ಅಹಿಂಸೆಯ ಜನ್ಮಸ್ಥಳ ಶ್ರವಣಬೆಳಗೊಳ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅಭಿಮತ
ಹಾಸನ

ಅಹಿಂಸೆಯ ಜನ್ಮಸ್ಥಳ ಶ್ರವಣಬೆಳಗೊಳ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅಭಿಮತ

June 8, 2018

ಶ್ರವಣಬೆಳಗೊಳ:  ‘ಜೈನಕಾಶಿ ಶ್ರವಣಬೆಳಗೊಳದಲ್ಲಿ ಸುಮಾರು 600ಕ್ಕೂ ಹೆಚ್ಚು ಶಾಸನಗಳಿದ್ದು ಅತಿ ಹೆಚ್ಚು ಶಾಸನ ಗಳನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶ್ರವಣಬೆಳಗೊಳ ವನ್ನು ಅಹಿಂಸೆಯ ಜನ್ಮಸ್ಥಳ ಎಂದರೆ ತಪ್ಪಾಗ ಲಾರದು’ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.

ಶ್ರವಣಬೆಳಗೊಳದ ಚಾಮುಂಡರಾಯ ಸಭಾಮಂಟಪದಲ್ಲಿ ಗುರುವಾರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ವರ್ಷಿಯಾ ದಿಗಂಬರ ಜೈನ ಶಾಸ್ತ್ರೀಯ ಪರಿ ಷತ್ತು ವಾರ್ಷಿಕ ಅಧಿವೇಶನ ಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದರು. ಶಿಲಾ ಶಾಸನಗಳಿಂದ ಆಯಾ ಕ್ಷೇತ್ರದ ಇತಿಹಾಸದ ವೈಭವ ತಿಳಿಯುತ್ತದೆ. ಹಾಗೆಯೇ ಸಾಹಿತ್ಯ ಸಮ್ಮೇಳನಗಳ ಆಯೋಜನೆಯಿಂದ ಸಾಹಿತ್ಯದ ಬೆಳವಣ ಗೆಯಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪ್ರಾಕೃತ, ವಿದ್ವತ್ ಹಾಗೂ ಮುಂತಾದ ಸಮ್ಮೇಳನಗಳನ್ನು ಆಯೋಜಿಸಿ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಲಾಗಿದೆ ಎಂದು ತಿಳಿಸಿದರು.

ಆರ್ಯಿಕಾ ಗಣನಿ ಜಿನದೇವಿ ಮಾತಾಜಿ ಮಾತನಾಡಿ, ಸ್ವಧ್ಯಾಯವನ್ನು ನಿರಂತರ ಮಾಡುವುದರಿಂದ ಚಿತ್ತದ ಶುದ್ದಿಯಾ ಗುತ್ತದೆ. ಇದರಲ್ಲಿ 5 ಪ್ರಕಾರಗಳಿದ್ದು ವಾಚನ ಎಂದರೆ ಓದುವುದು, ಪ್ರಚ್ಛ ಎಂದರೆ ಕೇಳುವುದು ಪ್ರಮುಖವಾಗಿದ್ದು, ಓದಿದ ಮೇಲೆ ಅರ್ಥವಾಗದಿದ್ದರೆ ಗುರುವಿನ ಹತ್ತಿರ ಕೇಳಿ ತಿಳಿದುಕೊಳ್ಳುವ ಉದ್ದೇಶದಿಂದ ಪ್ರಶ್ನೆ ಕೇಳಬೇಕು. ಪರೀಕ್ಷೆ ದೃಷ್ಟಿಯಿಂದ ಕೇಳಿ ದರೆ ಅದು ಆತ್ಮ ವಂಚನೆ ಮಾಡಿದಂತೆ ಎಂದರು. ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.

ಇದಕ್ಕೂ ಮುನ್ನ ದೇಶದ ವಿವಿಧ ಭಾಗ ಗಳಿಂದ ಆಗಮಿಸಿದ ವಿದ್ವಾಂಸರು ವಿಂಧ್ಯಗಿರಿ ಬೆಟ್ಟವನ್ನೇರಿ ಭಗವಾನ್ ಬಾಹುಬಲಿ ಸ್ವಾಮಿಗೆ ಅಭಿಷೇಕ ನೇರವೇರಿಸಿದರು. ಬಳಿಕ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವ ರನ್ನು ಸನ್ಮಾನಿಸಲಾಯಿತು. ಚಾಮುಂಡ ರಾಯ ಸಭಾಮಂಟಪದ ಮುಂಭಾಗ ದಿಂದ ಭಂಡಾರ ಬಸದಿಯ ಸುತ್ತಲೂ ಮೆರವಣ ಗೆ ಮಾಡಿ ಸಭಾಮಂಟಪಕ್ಕೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ ಅಪೂರ್ವ ಸಾಗರ ಮಹಾರಾಜರು, ಅಖಿಲ ಭಾರತ ವರ್ಷಿಯಾ ದಿಗಂಬರ ಜೈನ ಶಾಸ್ತ್ರೀಯ ಪರಿಷತ್ತಿನ ಅಧ್ಯಕ್ಷ ಡಾ. ಶ್ರೇಯಾಂಶ್‍ಕುಮಾರ್ ಬಡೌತ್, ಪರಿ ಷತ್ತಿನ ಮಹಾಮಂತ್ರಿಗಳಾದ ಜಯಕುಮಾರ್ ನಿಶಾಂತ್, ಪಂಡಿತ್ ವಿನೋದ್ ರಿಜ್ವಾನ್ಸ್ ಸೇರಿದಂತೆ 150ಕ್ಕೂ ಹೆಚ್ಚು ವಿದ್ವಾಂಸರು ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು.

Translate »