ಶೋಷಿತರ ಪರವಾದ ಧ್ವನಿ ದಲಿತ ಸಾಹಿತ್ಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಮತ
ಹಾಸನ

ಶೋಷಿತರ ಪರವಾದ ಧ್ವನಿ ದಲಿತ ಸಾಹಿತ್ಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಮತ

May 25, 2018

ಶ್ರವಣಬೆಳಗೊಳ: ‘ದಲಿತ ಸಾಹಿತ್ಯ ಎನ್ನುವುದು ಮೇಲ್ವರ್ಗದವರನ್ನು ದೂಷಣೆ ಮಾಡುವುದಲ್ಲ. ದಲಿತರನ್ನು ದೂಷಣೆ ಮಾಡುವ ಮನಸ್ಸುಗಳನ್ನು ಬದಲಾ ಯಿಸುವ ಮಾರ್ಗ’ ಎಂದು 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಹೇಳಿದರು.

ಜೈನಕಾಶಿ ಶ್ರವಣಬೆಳಗೊಳದ ಕಾನಜಿ ಯಾತ್ರಿಕಾಶ್ರಮದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್‍ನಿಂದ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತರ ಮನಸ್ಸಿನಲ್ಲಿ ರುವ ನೋವನ್ನು ಸಮಾಜಕ್ಕೆ ತಿಳಿಸುವ ಮಾರ್ಗವೇ ದಲಿತ ಸಾಹಿತ್ಯವಾಗಿದ್ದು, ಇದು ದಲಿತರಿಗೆ ಮಾತ್ರ ಸೀಮಿತವಾಗ ಬಾರದು. ಸಮಾಜದಲ್ಲಿ ಶೋಷಣೆಗೊಳ ಲ್ಪಟ್ಟವರ ಪರವಾಗಿ ಧ್ವನಿ ಎತ್ತುವ ಸಾಹಿತ್ಯ ವಾಗಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತಿನ ಅಧ್ಯಕ್ಷ ಡಾ.ಮನುಬಳಿಗಾರ್ ಅವರು ಪ್ರತಿವರ್ಷ ಉತ್ತಮ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕೃತಿ ಆಯ್ಕೆಯಲ್ಲಿ ರಾಜಿ ಯಾಗದೇ ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಹಲವು ವಿಚಾರದಲ್ಲಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಡಾ.ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಓದಿದವರಿಗೆ ಸಹಾಯ ಮಾಡಬೇಕೆಂಬ ಮನೋಭಾವನೆ ಬೆಳೆಯುತ್ತದೆ. ಅವರು ಕವಿತೆಯಲ್ಲಿ ನೋವುಂಡವರ ನೋವನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿ ದರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಚಾರುಕೀರ್ತಿ ಎನ್ನುವುದು ವ್ಯಕ್ತಿ ಯಲ್ಲ ಹೊಯ್ಸಳ ಸಾಮ್ರಾಜ್ಯಕ್ಕೆ ಎದುರಾದ ವಿಪತ್ತುಗಳನ್ನು ನಿವಾರಿಸಲು ಹೊಯ್ಸಳದ ಮಹಾರಾಜರು ಶ್ರೀಕ್ಷೇತ್ರದ ಸ್ವಾಮಿಗಳಿಗೆ ನೀಡಿದ ಪ್ರಶಸ್ತಿ. ಇಂತಹ ಪೀಠದಿಂದ ಪ್ರಶಸ್ತಿ ನೀಡಲಾಗಿದೆ ಎಂದರು.

ದತ್ತಿ ನಿಧಿ ನೀಡಿ ಅದರಿಂದ ಪ್ರತಿವರ್ಷ ಲೇಖಕರನ್ನು ಗೌರವಿಸಬೇಕು ಎನ್ನುವುದು ತುಂಬಾ ವಿರಳವಾದ ಮಾತು. ಕನ್ನಡ ಸಾಹಿತ್ಯ ದಲ್ಲಿ ಅದರಲ್ಲೂ ವಿಶೇಷವಾಗಿ ದಲಿತ ಸಾಹಿತ್ಯ ದಲ್ಲಿ ಖ್ಯಾತಿ ಪಡೆದ ಡಾ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು. ಈ ವೇಳೆ ಸಾಹಿತಿಗಳಾದ ಡಾ.ಟಿ. ಯಲ್ಲಪ್ಪ, ಡಾ.ಚಿನ್ನ ಸ್ವಾಮಿ ಸೋಸಲೆ ಅವರನ್ನು ಸನ್ಮಾನಿಸಲಾಯಿತು.

Translate »