ಆಟೋ ಪಲ್ಟಿ: ಪ್ರಯಾಣಿಕ ಸಾವು
ಹಾಸನ

ಆಟೋ ಪಲ್ಟಿ: ಪ್ರಯಾಣಿಕ ಸಾವು

May 25, 2018

ಹಾಸನ:  ಆಟೋ ಪಲ್ಟಿಯಾಗಿ ಪ್ರಯಾಣಿಕನೊಬ್ಬ ಸಾವಿಗೀಡಾಗಿರುವ ಘಟನೆ ಹಾಸನ-ಅರಕಲಗೂಡು ರಸ್ತೆಯ ಫಾರಂ ಹೌಸ್ ಸಮೀಪದ ಕಬ್ಬಿನಹಳ್ಳಿ ಬಾರೆ ಹತ್ತಿರ ಮಂಗಳವಾರ ನಡೆದಿದೆ.

ತಾಲೂಕಿನ ಕಸಬಾ ಹೋಬಳಿಯ ಅಗಿಲೆ ಗ್ರಾಮದ ನಿವಾಸಿ ಕರಿಗೌಡ(45) ಮೃತಪಟ್ಟ ವ್ಯಕ್ತಿ. ಹಾಸನದಿಂದ ಅಗಿಲೆ ಗ್ರಾಮಕ್ಕೆ ಆಟೋದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಪರಿಣಾಮ ಆಟೋದಲ್ಲಿ ಪ್ರಯಾಣ ಸುತ್ತಿದ್ದ ಕರಿಗೌಡ ಅವರಿಗೆ ತೀವ್ರವಾದ ಪೆಟ್ಟಾಗಿದೆ. ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕರಿಗೌಡರ ಪತ್ನಿ ಪಾರ್ವತಿ ಅವರು ಹಾಸನ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »