ಮಹಾರಾಜ ಕಾಲೇಜು ಆವರಣದಲ್ಲಿ 150 ಗಿಡಗಳನ್ನು ನೆಟ್ಟು ಬಿಎಐನಿಂದ ವಿಶ್ವ ಪರಿಸರ ದಿನಾಚರಣೆ
ಮೈಸೂರು

ಮಹಾರಾಜ ಕಾಲೇಜು ಆವರಣದಲ್ಲಿ 150 ಗಿಡಗಳನ್ನು ನೆಟ್ಟು ಬಿಎಐನಿಂದ ವಿಶ್ವ ಪರಿಸರ ದಿನಾಚರಣೆ

June 8, 2018

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಬಿಐಎ) ಮೈಸೂರು ಕೇಂದ್ರವು ಪರಿಸರ ಮಾಸಾಚರಣೆ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಗುರುವಾರ ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು.

ಕಾಲೇಜು ಆವರಣದಲ್ಲಿ ನೇರಳೆ, ಹೊಂಗೆ, ಸಂಪಿಗೆ ಸೇರಿದಂತೆ 150 ಗಿಡಗಳನ್ನು ನೆಡಲಾಯಿತು. ಜೂ.15ರಂದು ಕೂಡ ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ಆವರಣದಲ್ಲಿ ವಿವಿಧ ಜಾತಿಯ 150 ಗಿಡಗಳನ್ನು ನೆಡಲಾಗುವುದು ಎಂದು ಕಾರ್ಯಕ್ರಮ ಸಂಚಾಲಕ ನಾಗರಾಜ ಭೈರಿ ತಿಳಿಸಿದರು.

ಇಂದಿನ ಗಿಡ ನೆಡುವ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಸಿದ್ದರಾಜು, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರದ ಛೇರ್ಮನ್ ಸುಬ್ರಹ್ಮಣ್ಯರಾವ್, ಕಾರ್ಯದರ್ಶಿ ಅಜಿತ್ ನಾರಾಯಣ್, ಮೈಸೂರು ಜಿಲ್ಲಾ ಚಾರಿಟಬಲ್ ಟ್ರಸ್ಟ್ ಛೇರ್ಮನ್ ಬದರಿನಾಥ್, ವಿಶ್ವ ಪರಿಸರ ದಿನಾಚರಣೆ ಸಮಿತಿ ಅಧ್ಯಕ್ಷ ಜೆ.ವಿ.ಆರ್.ನಯಿಧ್ರುವ, ಕಾರ್ಯದರ್ಶಿ ಸಿ.ಡಿ.ಕೃಷ್ಣ, ಕಾರ್ಯಕ್ರಮ ಸಂಚಾಲಕ ನಾಗರಾಜ ಭೈರಿ, ಹಿರಿಯ ಸದಸ್ಯ ಕೆ.ಶ್ರೀರಾಂ, ಸ್ಫೂರ್ತಿ ಅಧ್ಯಕ್ಷೆ ಶ್ವೇತಾ ದಿನೇಶ್ ಇನ್ನಿತರರು ಪಾಲ್ಗೊಂಡಿದ್ದರು.

Translate »