ಸಹಕಾರ ಸಂಘಗಳ ಚುನಾವಣೆಗೆ ತರಬೇತಿ ಕಾರ್ಯಾಗಾರ
ಹಾಸನ

ಸಹಕಾರ ಸಂಘಗಳ ಚುನಾವಣೆಗೆ ತರಬೇತಿ ಕಾರ್ಯಾಗಾರ

June 8, 2018

ಹಾಸನ: ಚುನಾವಣೆಗೆ ಅಗತ್ಯವಿರುವ ಮತದಾರರ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು, ಚುನಾವಣೆಯ ಅಗತ್ಯವಿರುವ ಸಹಕಾರ ಸಂಘಗಳ ಕಾನೂನಿನ ತಿದ್ದುಪಡಿಗಳನ್ನು ತಮ್ಮ ಸಹಕಾರ ಸಂಘ ಗಳಿಗೆ ಅಳವಡಿಸಿಕೊಂಡು ಅದಕ್ಕೆ ತಕ್ಕಂತಹ ಕಾರ್ಯಕ್ರಮ ರೂಪಿಸಿ ಜಾರಿ ಗೊಳಿಸುವಂತಾಗ ಬೇಕು ಎಂದು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಆರ್. ಲೋಕೇಶ್ ಹೇಳಿದರು.

ನಗರದ ಹೆಚ್‍ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯ ಹೆಚ್.ಡಿ.ದೇವೇಗೌಡ ರೈತ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಗಮ ಬೆಂಗಳೂರು, ಹಾಸನ ಜಿಲ್ಲಾ ಸಹಕಾರ ಒಕ್ಕೂಟ ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹಾಸನ ಜಿಲ್ಲೆಯ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ/ ಕಾರ್ಯದರ್ಶಿಗಳಿಗೆ ಸಹಕಾರ ಚುನಾವಣೆ ಕುರಿತ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮಾತನಾಡಿ, ಇಂದಿನ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಸಲಹೆ ಮತ್ತು ಮಾರ್ಗದರ್ಶನವನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಮನವಿ ಮಾಡಿದರು. ಚುನಾವಣೆಗಳು ಯಾವುದೇ ಲೋಪವಿಲ್ಲದಂತೆ, ಯಾವುದೇ ತಾರತಮ್ಯವಿಲ್ಲದೇ ಸೂಸೂತ್ರವಾಗಿ ನಡೆಸಬೇಕು ಎಂದರು.

ತರಬೇತಿಯಲ್ಲಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆರ್.ಲೋಕೇಶ್ ಅವರು, ಸಹಕಾರ ಚುನಾವಣೆಗೆ ಬೇಕಾದ ಸಿದ್ಧತೆ ಕುರಿತಂತೆ, ಸಹಕಾರ ಸಂಘಗಳ ಉಪನಿಬಂಧಕರಾದ ನಾಗೇಶ್ ಎಸ್.ಡೋಂಗ್ರೆ ಅವರು ಸಹಕಾರ ಸಂಘಗಳಲ್ಲಿನ ಕಾನೂನಿನಲ್ಲಾದ ಇತ್ತೀಚಿನ ಕಾಯ್ದೆ ಮತ್ತು ತಿದ್ದುಪಡಿಗಳ ಕುರಿತಂತೆ ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಶಿಕ್ಷಕರಾದ ಯಶಸ್ಸ್, ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಒಕ್ಕೂಟದ ನಿರ್ದೇಶಕÀ ಪದ್ಮರಾಜ್, ವ್ಯವ ಸ್ಥಾಪಕರಾದ ಕೇಶವಪ್ರಸಾದ್ ಹಾಜರಿದ್ದರು.

Translate »