾಧ್ಯವಾಗಲಿದೆ ಎಂದರು. ಮಂತ್ರಾಲಯ, ರಾಯಚೂರು, ಕಲ್ಬುರ್ಗಿ,…

ಹಂತ ಹಂತವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಶಾಸಕ ಬಾಲಕೃಷ್ಣ
ಹಾಸನ

ಹಂತ ಹಂತವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಶಾಸಕ ಬಾಲಕೃಷ್ಣ

June 14, 2018

ಶ್ರವಣಬೆಳಗೊಳ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ರಸ್ತೆಗಳು ಪ್ರಮುಖ ಪಾತ್ರ ವಹಿಸಲಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸ ಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.ಹೋಬಳಿಯ ಚಲ್ಯಾ ಗ್ರಾಮದಲ್ಲಿ ಎರಡನೇ ಬಾರಿಗೆ ಭಾರೀ ಬಹುಮತಗಳ ಅಂತರದಿಂದ ಆಯ್ಕೆಯಾದ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಲ್ಯಾ ಕೊರಕಲ್ಲಪ್ಪ ಮಠದ ರಸ್ತೆ ಯನ್ನು ಅಭಿವೃದ್ಧಿಪಡಿಸುವುದು. ಅಲ್ಲದೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ಗ್ರಾಮದ ಶಾಲಾ,…

ಅಹಿಂಸೆಯ ಜನ್ಮಸ್ಥಳ ಶ್ರವಣಬೆಳಗೊಳ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅಭಿಮತ
ಹಾಸನ

ಅಹಿಂಸೆಯ ಜನ್ಮಸ್ಥಳ ಶ್ರವಣಬೆಳಗೊಳ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅಭಿಮತ

June 8, 2018

ಶ್ರವಣಬೆಳಗೊಳ:  ‘ಜೈನಕಾಶಿ ಶ್ರವಣಬೆಳಗೊಳದಲ್ಲಿ ಸುಮಾರು 600ಕ್ಕೂ ಹೆಚ್ಚು ಶಾಸನಗಳಿದ್ದು ಅತಿ ಹೆಚ್ಚು ಶಾಸನ ಗಳನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶ್ರವಣಬೆಳಗೊಳ ವನ್ನು ಅಹಿಂಸೆಯ ಜನ್ಮಸ್ಥಳ ಎಂದರೆ ತಪ್ಪಾಗ ಲಾರದು’ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು. ಶ್ರವಣಬೆಳಗೊಳದ ಚಾಮುಂಡರಾಯ ಸಭಾಮಂಟಪದಲ್ಲಿ ಗುರುವಾರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ವರ್ಷಿಯಾ ದಿಗಂಬರ ಜೈನ ಶಾಸ್ತ್ರೀಯ ಪರಿ ಷತ್ತು ವಾರ್ಷಿಕ ಅಧಿವೇಶನ ಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದರು….

ಅಖಿಲ ಕರ್ನಾಟಕ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಜೈನಕಾಶಿಯಲ್ಲಿ ಜೂ.24ರಿಂದ ಮೂರು ದಿನ ಸಮ್ಮೇಳನ
ಹಾಸನ

ಅಖಿಲ ಕರ್ನಾಟಕ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಜೈನಕಾಶಿಯಲ್ಲಿ ಜೂ.24ರಿಂದ ಮೂರು ದಿನ ಸಮ್ಮೇಳನ

June 7, 2018

ಹಾಸನ: ಶ್ರವಣಬೆಳಗೊಳದಲ್ಲಿ ಜೂ. 24ರಿಂದ 26ರವರೆಗೆ ನಡೆಯ ಲಿರುವ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಕೋರಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರೆಯಲಾಗಿದ್ದ ಸಮ್ಮೇಳನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತ ನಾಡಿದ ಅವರು, ಶ್ರವಣಬೆಳಗೊಳದಲ್ಲಿ 3 ದಿನಗಳು ನಡೆಯಲಿರುವ ಹಳೆಗನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ನೂರಾರು ವಿದ್ವಾಂಸರು ಆಗಮಿಸುತ್ತಾರೆ. ಕಾರ್ಯಕ್ರಮದಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಹಳೆಗನ್ನಡದ ಬಗ್ಗೆ…

ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಸುತ್ತೂರು ಶ್ರೀ ಭಗವಾನ್ ಬಾಹುಬಲಿಗೆ ಅಭಿಷೇಕ
ಹಾಸನ

ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಸುತ್ತೂರು ಶ್ರೀ ಭಗವಾನ್ ಬಾಹುಬಲಿಗೆ ಅಭಿಷೇಕ

May 28, 2018

ಶ್ರವಣಬೆಳಗೊಳ:  ಜೈನಕಾಶಿ ಶ್ರವಣ ಬೆಳಗೊಳದಲ್ಲಿ ಇಂದು ನಡೆದ ವಿಶೇಷ ಮಹಾಮಸ್ತಕಾ ಭಿಷೇಕ ಮಹೋತ್ಸವದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀವೀರ ಸಿಂಹಾಸನ ಮಹಾ ಸಂಸ್ಥಾನ ಪೀಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಪಾಲ್ಗೊಂಡು ಭಗವಾನ್ ಬಾಹುಬಲಿ ಸ್ವಾಮಿಗೆ ಅಭಿಷೇಕ ನೇರವೇರಿಸಿದರು. ವಿಂಧ್ಯಗಿರಿ ಬೆಟ್ಟದ ತಪ್ಪಲಿನಲ್ಲಿರುವ ಸ್ವಾಗತ ಕಚೇರಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದ ಸ್ವಾಮೀಜಿಯವರಿಗೆ ಪಾದಪೂಜೆ ಮಾಡುವ ಮೂಲಕ ಸ್ವಾಗತಿಸಿ, ನೆನಪಿನ ಕಾಣ ಕೆಗಳನ್ನು ನೀಡಿ ಗೌರವಿಸಲಾಯಿತು. ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಡೋಲಿಯ ಮೂಲಕ…

ಶೋಷಿತರ ಪರವಾದ ಧ್ವನಿ ದಲಿತ ಸಾಹಿತ್ಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಮತ
ಹಾಸನ

ಶೋಷಿತರ ಪರವಾದ ಧ್ವನಿ ದಲಿತ ಸಾಹಿತ್ಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಮತ

May 25, 2018

ಶ್ರವಣಬೆಳಗೊಳ: ‘ದಲಿತ ಸಾಹಿತ್ಯ ಎನ್ನುವುದು ಮೇಲ್ವರ್ಗದವರನ್ನು ದೂಷಣೆ ಮಾಡುವುದಲ್ಲ. ದಲಿತರನ್ನು ದೂಷಣೆ ಮಾಡುವ ಮನಸ್ಸುಗಳನ್ನು ಬದಲಾ ಯಿಸುವ ಮಾರ್ಗ’ ಎಂದು 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಹೇಳಿದರು. ಜೈನಕಾಶಿ ಶ್ರವಣಬೆಳಗೊಳದ ಕಾನಜಿ ಯಾತ್ರಿಕಾಶ್ರಮದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್‍ನಿಂದ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತರ ಮನಸ್ಸಿನಲ್ಲಿ ರುವ ನೋವನ್ನು ಸಮಾಜಕ್ಕೆ ತಿಳಿಸುವ ಮಾರ್ಗವೇ ದಲಿತ ಸಾಹಿತ್ಯವಾಗಿದ್ದು, ಇದು…

1 2
Translate »