ಜೈನಕಾಶಿಯಲ್ಲಿ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವ
ಹಾಸನ

ಜೈನಕಾಶಿಯಲ್ಲಿ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವ

June 18, 2018

ಶ್ರವಣಬೆಳಗೊಳ: ಶಾಸ್ತ್ರಗಳ ಪೂಜೆ ಎಂದರೆ ಗ್ರಂಥಗಳನ್ನು ಸ್ವಅಧ್ಯಯ ಮಾಡುವುದು ಹಾಗೂ ಅದರಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳು ವುದು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಶ್ರುತ ಪಂಚಮಿ ಮಹೋತ್ಸವ-18ರ ಪ್ರಯುಕ್ತ ನಡೆದ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವದಲ್ಲಿ ಮಾತನಾಡಿದ ಅವರು, ತೀರ್ಥಂಕರರನ್ನು ಪೂಜಿಸುವುದಷ್ಟೇ ಅಲ್ಲದೆ, ಅವರ ಬೋಧನೆಗಳನ್ನು ಅಧ್ಯಯನ ಮಾಡಬೇಕು. ಇದುವರೆಗೂ ಪ್ರಾಕೃತ ಭಾಷೆಯಲ್ಲಿದ್ದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲಾ ಆಗಮ ಗ್ರಂಥಗಳಿಗೆ ಪೂಜೆ ಸಲ್ಲಿಸಲಾಗಿದೆ ಎಂದ ಶ್ರೀಗಳು, ಪ್ರಾಕೃತ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ವಿದ್ವಾಂಸ ರಿಗೆ ಧನ್ಯವಾದ ಸಮರ್ಪಿಸಿದರು.

ಇದಕ್ಕೂ ಮುನ್ನ ಧವಲಾ, ಜಯ ಧವಲಾ ಹಾಗೂ ಮಹಾಧವಲಗಳ 40 ಗ್ರಂಥಗಳನ್ನು ಪಲ್ಲಕ್ಕಿಗಳಲ್ಲಿರಿಸಿ ಮೈಸೂರು ಬ್ಯಾಂಡ್, ಚಿಟ್ಟಮೇಳ, ನಗಾರಿ, ಪಂಚ ರಂಗಿ ಧ್ವಜಗಳೊಂದಿಗೆ ಶ್ರೀಮಠದಿಂದ ಹೊರಟ ಮೆರವಣಿಗೆ ಭಂಡಾರ ಬಸದಿ, ವಿಂಧ್ಯಗಿರಿ ಮಹಾದ್ವಾರ, ಬೆಂಗಳೂರು ರಸ್ತೆ, ಮಂಗಾಯಿ ಬಸದಿಯ ನಂತರ ಚಾವುಂಡ ರಾಯ ಸಭಾಮಂಟಪಕ್ಕೆ ಆಗಮಿಸಿತು. ನಂತರ ಚತುರ್ಮುಖ ಜಿನಬಿಂಬ, ಜಿನವಾಣ ಹಾಗೂ ಧವಲಾ, ಜಯಧವಲಾ ಹಾಗೂ ಮಹಾಧವಲಗಳ 40 ಗ್ರಂಥಗಳನ್ನು ವೇದಿಕೆಯ ಮೇಲೆ ಪ್ರತಿಷ್ಠಾಪಿಸಿ ಅಷ್ಟಾವ ಧಾನ ಸಹಿತ ಶ್ರುತಪೂಜೆ ನೇರವೇರಿ ಸಲಾಯಿತು. ರಾಷ್ಟ್ರದ ವಿವಿಧ ಮೂಲೆ ಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ವಿದ್ವಾಂಸರು ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದರು. ಅವರಿಗೆ ಶ್ರೀ ಮಠದ ವತಿ ಯಿಂದ ಸನ್ಮಾನಿಸಲಾಯಿತು.

ನಂತರ ಪ್ರಸಿದ್ಧ ಹಾಸ್ಯ ಭಾಷಣಕಾರ ರಾದ ಸುಧಾ ಬರಗೂರು ಮಾತನಾಡಿದರು. ಸರ್ವೇಶ್ ಜೈನ್ ಮತ್ತು ಸೌಮ್ಯ ಜೈನ್ ದಂಪತಿಗಳಿಂದ ಭಕ್ತಿಗೀತೆ, ಅಂಬಾಳೆ ರಾಜೇಶ್ವರಿ ನೇತೃತ್ವದ ಹಾಸನದ ಭಾರ ತೀಯ ಸಾಂಸ್ಕøತಿಕ ನೃತ್ಯ ತಂಡದಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾ ರಾಜರು ಮತ್ತು ಸಂಘಸ್ಥ ತ್ಯಾಗಿಗಳು, ಆರ್ಯಿಕಾ ಮಾತಾಜಿಯವರು, ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ವಾಂಸರು ಶ್ರಾವಕ ಶ್ರಾವಕಿಯರು ಹಾಜರಿದ್ದರು.

Translate »