ನಿಫಾ: ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ
ಹಾಸನ

ನಿಫಾ: ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ

May 25, 2018

ಹಾಸನ: ದಕ್ಷಿಣ ರಾಜ್ಯಗಳಲ್ಲಿ ಆತಂಕ ಮೂಡಿಸಿ ರುವ ಮಾರಣಾಂತಿಕ ನಿಫಾ ವೈರಸ್ ಸೋಂಕು ಹರಡದಂತೆ ಎಲ್ಲರೂ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಿಫಾ ಸೋಂಕು ನಿಯಂತ್ರಣ ಕುರಿತು ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಿಫಾ ವೈರಾಣು ಅತ್ಯಂತ ಅಪಾಯಕಾರಿ ಎಂದು ಈಗಾಗಲೇ ದೃಢಪಟ್ಟಿದೆ. ಕೇರಳ ರಾಜ್ಯದಿಂದ ಇದು ಪ್ರಾರಂಭವಾಗಿದ್ದು ಈಗಾಗಲೇ 11 ಮಂದಿ ಮೃತಪಟ್ಟಿದ್ದಾರೆ. 19 ಜನರು ಚಿಕಿತ್ಸೆ ಪಡೆಯು ತ್ತಿದ್ದಾರೆ. ಈ ವೈರಾಣು ಮಂಗಳೂರು ತಲುಪಿದೆ. ಹಾಗಾಗಿ, ಹಾಸನ ಜಿಲ್ಲೆಯಲ್ಲಿಯೂ ಇದರ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಜತೆಗೆ, ಸೋಂಕಿನ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ನಿಫಾ ವೈರಾಣು ಖಾಯಿಲೆಗೆ ಒಳಗಾದ ರೋಗಿಗಳ ಸಂಪರ್ಕಕ್ಕೆ ಬಂದವರಿಗೂ ಈ ವೈರಸ್ ಹರಡಿರುವುದು ಬಾವಲಿ ಹಾಗೂ ಇತರ ಸೋಂಕಿತ ಹಕ್ಕಿ, ಪ್ರಾಣ ಗಳ ಮಲ, ಮೂತ್ರ, ಜೊಲ್ಲುಗಳ ಮೂಲಕ ಹಾಗೂ ಅವುಗಳ ಸಂಪರ್ಕಕ್ಕೆ ಬಂದ ನೀರಿನ ಮೂಲಕ ಇದು ಹರಡುತ್ತದೆ. ಹಾಗಾಗಿ, ಈ ಬಗ್ಗೆ ಮುಂಜಾಗ್ರತೆವಹಿಸಬೇಕು. ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಆರೋಗ್ಯ ಸುರಕ್ಷತಾ ಸಾಧನೆಗಳನ್ನು ಬಳಸಬೇಕು ಎಂದು ಸೂಚಿಸಿದರು.

ಪಶು ಸಾಕಾಣ ಕೆದಾರರು ಎಚ್ಚರ ವಹಿಸಿ: ಹಂದಿ ಹಾಗೂ ಇತರ ಪಶು ಸಾಕಾಣ ಕೆ ಮಾಡುವವರು ಹಾಗೂ ಅದರೊಂದಿಗೆ ಹೆಚ್ಚಿನ ಸಂಪರ್ಕ ವಹಿಸುವವರು ಮುಂಜಾಗ್ರತೆಯಾಗಿ ಸುರಕ್ಷತಾ ಕ್ರಮಕೈಗೊಳ್ಳಿ ಎಂದು ತಿಳಿಸಿದರು.

ಆತಂಕ ಬೇಡ ಮುಂಜಾಗ್ರತೆ ಇರಲಿ: ನಿಫಾ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಅಗತ್ಯ ಮುಂಜಾಗ್ರತೆ ಅಗತ್ಯವಿದೆ. ಹಕ್ಕಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬೇಡಿ. ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ ಗೊಳಪಡಿಸಿ ಎಂದು ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಅವರು ನಿಫಾ ವೈರಸ್ ಸೋಂಕು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಜಿ.ಜಗದೀಶ್ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಂಕರ್, ನಗರಸಭೆ ಪೌರಾಯುಕ್ತ ಪರಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಾಲೂಕುಗಳ ವೈದ್ಯಾಧಿಕಾರಿ ಗಳು, ತೋಟಗಾರಿಕೆ, ಅಬಕಾರಿ ಇಲಾಖೆಗಳ ಅಧಿಕಾರಿಗಳು, ಮತ್ತಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »