ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ
ಹಾಸನ

ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ

June 8, 2018

ಹಾಸನ: ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪಧವೀದರರ ಕ್ಷೇತ್ರದ, ನೈಋತ್ಯ ಶಿಕ್ಷಕರ ಕ್ಷೇತ್ರದ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾ ವಣೆಯ ಮತದಾನವು ಜೂ. 8ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ 2,801 ಪುರುಷರು ಹಾಗೂ 1,476 ಮಹಿಳೆಯರು ಸೇರಿ ಒಟ್ಟಾರೆ 4,277 ಮತದಾರರು ಮತದಾನವನ್ನು ಮಾಡಲಿದ್ದಾರೆ. ಚುನಾವಣೆಯಲ್ಲಿ ನೈರುತ್ಯ ಪದವೀಧರರ ಕ್ಷೇತ್ರದ, ನೈಋತ್ಯ ಶಿಕ್ಷಕರ ಕ್ಷೇತ್ರದ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರುವವರು ಮಾತ್ರ ಮತದಾರರಾಗಿರುತ್ತಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರ, ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು, ಕ್ಷೇತ್ರವ್ಯಾಪ್ತಿ ಮೈಸೂರು, ಮಂಡ್ಯ ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು. ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ.

ಜಿಲ್ಲೆಯಲ್ಲಿ ಚುನಾವಣಾ ಸಂಬಂದ 10 ಮತಗಟ್ಟೆ ಗಳನ್ನು ತೆರೆಯಲಾಗಿದ್ದು ಬೇಲೂರು ವ್ಯಾಪ್ತಿಯಲ್ಲಿ ಮಿನಿ ವಿಧಾನಸೌಧ ಕಟ್ಟಡದಲ್ಲಿ ಮತಗಟ್ಟೆ ಕೇಂದ್ರ ಸ್ಥಾಪಿಸ ಲಾಗಿದೆ. ಇದರಲ್ಲಿ 185 ಪುರುಷ ಮತದಾರರು, 80 ಮಹಿಳಾ ಮತದಾರರು. ಅರಸೀಕೆರೆಯಲ್ಲಿ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 506 ಪುರುಷ ಮತದಾರರು, 181 ಮಹಿಳಾ ಮತದಾರರು. ಚನ್ನರಾಯ ಪಟ್ಟಣದಲ್ಲಿ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 351 ಪುರುಷ ಮತದಾರರು, 155 ಮಹಿಳಾ ಮತದಾರರು ಇದ್ದಾರೆ.

ಹಾಸನ ಈಸ್ಟ್‍ನಲ್ಲಿ ಸೆಂಟೆನರಿ ಹಾಲ್ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಇದರಲ್ಲಿ 213 ಪುರುಷ ಮತದಾರರು, 193 ಮಹಿಳಾ ಮತದಾರರು. ಹಾಸನ ವೆಸ್ಟ್‍ನಲ್ಲಿ ಜಿಮ್ನಾಸ್ಟಿಕ್ ಹಾಲ್ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 346 ಪುರುಷ ಮತದಾರರು, 252 ಮಹಿಳಾ ಮತದಾರರು. ಹಾಸನ ಗ್ರಾಮಾಂತರದಲ್ಲಿ ಕೊಠಡಿ ಸಂಖ್ಯೆ 1 ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 510 ಪುರುಷ ಮತದಾರರು, 291 ಮಹಿಳಾ ಮತದಾರರು. ಆಲೂರಿನಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಇದರಲ್ಲಿ 73 ಪುರುಷ ಮತದಾರರು, 25 ಮಹಿಳಾ ಮತದಾರರು ಇದ್ದಾರೆ.

ಸಕಲೇಶಪುರದಲ್ಲಿ ಕೋರ್ಟ್ ಹಾಲ್, ಮಿನಿ ವಿಧಾನಸೌಧ ಕಟ್ಟಡದಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾ ಗಿದ್ದು 113 ಪುರುಷ ಮತದಾರರು, 72 ಮಹಿಳಾ ಮತದಾರರು. ಅರಕಲಗೂಡಿನಲ್ಲಿ ಮಿನಿ ವಿಧಾನಸೌಧ ಕಟ್ಟಡದಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 272 ಪುರುಷ ಮತದಾರರು, 122 ಮಹಿಳಾ ಮತದಾರರು ಇದ್ದಾರೆ. ಹೊಳೆನರಸೀಪುರದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಕಚೇರಿ ಸಭಾಂಗಣದಲ್ಲಿ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 232 ಪುರುಷ ಮತದಾರರು, 105 ಮಹಿಳಾ ಮತದಾರರು ಹಕ್ಕನ್ನು ಹೊಂದಿದ್ದಾರೆ.

Translate »